ಸುದ್ದಿಮೂಲ ವಾರ್ತೆ ಬೆಂಗಳೂರು, ಅ.15:
ಸರ್ಕಾರಿ ನೌಕರರ ತುಟ್ಟಿಿಭತ್ಯೆೆಯನ್ನು (ಡಿಎ) ಶೇ.2ರಷ್ಟು ಹೆಚ್ಚಿಿಸಿ ರಾಜ್ಯ ಸರ್ಕಾರ ಬುಧವಾರ ಆದೇಶ ಹೊರಡಿಸಿದೆ.
ತುಟ್ಟಿಿ ಭತ್ಯೆೆ ಹೆಚ್ಚಳ ಮಾಡುವ ಮೂಲಕ ನೌಕರರಿಗೆ ದೀಪಾವಳಿಯ ಕೊಡುಗೆ ನೀಡಿದೆ. ರಾಜ್ಯ ಸರ್ಕಾರಿ ನೌಕರರಿಗೆ ಪರಿಷ್ಕೃತ ತುಟ್ಟಿಿಭತ್ಯೆೆ ಕಳೆದ ಜುಲೈ 1ರಿಂದ ಅನ್ವಯವಾಗಲಿದೆ. ಮೂಲ ವೇತನದ ಶೇ.12.25 ರಿಂದ ಶೇ.14.25ಕ್ಕೆೆ ಪರಿಷ್ಕರಿಸಿ ಆದೇಶಿಸಿದೆ. ಕೇಂದ್ರ ಸರ್ಕಾರ ನೌಕರರಿಗೆ ತುಟ್ಟಿಿಭತ್ಯೆೆ ಹೆಚ್ಚಳ ಬಳಿಕ ರಾಜ್ಯ ಸರ್ಕಾರ ಡಿಎಯನ್ನು ಪರಿಷ್ಕರಿಸುವ ಸಂಪ್ರದಾಯವಿದೆ.
ಇತ್ತೀಚೆಗೆ ಕೇಂದ್ರ ಸರ್ಕಾರವು ತನ್ನ ನೌಕರರಿಗೆ ಶೇ.3ರಷ್ಟು ಡಿಎ ಹೆಚ್ಚಳ ಮಾಡಿತ್ತು. ಇದೇ ರೀತಿ ಶೇ.3ರಷ್ಟು ತುಟ್ಟಿಿಭತ್ಯೆೆ ಹೆಚ್ಚಿಿಸುವಂತೆ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್.ಷಡಾಕ್ಷರಿ ಮನವಿ ಮಾಡಿದ್ದರು. ಇದರಂತೆ ಶೇ.2ರಷ್ಟು ಡಿಎ ಹೆಚ್ಚಳಕ್ಕೆೆ ಮುಖ್ಯಮಂತ್ರಿಿ ಸಿದ್ದರಾಮಯ್ಯ ಅನುಮೋದನೆ ನೀಡಿದ್ಧಾಾರೆ. ತುಟ್ಟಿಿಭತ್ಯೆೆ ಹೆಚ್ಚಳಕ್ಕೆೆ ಷಡಾಕ್ಷರಿ ರಾಜ್ಯ ಸರ್ಕಾರಕ್ಕೆೆ ಧನ್ಯವಾದ ಸಲ್ಲಿಸಿದ್ದಾರೆ.