ಸುದ್ದಿಮೂಲ ವಾರ್ತೆ ಕೊಪ್ಪಳ, ಜ.21:
ಈ ಸರ್ಕಾರ ಕಣ್ಣಿಿದ್ದೂ ಕುರುಡಾದ ಸರ್ಕಾರ ಮತ್ತು ಕರುಣೆ ಇಲ್ಲದ ಸರ್ಕಾರ ಎಂದು ಈಡಿಗ ಸಮಾಜದ ಸ್ವಾಾಮೀಜಿ ಶ್ರೀಪ್ರಣವಾನಂದ ಸ್ವಾಾಮಿಗಳು ಕಟುವಾಗಿ ಟೀಕಿಸಿದರು.
ಮುಖ್ಯಮಂತ್ರಿಿ ಸಿದ್ದರಾಮಯ್ಯನವರು ಅಹಿಂದ ಹೆಸರಿನಲ್ಲಿ ಅಧಿಕಾರಕ್ಕೆೆ ಬಂದಿದ್ದರೂ, ಕೇವಲ ಒಂದು ಧರ್ಮ ಮತ್ತು ಜಾತಿಗೆ ಸೀಮಿತವಾಗಿ ಕೆಲಸ ಮಾಡುತ್ತಿಿದ್ದಾಾರೆ ಎಂದು ಆರೋಪಿಸಿದರು.
ೆಬ್ರವರಿ 12ರಂದು ಬೆಂಗಳೂರಿನ ಫ್ರೀೀಡಂ ಪಾರ್ಕ್ನಲ್ಲಿ ಈಡಿಗ ಸಮುದಾಯದ ಬೃಹತ್ ಶಕ್ತಿಿ ಪ್ರದರ್ಶನ ನಡೆಯಲಿದೆ. ಈ ಹೋರಾಟದಲ್ಲಿ ಸ್ವಾಾಮೀಜಿಯವರು ಮತ್ತು ಇತರ ಹಿಂದುಳಿದ ವರ್ಗಗಳ ಮಠಾಧೀಶರ ಸಹಕಾರದೊಂದಿಗೆ ಉಪವಾಸ ನಡೆಸಲಾಗುವುದು ಎಂದು ಹೇಳಿದರು.
ಈಡಿಗ ಸಮುದಾಯದ ಸಚಿವರು ಮತ್ತು ಶಾಸಕರು ರಾಜಕೀಯ ಒತ್ತಡಕ್ಕೆೆ ಮಣಿದು ಮೌನವಾಗಿದ್ದಾಾರೆ. ಈ ಮೌನ ಮುರಿದು ಸಮುದಾಯದ ಪರವಾಗಿ ಮಾತನಾಡದಿದ್ದರೆ, ಮುಂದಿನ ದಿನಗಳಲ್ಲಿ ಅವರ ಕ್ಷೇತ್ರಗಳಲ್ಲೇ ಪಾದಯಾತ್ರೆೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಅಹಿಂದ ಹೆಸರಿನಲ್ಲಿ ಅಧಿಕಾರಕ್ಕೆೆ ಬಂದ ಸಿದ್ದರಾಮಯ್ಯ ಇಂದು ಕೇವಲ ಒಂದು ಧರ್ಮ ಮತ್ತು ಜಾತಿಗೆ ಸೀಮಿತವಾಗಿ ಕೆಲಸ ಮಾಡುತ್ತಿಿದ್ದಾಾರೆ. ಅವರು ಸ್ವಜಾತಿ ನಾಯಕರಿಗೆ ಮಾತ್ರ ಸೀಮಿತವಾಗಿದ್ದಾಾರೆ. ಸಮುದಾಯದ ಪರವಾಗಿ ಮಾತನಾಡದ ಈಡಿಗ ಸಚಿವರು ಮತ್ತು ಶಾಸಕರಿಗೆ ಧಮ್ಮಿಿದ್ದರೆ ನಮಗೆ ಈಡಿಗರ ವೋಟು ಬೇಡ ಎಂದು ಹೇಳಲಿ ಎಂದು ಸವಾಲು ಹಾಕಿದರು.
ಈಡೀಗ ಕುಲಕಸುಬನ್ನು ಈ ಹಿಂದೆ ಅಬಕಾರಿ ಸಚಿವರಾಗಿದ್ದಾಾಗ ಸಿದ್ದರಾಮಯ್ಯನವರು ಈಡಿಗರ ಕುಲಕಸುಬನ್ನು ಬಂದ್ ಮಾಡುವ ಮೂಲಕ ಸಮುದಾಯದ ಮಕ್ಕಳ ಭವಿಷ್ಯಕ್ಕೆೆ ಅನ್ಯಾಾಯ ಮಾಡಿದ್ದಾಾರೆ ಎಂದರು.
ಸಿದ್ದರಾಮಯ್ಯ ದೇವರಾಜು ಅರಸು ರೆಕಾರ್ಡ್ ಬ್ರೇೇಕ್ ಮಾಡಿದ್ದೇನೆ ಎಂಬ ಗುಂಗಿನಲ್ಲಿದ್ದಾಾರೆ. ಹಿಂದುಳಿದ ವರ್ಗಗಳ ಸಿಎಂ ಆಗಿ ಒಂದು ಜಾತಿಗೆ ಸೀಮಿತವಾಗಿದ್ದಾಾರೆ. ಇವರು ದೇವರಾಜ ಅರಸು ಆಗುವುದಕ್ಕೆೆ ಆಗೋದಿಲ್ಲ. ದೇವರಾಜ ಅರಸು ರೆಕಾರ್ಡ್ ಬ್ರೇೇಕ್ ಆದ ದಿನದಿಂದಲೇ ಈಡೀಗ ಸಮುದಾಯ ಪಾದಯಾತ್ರೆೆ ಆರಂಭ ಮಾಡಿದೆ.ಅತಿ ಹಿಂದುಳಿದ ವರ್ಗಗಳ ಹೆಸರು ಹೇಳಿಕೊಂಡು ಅಧಿಕಾರಕ್ಕೆೆರಿರುವ ನಾಯಕನಿಂದಲೇ ಅನ್ಯಾಾಯ ಎಂದು ವಾಗ್ದಾಾಳಿ ನಡೆಸಿದರು.
ಸರ್ಕಾರ ಕಣ್ಣಿದ್ದು ಕುರುಡಾಗಿದೆ- ಪ್ರಣವಾನಂದ ಸ್ವಾಮಿ

