ಸುದ್ದಿಮೂಲ ವಾರ್ತೆ ಬೆಂಗಳೂರು, ಜ.07:
ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರದ ಯಲಹಂಕ ಬಳಿಯ ಕೋಗಿಲು ಬಡಾವಣೆಯ ವಾಸಿಂ ಹಾಗೂ ಕೀರ್ ಕಾಲೋನಿಯಲ್ಲಿ ತೆರವುಗೊಳಿಸಿರುವ ಮನೆಗಳಲ್ಲಿ ವಾಸವಿದ್ದವರಿಗೆ ತಾತ್ಕಾಾಲಿಕ ಪುನರ್ವಸತಿ ಕಲ್ಪಿಿಸಲಾಗಿದ್ದು, ಅಗತ್ಯವಿರುವ ಊಟ ಮತ್ತು ವೈದ್ಯಕೀಯ ಸೌಲಭ್ಯಗಳನ್ನು ಕಲ್ಪಿಿಸಲಾಗಿದೆ ಎಂದು ರಾಜ್ಯ ಸರ್ಕಾರ ಹೈಕೋರ್ಟ್ಗೆ ಮಾಹಿತಿ ನೀಡಿದೆ.
ಕೋಗಿಲು ಬಡಾವಣೆ ನಿವಾಸಿ ಜೈಬ ತಬಸಂ, ರೆಹಾನಾ ಮತ್ತು ಆರ್ೀ ಬೇಗಂ ಎಂಬುವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿಿ ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಾಯಮೂರ್ತಿ ವಿಭು ಬಖ್ರು ಮತ್ತು ನ್ಯಾಾಯಮೂರ್ತಿ ಸಿ.ಎ. ಪೂಣಚ್ಚ ಅವರಿದ್ದ ನ್ಯಾಾಯಪೀಠಕ್ಕೆೆ ಸರ್ಕಾರದ ಪರ ವಕೀಲರು ಈ ಮಾಹಿತಿ ನೀಡಿದರು.
ವಿಚಾರಣೆ ಪ್ರಾಾರಂಭವಾಗುತ್ತಿಿದ್ದಂತೆ ನ್ಯಾಾಯಪೀಠ, ಅರ್ಜಿದಾರರು ಕಳೆದ 25 ವರ್ಷಗಳಿಂದ ನೆಲೆಸಿರುವುದಾಗಿ ತಿಳಿಸುತ್ತಿಿದ್ದಾರೆ ಎಂದು ಪ್ರಶ್ನಿಿಸಿತು. ಇದಕ್ಕೆೆ ಅಡ್ವೋೋಕೇಟ್ ಜನರಲ್, ಈ ಹೇಳಿಕೆ ಸಂಪೂರ್ಣ ತಪ್ಪುು ಮಾಹಿತಿಯಾಗಿದೆ. ಯಾವ್ಯಾಾವ ಮನೆ ಯಾವ ವರ್ಷದಲ್ಲಿ ನಿರ್ಮಾಣವಾಗಿದೆ ಎಂಬುದಕ್ಕೆೆ ಸಂಬಂಧಿಸಿದಂತೆ ಸ್ಯಾಾಟಲೈಟ್ನಿಿಂದ ಲಭ್ಯವಿರುವ ೆಟೋಗಳನ್ನು ಒದಗಿಸಲಾಗುವುದು ಎಂದು ತಿಳಿದರು.
ಅಲ್ಲದೇ, ತೆರವುಗೊಳಿಸಿರುವ ಸ್ಥಳವು ಕಲ್ಲು ಕ್ವಾಾರಿಯಾಗಿದ್ದ ನಗರದ ಘನತ್ಯಾಾಜ್ಯ ವಿಲೇವಾರಿಗೆ ಮೀಸಲಾಗಿತ್ತು. ಇದು ಕೊಳಚೆ ಪ್ರದೇಶವೂ ಅಲ್ಲ. ಇಲ್ಲಿ ಮನೆಗಳ ನಿರ್ಮಾಣವು ಅಂತರ್ಜಲದ ಮೇಲೆ ದುಷ್ಪರಿಣಾಮ ಬೀರಲಿದೆ. ಹೀಗಾಗಿ ಸುಪ್ರೀೀಂ ಕೋರ್ಟ್ ಆದೇಶ ಈ ಸ್ಥಳಕ್ಕೆೆ ಅನ್ವಯವಾಗುವುದಿಲ್ಲ. ಅಲ್ಲದೇ, ವಸತಿ ರಹಿತರಿಗೆ ಪ್ರತ್ಯೇಕ ವ್ಯವಸ್ಥೆೆ ಮಾಡುವುದಕ್ಕಾಾಗಿ ನಗರದಲ್ಲಿ ಮೂರು ಸ್ಥಳಗಳನ್ನು ಗುರುತಿಸಲಾಗಿದೆ ಎಂದು ವಿವರಿಸಿದರು.
ಅರ್ಜಿದಾರರ ಪರ ವಕೀಲರು, ಹಲವು ವರ್ಷಗಳಿಂದ ಇಲ್ಲಿ ಜನ ವಾಸಿಸುತ್ತಿಿದ್ದಾರೆ, ಅವರಿಗೆ ಯಾವುದೇ ನೋಟಿಸ್ ಮತ್ತು ಸೂಚನೆ ನೀಡದೇ ಏಕಾಏಕಿ ತೆರವು ಕಾರ್ಯ ಹಮ್ಮಿಿಕೊಳ್ಳಲಾಗಿತ್ತು. ಅವರಿಗೆ ಅಗತ್ಯ ಪುನರ್ವಸತಿ ಕಲ್ಪಿಿಸಬೇಕಾಗಿದೆ ಎಂದು ತಿಳಿಸಿದರು.
ವಾದ ಆಲಿಸಿದ ನ್ಯಾಾಯಪೀಠ, ಕೊಗಿಲು ಬಡಾವಣೆ ಬಳಿಯಲ್ಲಿ ಮನೆಗಳ ತೆರವಿಗೆ ಸಂಬಂಧಿಸಿದಂತೆ ಮುಂದಿನ ಎರಡು ವಾರಗಳಲ್ಲಿ ಸಮಗ್ರ ವಸ್ತುಸ್ಥಿಿತಿ ವರದಿ ಸಲ್ಲಿಸಬೇಕು ಎಂದು ಸೂಚನೆ ನೀಡಿ ವಿಚಾರಣೆಯನ್ನು ಜನವರಿ 22ಕ್ಕೆೆ ಮುಂದೂಡಿತು.
ಬಾಕ್ಸ್
ಕೋಗಿಲು ಶೆಡ್ ನಿರ್ಮಾಣ: ನಾಲ್ವರ ವಿರುದ್ಧ ಎ್ಐಆರ್
ಕೋಗಿಲು ಲೇಔಟ್ನಲ್ಲಿ ಸರ್ಕಾರಿ ಜಾಗ ಒತ್ತುವರಿ ಮಾಡಿ ಮನೆಗಳ ನಿರ್ಮಾಣಕ್ಕೆೆ ಪ್ರಚೋದನೆ ನೀಡಿ ಸಾರ್ವಜನಿಕರಿಂದ ಹಣ ವಸೂಲಿ ಮಾಡಿದ ಆರೋಪದಡಿ ನಾಲ್ವರ ವಿರುದ್ಧ ಯಲಹಂಕ ಪೊಲೀಸ್ ಠಾಣೆಯಲ್ಲಿ ಎ್ಐಆರ್ ದಾಖಲಾಗಿದೆ.
ಬೆಂಗಳೂರು ಘನತ್ಯಾಾಜ್ಯ ನಿರ್ವಹಣಾ ಲಿಮಿಟೆಡ್ ಇಂಜಿನಿಯರ್ ಸಂತೋಷ್ ಕುಮಾರ್ ಅವರು ನೀಡಿದ ದೂರಿನ ಅನ್ವಯ ವಿಜಯ್, ವಾಸಿಂ ಉಲ್ಲಾ ಬೇಗ್, ಮುನಿ ಆಂಜಿನಪ್ಪ ಹಾಗೂ ರಾಬಿನ್ ಎಂಬುವವರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಬೆಂಗಳೂರು ನಗರ ಜಿಲ್ಲಾಧಿಕಾರಿಗಳ ಆದೇಶದ ಪ್ರಕಾರ ಕೋಗಿಲು ಗ್ರಾಾಮದ ಸರ್ವೆ ನಂಬರ್ 99ರಲ್ಲಿರುವ 14 ಎಕರೆ 36 ಗುಂಟೆ ಜಮೀನನ್ನು ಬಿಬಿಎಂಪಿ ಘನತ್ಯಾಾಜ್ಯ ನಿರ್ವಹಣೆಗೆ ಹಸ್ತಾಾಂತರಿಸಲಾಗಿತ್ತು. ಆ ಜಾಗದಲ್ಲಿ ಬಯೋ ಮೆಥನೈಸೆಷನ್ ಘಟಕ, ಎಳನೀರು ಚಿಪ್ಪುು ಸಂಸ್ಕರಣೆ ಹಾಗೂ ಪ್ರಾಾಣಿ ತ್ಯಾಾಜ್ಯ ಸಂಸ್ಕರಣಾ ಘಟಕಗಳನ್ನು ನಿರ್ಮಿಸಲು 2023ರಲ್ಲಿಯೇ ಟೆಂಡರ್ ಪ್ರಕ್ರಿಿಯೆ ಮುಗಿದು ಕಾರ್ಯಾದೇಶ ನೀಡಲಾಗಿತ್ತು. ಆದರೆ, ಆ ಜಾಗದ ಸುಮಾರು 4 ಎಕರೆ ಪ್ರದೇಶವನ್ನು ಅಕ್ರಮವಾಗಿ ಒತ್ತುವರಿ ಮಾಡಿಕೊಂಡು ಅಲ್ಲಿ ನಿರ್ಮಿಸಲಾಗಿದ್ದ ಸುಮಾರು 160ಕ್ಕೂ ಹೆಚ್ಚು ಮನೆಗಳನ್ನು ಡಿಸೆಂಬರ್ 20ರಂದು ಜಿಲ್ಲಾಡಳಿತ ಮತ್ತು ಬಿಎಸ್ಡಬ್ಲ್ಯೂಎಂಎಲ್ ಜಂಟಿ ಕಾರ್ಯಾಚರಣೆ ನಡೆಸಿ ತೆರವುಗೊಳಿಸಿದ್ದವು.
ಆರೋಪಿಗಳು ಸ್ಥಳೀಯರಿಂದ ಹಣ ಪಡೆದು ಸರ್ಕಾರಿ ಜಾಗದಲ್ಲಿ ಅನಧಿಕೃತ ಮನೆಗಳನ್ನು ನಿರ್ಮಿಸಲು ಮತ್ತು ಅವುಗಳನ್ನು ನಿರ್ವಹಿಸಲು ಸಹಕಾರ ನೀಡುತ್ತಿಿದ್ದರು ಎಂಬ ಗಂಭೀರ ಆರೋಪ ಕೇಳಿಬಂದಿದ್ದು, ನಾಲ್ವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ದೂರಿನಲ್ಲಿ ಉಲ್ಲೇಖಿಸಲಾಗಿದೆ. ಯಲಹಂಕ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.

