ಶಿಕ್ಷಕರ ಸಂಘದ ವತಿಯಿಂದ ಶೈಕ್ಷಣಿಕ ಕಾರ್ಯಗಾರ ಶೈಕ್ಷಣಿಕ ಸಮ್ಮೇಳನ!
40 ಜನ ಶಿಕ್ಷಕರಿಗೆ ಸಾವಿತ್ರಿ ಬಾ ಫುಲೆ ಪ್ರಶಸ್ತಿ ಪ್ರಧಾನ!!
ಸರಕಾರಿ ಶಾಲೆ ಮಕ್ಕಳು ದೇಶದ ಆಸ್ತಿ:ರಮೇಶ ದೇವದುರ್ಗ
ಜೇವರ್ಗಿ: ಪಟ್ಟಣದ ಸಜ್ಜನ್ ಕಲ್ಯಾಣ ಮಂಟಪದಲ್ಲಿ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕ ಘಟಕದ ವತಿಯಿಂದ ಶೈಕ್ಷಣಿಕ ಕಾರ್ಯಗಾರ ಶೈಕ್ಷಣಿಕ ಸಮ್ಮೇಳನ ಮತ್ತು ಸಾವಿತ್ರಿ ಬಾ ಪುಲೆ ಪ್ರಶಸ್ತಿ ಪ್ರಧಾನ ಸಮಾರಂಭ ಜರಗಿತು.
ಕಾರ್ಯಕ್ರಮವನ್ನು ಪರ ಪೂಜ್ಯ ಡಾ.ಮು.ನಿ.ಪ್ರ. ಶಿವಾನಂದ ಮಹಾಸ್ವಾಮಿಗಳು ವಿರಕ್ತಮಠ ಸೊನ್ನ ಸಾನಿಧ್ಯ ವಹಿಸಿದ್ದರು.
ತಾಲೂಕ ಪ್ರಾಥಮಿಕ ಶಾಲಾ ಶಿಕ್ಷಕರ ನೌಕರರ ಸಂಘದ ಅಧ್ಯಕ್ಷರಾದ ಮರೆಪ್ಪ ಡಿ ಹೊಸಮನಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಉಪನ್ಯಾಸಕರಾಗಿ ಆಗಮಿಸಿದ ಶ್ರೀ ರಮೇಶ ದೇವದುರ್ಗ ಶಿಕ್ಷಕರ ಕುರಿತಾಗಿ ವಿಶೇಷ ಉಪನ್ಯಾಸ ನೀಡಿದರು. ಸರ್ಕಾರಿ ಶಾಲೆಯಲ್ಲಿ ಓದುವ ಮಕ್ಕಳು ದೇಶದ ಸಂಪತ್ತು. ಈ ಸಂಪತ್ತನ್ನು ಉಳಿಸುವುದು ಬೆಳೆಸುವುದು ಸರಕಾರಿ ಶಾಲೆಯ ಶಿಕ್ಷಕರ ಕೈಯಲ್ಲಿ ಇದೆ ಎಂದು ಹೇಳಿದರು. ಅದಕ್ಕಾಗಿ ನಾನು ದಿನಕ್ಕೆ ಹದಿನೈದು ಗಂಟೆ ಕೆಲಸ ಮಾಡುತ್ತಿದ್ದೇನೆ. ವರ್ಷದಲ್ಲಿ 150 ದಿನಗಳು ಸರಕಾರಿ ಶಾಲೆಗಳಲ್ಲಿ ಪಾಠ ಮಾಡುತ್ತೇನೆ ಎಂದು ಹೇಳಿದರು. ಸರಕಾರಿ ಶಾಲೆ ಶಿಕ್ಷಕರು ನಿಮ್ಮ ಮಕ್ಕಳನ್ನು ಸರಕಾರಿ ಶಾಲೆಯಲ್ಲಿ ಕಲಿಸಬೇಕು ಎಂದು ಹೇಳಿದರು. ಸರ್ಕಾರ ಶಾಲೆಯಲ್ಲಿ ಓದುವ ಮಕ್ಕಳು ರೈತರ ಮಕ್ಕಳಾಗಿರುತ್ತಾರೆ ಅದಕ್ಕಾಗಿ ರೈತರ ಮಕ್ಕಳಲ್ಲಿ ದೇಶ ಕಾಯುವ ಶಕ್ತಿ ಇದೆ ದೇಶವನ್ನು ಆಳುವ ಶಕ್ತಿ ಅವರಲ್ಲಿದೆ. ಆದ್ದರಿಂದ ಅವರ ಭವಿಷ್ಯವನ್ನು ಉಜ್ವಲಗೊಳಿಸಲು ನಮ್ಮ ಸರಕಾರಿ ಶಾಲೆ ಶಿಕ್ಷಕರು ಮಕ್ಕಳ ಭವಿಷ್ಯ ರೂಪಿಸಬೇಕು. ದೇಶದ ಇತಿಹಾಸದಲ್ಲಿ ಸರಕಾರಿ ಶಾಲೆಯಲ್ಲಿ ಓದಿದ ವಿದ್ಯಾರ್ಥಿಗಳು ಉನ್ನತ ಅಧಿಕಾರಿಗಳಾಗಿ ಆಡಳಿತ ಮಾಡುತ್ತಿದ್ದಾರೆ. ಆದರಿಂದ ದಯವಿಟ್ಟು ಸರಕಾರಿ ಶಾಲೆ ಶಿಕ್ಷಕರು ನಿಮ್ಮ ಮಕ್ಕಳನ್ನು ನೀವು ಪಾಠ ಮಾಡುವ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿಸಿ ಎಂದು ಶಿಕ್ಷಕರಿಗೆ ಕಿವಿಮಾತು ಹೇಳಿದರು.
ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾ ಗ್ರಾಮೀಣ ಅಧ್ಯಕ್ಷರಾದ ಶಿವರಾಜ ಪಾಟೀಲ ರದ್ದೇವಡಗಿ,ವಿಜಯ ಕುಮಾರ್ ಹಿರೇಮಠ, ಶಂಕರ್ ಕಟ್ಟಿ ಸಂಗಾವಿ, ಶಿವರಾಜ್ ಪಾಟೀಲ್ ಪಿಎಸ್ಐ ಜೇವರ್ಗಿ, ಕ್ಷೇತ್ರ ಶಿಕ್ಷಣಾಧಿಕಾರಿ ಹೃಷಿಕೇಶ ದಂತಕಾಳೆ, ಎಸ್ ಟಿ ಬಿರಾದಾರ, ಗಿರೀಶ್ ಕಡ್ಲೆವಾಡ, ಮಲ್ಲಯ್ಯ ಗುತ್ತೇದಾರ, ಗುಡುಲಾಲ್ ಶೇಖ್, ಎಸ್ ಕೆ ಬೆರೆದಾರ, ಕೆಂಚಪ್ಪ ಧೋಣಿ, ಬಸವರಾಜ್ ತೇಲ್ಕರ್, ಭೀಮರಾಯ ಬೀಳವಾರ, ಬಸವರಾಜ ಬಂಡಿ, ವಿಜಯ ಕುಮಾರ ಬಡಿಗೇರ, ಉಮೇಶ ನೀಲೂರ,ಸೂರ್ಯಕಾಂತ್ ದ್ಯಾಮಗೊಂಡ, ಶಾಂತಪ್ಪ ಬಿರೇದಾರ, ಶ್ರೀಮತಿ ಜ್ಯೋತಿ ಮದರಿ, ಗೊಲ್ಲಾಳಪ್ಪ ಯಾತ್ನೂರ, ಶಿವಾಜಿ ವಾಗ್ಮೊರೆ, ಶರಣಬಸವೇಶ್ವರ ಹಿರೇಮಠ, ಬನ್ನಪ್ಪ ಜೋಗಿ, ತಾಲೂಕು ಮಟ್ಟದ ಪ್ರಾಥಮಿಕ ಶಾಲಾ ಶಿಕ್ಷಕರು ಹಾಗೂ ಪ್ರೌಢಶಾಲಾ ಶಿಕ್ಷಕರು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.