ಸುದ್ದಿಮೂಲ ವಾರ್ತೆ ಗಂಗಾವತಿ, ಜ.01:
ತುಮಕೂರಿನ ಸಿದ್ದಗಂಗಾ ಮಠದ ಕಿರಿಯ
ಶ್ರೀಗಳಾದ ಶ್ರೀಶಿವಸಿದ್ದೇಶ್ವರ ಸ್ವಾಾಮಿಗಳು ತಾಲ್ಲೂಕಿನ ಪ್ರಾಾಚೀನ ಕಾಲದ ಹಿರೇಬೆಣಕಲ್ ಬೆಟ್ಟದಲ್ಲಿನ ಪ್ರಾಾಚೀನ ಶಿಲಾಘೋರಿಗಳಿರುವ ತಾಣಕ್ಕೆೆ ಭೇಟಿ ನೀಡಿ ಸ್ಥಳಿಯರಿಂದ ಇದರ ಇತಿಹಾಸದ ಮಾಹಿತಿ ಪಡೆದು ಬೆರಗಾದರು.
ಗ್ರಾಾಮದಿಂದ ಸುಮಾರು ಎರಡುವರೆ ಸಾವಿರ ಮೀಟರ್ ದೂರದಲ್ಲಿರುವ ಬೆಟ್ಟಕ್ಕೆೆ ಸ್ವಾಾಮೀಜಿಗಳು ಯುವಕರೊಂದಿಗೆ ಕಾಲ್ನಡಿಗೆ ಮೂಲಕ ಅತ್ಯಂತ ದುರ್ಗಮ ಹಾದಿಯಲ್ಲಿ, ಕಲ್ಲು-ಮುಳ್ಳುಗಳ ಸಂಧಿಯನ್ನು ದಾಟಿಕೊಂಡು ಬೆಟ್ಟವನ್ನೇರಿ ಶಿಲಾಯುಗದ ಪೂರ್ವದಲ್ಲಿ ಮಾನವ ವಾಸವಿದ್ದ ಇಲ್ಲಿಯ ಶಿಲಾ ಘೋರಿಗಳನ್ನು ವೀಕ್ಷಿಸಿ ವಿಸ್ಮಯಗೊಂಡು ಶ್ರೀಗಳು ಮಾತನಾಡಿದರು.
ಇಂತಹ ಅಧ್ಬುತ ತಾಣಗಳು ರಾಜ್ಯದಲ್ಲಿರುವುದು ನಮ್ಮ ಭಾಗ್ಯವೇ ಸರಿ. ಇಂತಹ ತಾಣಗಳ ಅಭಿವೃದ್ಧಿಿಗೆ ಸರ್ಕಾರ ಹೆಚ್ಚು ಆದ್ಯತೆ ನೀಡಬೇಕು. ಸ್ಥಳೀಯರು ಸಹಕಾರ ನೀಡಬೇಕು ಎಂದು ಆಶಯ ವ್ಯಕ್ತಪಡಿಸಿದರು.
ಈ ತಾಣದಲ್ಲಿ ಮೂರು ಸಾವಿರ ವರ್ಷಗಳ ಹಿಂದೆಯೇ ಈ ಭಾಗ ಆದಿ ಮಾನವ ವಸತಿ ನೆಲೆಯಾಗಿತ್ತು ಎಂಬುವುದಕ್ಕೆೆ ಸಾಕಷ್ಟು ಪುರಾವೆ ಸಿಕ್ಕಿಿವೆ.ಗ್ರಾಾಮದಿಂದ ಅನತಿ ದೂರದಲ್ಲಿರವ ಬೆಟ್ಟದ ಮೇಲೆ ಶಿಲಾಯುಗದ ಅಥವಾ ಕಬ್ಬಿಿಣದ ಯುಗದ ಪೂರ್ವದಲ್ಲಿ ಮಾನವ ವಾಸ ಮಾಡಿದ್ದ ಎಂಬುವುದಕ್ಕೆೆ ಈ ಶಿಲಾ ಘೋರಿಗಳು ಸಾಕ್ಷಿಯಾಗಿವೆ.
ಈ ಮೊದಲು ಸಾವಿರಾರು ಸಂಖ್ಯೆೆಯಲ್ಲಿ ಈ ಶಿಲಾ ಘೋರಿಗಳಿದ್ದವು. ಆದರೆ ಕಾಲಕ್ರಮೇಣ ದನಗಾಯಿ ಮತ್ತು ನಿಧಿಗಳ್ಳರಿಂದ ಬಹುತೇಕ ನಾಶವಾಗಿವೆ. ಕೇವಲ ಬೆರೆಳೆಣಿಕೆಯಷ್ಟು ಮಾತ್ರ ಉಳಿದಿದ್ದು, ಇವುಗಳ ಸಂರಕ್ಷಣೆಯೇ ಇದೀಗ ಸವಾಲಾಗಿದೆ. ರಾಜ್ಯ ಸರ್ಕಾರದಿಂದ ನಾನಾ ಅಭಿವೃದ್ಧಿಿ ಕೆಲಸ ನಡೆದಿವೆಯಾದರೂ ತುಂಬಾ ನಿಧಾನವಾಗಿವೆ ಎಂದು ಸ್ಥಳೀಯ ಯುವಕರು ಸ್ವಾಾಮೀಜಿಗೆ ವಿವರಣೆ ನೀಡಿದರು.
ಇದಕ್ಕೂ ಮೊದಲು ಗ್ರಾಾಮಕ್ಕೆೆ ಭೇಟಿ ನೀಡಿದ ಮಾಜಿಶಾಸಕ ಪರಣ್ಣ ಮುನವಳ್ಳಿಿ, ಆದಿಮಾನವರ ವಾಸದ ನೆಲೆ ಶಿಲಾ ಘೋರಿಗಳ ತಾಣಕ್ಕೆೆ ಭೇಟಿ ನೀಡಲು ಆಗಮಿಸಿದ ಸಿದ್ದಗಂಗಾ ಮಠದ ಕಿರಿಯ ಸ್ವಾಾಮೀಜಿ ಶಿವಸಿದ್ದೇಶ್ವರರಿಗೆ ಸ್ವಾಾಗತ ಕೋರಿದರು. ಬಳಿಕ ಗ್ರಾಾಮದಲ್ಲಿ ವೇದಿಕೆ ಕಾರ್ಯಕ್ರಮ
ಆಯೋಜಿಸಲಾಗಿತ್ತು.
ಮಾಜಿ ಶಾಸಕ ಪರಣ್ಣ ಮುನವಳ್ಳಿಿ, ಗ್ರಾಾ. ಪಂ. ಪಿಡಿಓ ಇಂದಿರಾ, ಸ್ಥಳೀಯ ಪ್ರಮುಖರಾದ ವೀರೇಶ್ ಅಂಗಡಿ, ಬಸನಗೌಡ, ಮಂಜುನಾಥ್ ದೊಡ್ಮನಿ, ಶಂಕರ್ ಬೂದಗುಂಪಿ, ಪಂಪಣ್ಣ, ವೀರಭದ್ರಪ್ಪ ಅಂಗಡಿ, ನಾಗರಾಜ್ ಡಾಣಾಪುರ್, ಹರನಾಯಕ ಇತರರಿದ್ದರು.
ಬೆಣಕಲ್ನ ಪ್ರಾಚೀನ ತಾಣಕ್ಕೆ ತುಮಕೂರಿನ ಕಿರಿಯ ಶ್ರೀಗಳು ಭೇಟಿ ಅಭಿವೃದ್ಧಿಪಡಿಸಿ, ಪ್ರವಾಸಿ ತಾಣ ಮಾಡಲು ಸರ್ಕಾರಗಳು ಮುಂದಾಗಬೇಕು

