ಸುದ್ದಿಮೂಲ ವಾರ್ತೆ
ಬೆಂಗಳೂರು, ಮೇ 23: ಬೆಂಗಳೂರಿಗೆ ಆಗಮಿಸಿರುವ ಮಧ್ಯಪ್ರದೇಶದ ಪಿಂಡೋನಿಯಾ ಗ್ರಾಮದಿಂದ ಸೈಕ್ಲಿಸ್ಟ್ ದಿಲೀಪ್ ಚಂದ್ರ ಸೌರಾಷ್ಟ್ರಿಯ ಅವರು ಕರ್ನಾಟಕದ ಗೌರವಾನ್ವಿತ ರಾಜ್ಯಪಾಲರಾದ ಶ್ರೀ ಥಾವರ್ಚಂದ್ ಗೆಹ್ಲೋಟ್ ಅವರನ್ನು ಭೇಟಿ ಮಾಡಿದರು.
ದಿಲೀಪ್ ಚಂದ್ರ ಅವರು ಭಾರತದಾದ್ಯಂತ ಯುವಕರನ್ನು ಸಬಲೀಕರಣಗೊಳಿಸುವ ಮತ್ತು ಸಾಮಾಜಿಕ ಜಾಗೃತಿ ಮೂಡಿಸುವ ಗುರಿಯನ್ನು ಹೊಂದಿದ್ದು, 2023 ರ ಮಾರ್ಚ್ 25 ರಂದು ತನ್ನ ಸ್ಪೂರ್ತಿದಾಯಕ ಸೈಕಲ್ ಪ್ರಯಾಣವನ್ನು ಆರಂಭಿಸಿದ ಅವರು ಆರು ತಿಂಗಳ ಅವಧಿಯಲ್ಲಿ ಇಡೀ ದೇಶವನ್ನು ಸುತ್ತುವ ಮಹತ್ವಾಕಾಂಕ್ಷೆಯ ಗುರಿಯನ್ನು ಹೊಂದಿದ್ದಾರೆ.
ರಾಜ್ಯಪಾಲರು ದಿಲೀಪ್ ಅವರ ಧ್ಯೇಯೋದ್ದೇಶಕ್ಕೆ ತಮ್ಮ ಬೆಂಬಲ ಮತ್ತು ಶುಭಾಶಯಗಳನ್ನು ವ್ಯಕ್ತಪಡಿಸಿದರು.