ಸುದ್ದಿಮೂಲ ವಾರ್ತೆ ಯಾದಗಿರಿ, ೆ.06:
ಉತ್ತಮ ಆರೋಗ್ಯಕ್ಕೆೆ ವಿವಿಧ ಕ್ರೀೆಡೆಗಳು ಔಷಧಿವಿದ್ದಂತೇ, ಅದರಲ್ಲೂ ದೇಶಿ ಆಟಗಳು ಮನುಷ್ಯರನ್ನು ದೈಹಿಕವಾಗಿ ಗಟ್ಟಿಿಗೊಳಿಸುತ್ತದೆ ಎಂದು ಶಾಸಕ ಚನ್ನಾಾರೆಡ್ಡಿಿ ಪಾಟೀಲ್ ತುನ್ನೂರ ಹೇಳಿದರು.
ನಗರದ ಜಿಲ್ಲಾ ಕ್ರೀೆಡಾಂಗಣದಲ್ಲಿ ಜಿಲ್ಲಾ ಪಂಚಾಯತಿ, ಯುವ ಸಬಲೀಕರಣ ಮತ್ತು ಕ್ರೀೆಡಾ ಇಲಾಖೆ, ರಾಜ್ಯ ಸರಕಾರಿ ನೌಕರರ ಸಂಘ ಜಿಲ್ಲಾ ಶಾಖೆಯ ಸಂಯುಕ್ತಾಾಶ್ರಯದಲ್ಲಿ ಶುಕ್ರವಾರ ಆಯೋಜಿಸಿದ್ದ ಜಿಲ್ಲಾ ಮಟ್ಟದ ರಾಜ್ಯ ಸರಕಾರಿ ನೌಕರರ ಕ್ರೀೆಡಾ ಕೂಟ ಮತ್ತು ಸಾಂಸ್ಕೃತಿಕ ಸ್ಪರ್ಧೆ ಉದ್ಘಾಾಟಿಸಿ ಮಾತನಾಡಿದರು.
ಕ್ರೀಡಾ ಕ್ಷೇತ್ರ ವ್ಯಾಾಪಕವಾಗಿ ಬೆಳೆದಿದೆ. ಆಟಗಾರರು ತಮ್ಮ ಪ್ರತಿಭೆಯೊಂದಿಗೆ ರಾಜ್ಯ,ರಾಷ್ಟ್ರ ಮತ್ತು ಅಂತರರಾಷ್ಟ್ರಮಟ್ಟದಲ್ಲಿ ಸಾಧನೆ ಮಾಡಬಹುದು. ಹೀಗೆ ನಮ್ಮ ಜಿಲ್ಲೆಯ ಸರ್ಕಾರಿ ನೌಕರರು ಸಾಧನೆ ಮಾಡಲಿ ಶಾಸಕರು ಸಲಹೆ ನೀಡಿದರು.
ಕೆಲಸದ ಒತ್ತಡ ನಡುವೆ ನೌಕರರಿಗೆ ಆರೋಗ್ಯ ಕಾಪಾಡಿಕೊಳ್ಳಲು ಮತ್ತು ಚಟುವಟಿಕೆಯಿಂದ ಇರಲು ಕ್ರೀೆಡಾಕೂಟ ಆಯೋಜಿಸಿದ್ದು ಉತ್ತಮ ಕ್ರಮವಾಗಿದೆ. ಸೋಲು, ಗೆಲುವು ಸಮಾನವಾಗಿ ಸ್ವೀಕರಿಸಿ ಆಟಗಳಲ್ಲಿ ಭಾಗವಹಿಸಿ ವಿಜೇತರಾಗಿ ಎಂದು ಶಾಸಕರು ಶುಭಾಶಯ ಕೋರಿದರು.
ರಾಜ್ಯ ಸರಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ರಾಯಪ್ಪಗೌಡ ಹುಡೇದ ಮಾತನಾಡಿ, ಸದಾ ಕೆಲಸದ ಒತ್ತಡದಲ್ಲಿರುವ ಸರ್ಕಾರಿ ನೌಕರರಿಗೆ ದೈಹಿಕವಾಗಿ ಉಲ್ಲಾಸ ಹೊಂದಲು ಈ ಕ್ರೀೆಡಾಕೂಟ ಸಹಕಾರಿಯಾಗಲಿದೆ ಎಂದರು. ಮಲ್ಲಿಕಾರ್ಜುನ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಯುಡಾ ಅಧ್ಯಕ್ಷ ಬಾಬುರಾವ ಕಾಡ್ಲೂರ್, ಜಿಪಂ ಉಪಕಾರ್ಯದರ್ಶಿ ವಿಜಯಕುಮಾರ ಮಡ್ಡೆೆ, ಜಿಪಂ ಯೋಜನಾಧಿಕಾರಿ ಕುಂಬಳಯ್ಯ, ಯುವ ಸಬಲೀಕರಣ ಹಾಗೂ ಕ್ರೀಡಾಧಿಕಾರಿ ರಾಜು ಬಾವಿಹಳ್ಳಿಿ, ಸಂಘದ ಜಿಲ್ಲಾ ಉಪಾಧ್ಯಕ್ಷ ಅಶೋಕಕುಮಾರ ಕಲಾಲ್, ಗೌರವಾಧ್ಯಕ್ಷ ಯಾಮರೆಡ್ಡಿಿ ಮುಂಡಾಸ್, ಜಿಲ್ಲಾ ಕ್ರೀೆಡಾ ಕಾರ್ಯದರ್ಶಿ ಬಂಗಾರಪ್ಪ, ಪದಾಧಿಕಾರಿಗಳಾದ ರಂಗನಾಥ ನಾಯಕ, ಸಾಯಪ್ಪ ಚಂಡ್ರಕಿ, ಬಸನಗೌಡ ಪಾಟೀಲ್ ಮತ್ತು ಬಿಇಓ ವೀರಪ್ಪ,ತಾಲೂಕು ಅಧ್ಯಕ್ಷರುಗಳಾದ ಸಂತೋಷ ನಿರಟಿ, ಮಲೇಶಪ್ಪ ಹೊಸಮನಿ, ಮಹೇಶಕುಮಾರ್, ಜಗದೀಶ್ ಸಜ್ಜನ್, ದೇವಿಂದ್ರಪ್ಪ ರುದ್ರವಾರ, ಪ್ರಕಾಶ ರಾಜಾಪೂರ್, ರಾಮಕೃಷ್ಣ ಹೆಗಡೆ, ಅಂಬರೀಶ್ ಮಾಲಗತ್ತಿಿ, ಮಲ್ಲೇಶಪ್ಪ ಹೊಸಮನಿ, ಭೀಮರೆಡ್ಡಿಿ, ಮಹೇಶ, ಬಾಬುಗೌಡ ಪಾಟೀಲ್, ಸೇರಿದಂತೆ ಇತರರಿದ್ದರು.
ಈ ಕ್ರೀೆಡಾಕೂಟದಲ್ಲಿ ಮಹಿಳೆ,ಪುರುಷರು ಸೇರಿ ಒಟ್ಟು 800 ಅಧಿಕ ಸರ್ಕಾರಿ ನೌಕರರು ಭಾಗವಹಿಸಿದ್ದಾರೆ. ಕ್ರಿಿಕೇಟ್, ವಾಲಿಬಾಲ್, ರನ್ನಿಿಂಗ್, ಕೇರಂ, ಈಜಾಟ ಹೀಗೆ ವಿವಿಧ ಆಟಗಳು ಆಯೋಜಿಲಾಗಿದೆ.
ಸರ್ಕಾರಿ ನೌಕರರ ಕ್ರೀಡಾಕೂಟ, ಸಾಂಸ್ಕೃತಿಕ ಸ್ಪರ್ಧೆಗೆ ಚಾಲನೆ ಕ್ರೀಡೆ ದೈಹಿಕ, ಮಾನಸಿಕ ವೃದ್ಧಿಗೆ ಸಹಕಾರಿ – ಶಾಸಕ ತುನ್ನೂರ

