ಸುದ್ದಿಮೂಲ ವಾರ್ತೆ
ದೇವನಹಳ್ಳಿ, ಆ.1: ಪಟ್ಟಣದಲ್ಲಿ ನಡೆದ ಹೋಬಳಿ ಮಟ್ಟದ ವಿವಿಧ ಕ್ರೀಡಾಕೂಟದಲ್ಲಿ ಸರ್ಕಾರಿ ಹೆಣ್ಣು ಮಕ್ಕಳ ಶಾಲೆಯ ವಿದ್ಯಾರ್ಥಿನಿಯರು ವಿವಿಧ ಕ್ರೀಡೆಗಳಲ್ಲಿ ಭಾಗವಹಿಸಿ ಪ್ರಥಮ ಹಾಗೂ ದ್ವಿತೀಯ ಸ್ಥಾನ ಪಡೆದಿದ್ದಾರೆ.
ಶಾಲೆಯ ಮುಖ್ಯಶಿಕ್ಷಕ ರಾಮದಾಸ ಶಿವುಹಳ್ಳೇರ್ ವಿಜೇತ ವಿದ್ಯಾರ್ಥಿನಿಯರಿಗೆ ಅಭಿನಂದಿಸಿ ಮಾತನಾಡಿದ ಅವರು, ‘ಪಠ್ಯದೊಂದಿಗೆ ಕ್ರೀಡಾ ಚಟುವಟಿಕೆಗಳಲ್ಲಿಯೂ ಮಕ್ಕಳಿಗೆ ವ್ಯಾಪಕ ಪ್ರೋತ್ಸಾಹ ನೀಡಲಾಗುತ್ತಿದ್ದು, ಅದರ ಫಲವಾಗಿ ಇಂದು ಹೋಬಳಿ ಮಟ್ಟದಲ್ಲಿ ಶಾಲೆಯೂ ಮೊದಲ ಬಹುಮಾನ ಪಡೆದುಕೊಂಡಿರುವುದು ಹೆಮ್ಮೆಯ ವಿಚಾರವಾಗಿದೆ ಎಂದರು.
ವಾಲಿಬಾಲ್ ಗಂಗಾ ಮತ್ತು ತಂಡ ಪ್ರಥಮಸ್ಥಾನ, ಥ್ರೋಬಾಲ್ ಭೂಮಿಕಾ ಮತ್ತು ತಂಡ ಪ್ರಥಮಸ್ಥಾನ, ಶಟಲ್ ಬ್ಯಾಡ್ಮಿಂಟನ್ ಜನಿಕ ಮತ್ತು ತಂಡ ಪ್ರಥಮಸ್ಥಾನ, 100 ಮೀಟರ್ ಓಟ ಹರಿಣಿ.ಸಿ ಪ್ರಥಮಸ್ಥಾನ, ಜೀವಿತ ತೃತೀಯ ಸ್ಥಾನ, 200 ಮೀಟರ್ ಓಟ ಗಂಗಾ ದ್ವಿತೀಯಸ್ಥಾನ, 400 ಮೀಟರ್ ಓಟ ಅಖಿಲ.ವಿ ತೃತೀಯಸ್ಥಾನ, ತಟ್ಟೆ ಎಸೆತ ಅನಿತ ಪ್ರಥಮ ಸ್ಥಾನ, ಉದ್ದಜಿಗಿತ ಅಖಿಲ.ವಿ ಪ್ರಥಮಸ್ಥಾನ, ಎತ್ತರ ಜಿಗಿತ ಜೀವಿತ ಪ್ರಥಮಸ್ಥಾನ, 100 ಮೀಟರ್ ರಿಲೇ ಜೀವಿತ ಮತ್ತು ತಂಡ ಪ್ರಥಮ ಸ್ಥಾನಗಳಿಸಿ ಶಾಲೆಯ ಕಿರ್ತಿಯನ್ನು ಹೆಚ್ಚಿಸಿದ್ದಾರೆ ಎಂದರು.
ಇದೇ ವೇಳೆ ಶಾಲೆಯ ಎಸ್.ಡಿ.ಎಂ.ಸಿ ಅಧ್ಯಕ್ಷ ವಿನಯ್ಕುಮಾರ್, ಸದಸ್ಯರು, ಶಾಲಾ ಶಿಕ್ಷಕರಾದ ಶಿವಕುಮಾರ್.ಬಿ.ವಿ ನಸೀಮಾಬಾನು, ಬೊಮ್ಮಕ್ಕ, ವಿಜಯಲಕ್ಷ್ಮೀ. ಡಿ.ಎಚ್, ಕಲಾವತಿ, ನಗೀನಾತಾಜ್, ಸುನಿಲ್ಕುಮಾರ್, ಎನ್. ಅತಿಥಿ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಇದ್ದರು.