ಸುದ್ದಿಮೂಲ ವಾರ್ತೆ ರಾಯಚೂರು, ಡಿ.11:
ನಗರದಲ್ಲಿರುವ ತಾಯಿ ಮತ್ತು ಮಕ್ಕಳ ಆಸ್ಪತ್ರೆೆಗೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಈಶ್ವರ ಕುಮಾರ್ ಕಾಂದೂ ಅವರು ಡಿ.11 ರಂದು ದಿಢೀರ್ ಭೇಟಿ ನೀಡಿ ಆಸ್ಪತ್ರೆೆಯಲ್ಲಿನ ಮೂಲಭೂತ ಸೌಕರ್ಯಗಳ ಬಗ್ಗೆೆ ಪರಿಶೀಲಿಸಿದರು.
ಆಸ್ಪತ್ರೆೆಯ ನಾನಾ ವಾರ್ಡಗಳಿಗೆ ಸಂಚರಿಸಿ ಬಾಣಂತಿಯರ ಮತ್ತು ಶಿಶುಗಳ ಯೋಗಕ್ಷೇಮ ವಿಚಾರಿಸಿದರು. ಸರಿಯಾದ ರೀತಿಯಲ್ಲಿ ಊಟ ಕೊಡುತ್ತಾಾರಾ? ಚಿಕಿತ್ಸೆೆ ಮತ್ತು ಔಷಧಿ ಸರಿಯಾಗಿ ನೀಡುತ್ತಾಾರಾ? ಎಂದು ಕೇಳಿ ಮಾಹಿತಿ ಪಡೆದುಕೊಂಡರು. ಆಸ್ಪತ್ರೆೆಯಲ್ಲಿ ನಮಗೆ ಸರಿಯಾದ ಚಿಕಿತ್ಸೆೆ ದೊರೆಯುತ್ತಿಿದೆ ಎಂದು ಬಾಣಂತಿಯರು ಪ್ರತಿಕ್ರಿಿಯಿಸಿದರು.
ರಾತ್ರಿಿ ವೇಳೆಯಲ್ಲೂ ಚಿಕಿತ್ಸೆೆ ನೀಡಿ: ಜಿಲ್ಲೆಯ ಯಾವುದೇ ಗ್ರಾಾಮದಿಂದ ರಾತ್ರಿಿ ವೇಳೆಯಲ್ಲಿ ತುರ್ತು ಚಿಕಿತ್ಸೆೆ ಕೋರಿ ಬರುವ ಬಾಣಂತಿಯರಿಗೆ ವೈದ್ಯರು ಮತ್ತು ಆಸ್ಪತ್ರೆೆಯಲ್ಲಿನ ಸಿಬ್ಬಂದಿ ತಕ್ಷಣವೇ ಸ್ಪಂದನೆ ನೀಡಬೇಕು. ಯಾವುದೇ ನೆಪ ಹೇಳದೇ ಬೇರೆಡೆ ಕಳುಹಿಸಬಾರದು. ಪ್ರಥಮ ಹಂತದ ಚಿಕಿತ್ಸೆೆಗೆ ಕ್ರಮವಹಿಸಿ, ಹೆಚ್ಚಿಿನ ಚಿಕಿತ್ಸೆೆಯ ಅವಶ್ಯವಿದ್ದರೆ ಮಾತ್ರ ಬೇರೆಡೆ ಕಳುಹಿಸಲು ಕ್ರಮವಹಿಸಬೇಕು ಎಂದು ಸಿಇಓ ಅವರು ಇದೇ ವೇಳೆ ಕಟ್ಟುನಿಟ್ಟಿಿನ ನಿರ್ದೇಶನ ನೀಡಿದರು.
ಅಕ್ಕ ಕೆೆ ಕಾಮಗಾರಿ ಪರಿಶೀಲನೆ: ನಗರದ ತಾಯಿ ಮತ್ತು ಮಕ್ಕಳ ಆಸ್ಪತ್ರೆೆಯ ಆವರಣದಲ್ಲಿ ನಿರ್ಮಾಣವಾಗುತ್ತಿಿರುವ ಅಕ್ಕ ಕೆೆ ಕಾಮಗಾರಿಯನ್ನು ಸಿಇಓ ಅವರು ವೀಕ್ಷಣೆ ಮಾಡಿ, ಗುಣಮಟ್ಟದ ಕಾಮಗಾರಿ ನಡೆಸಲು ಸೂಚನೆ ನೀಡಿದರು. ನೂತನ ಪೌಷ್ಟಿಿಕ ಪುನಶ್ಚೇತನ ಕೇಂದ್ರ ಸ್ಥಾಾಪನೆಗೆ ಸಿದ್ದತೆ ಮಾಡಿಕೊಳ್ಳಲು ಇದೇ ವೇಳೆ ಸಿಇಓ ಅವರು ತಿಳಿಸಿದರು. ಮಕ್ಕಳ ಆರೈಕೆಗೆ ಹಾಗೂ ಎಸ್ಎನ್ಸಿಯು ಘಟಕ್ಕೆೆ ಬೇಕಾಗುವ ಪರಿಕರಗಳ ಖರೀದಿಗೆ ಬೇಡಿಕೆ ಪತ್ರವನ್ನು ಕೂಡಲೇ ಸಲ್ಲಿಸುವಂತೆ ಸೂಚಿಸಿ, ತಾಯಿ ಮಕ್ಕಳ ಆರೈಕೆಯ ಸೇವೆಗಳಿಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಇದೇ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಯೋಜನಾ ನಿರ್ದೇಶಕ ಬಸವರಾಜ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಾಣ ಇಲಾಖೆ ಅಧಿಕಾರಿ ಡಾ.ಸುರೇಂದ್ರ ಬಾಬು, ಜಿಲ್ಲಾ ಆರ್.ಸಿ.ಹೆಚ್ ಅಧಿಕಾರಿ ಡಾ.ನಂದಿತಾ, ಹಾಗೂ ತಾಯಿ ಮತ್ತು ಮಕ್ಕಳ ಆಸ್ಪತ್ರೆೆಯ ಆಡಳಿತ ವೈದ್ಯಾಾಧಿಕಾರಿ ಡಾ.ಪ್ರಜ್ವಲ್ ಸೇರಿದಂತೆ ಇನ್ನಿಿತರ ವೈದ್ಯರು ಮತ್ತು ಸಿಬ್ಬಂದಿ ಇದ್ದರು.
ತಾಯಿ, ಮಕ್ಕಳ ಆಸ್ಪತ್ರೆಗೆ ಜಿಪಂ ಸಿಇಓ ಈಶ್ವರ ಕಾಂದೂ ದಿಢೀರ್ ಭೇಟಿ; ಪರಿಶೀಲನೆ

