ಸುದ್ದಿಮೂಲ ವಾರ್ತೆ ಜಾಲಹಳ್ಳಿಿ, ಅ.15:
ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಆದ ಆರ್ಥಿಕ ಇಲಾಖೆಯ ಪ್ರಧಾನ ಕಾರ್ಯದರ್ಶಿ ರಿತೇಶ ಕುಮಾರ ಸಿಂಗ್ ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳ ತಂಡ ಸ್ಥಳೀಯ ಗ್ರಾಾಮ ಪಂಚಾಯಿತಿಗೆ ಮಂಗಳವಾರ ಮಧ್ಯಾಾಹ್ನ ಭೇಟಿ ನೀಡುತ್ತಾಾರೆ ಎನ್ನುವ ಮಾಹಿತಿ ಹಿನ್ನೆೆಲೆಯಲ್ಲಿ ಗ್ರಾಾಮಸ್ಥರು ತಮ್ಮ ಸಮಸ್ಯೆೆಗಳನ್ನು ಪಟ್ಟಿಿ ಮಾಡಿಕೊಂಡು ಅವರ ಬಳಿ ಹೇಳಿಕೊಳ್ಳಬೇಕೆಂದು ಕಾದು ಹೈರಾಣ ಅಗಿ ಹೋದರು.
ಅಧಿಕಾರಿಗಳ ತಂಡ ಸಂಜೆ 5 ಗಂಟೆಗೆ ಗ್ರಾಾ.ಪಂ ಕಚೇರಿ ಮುಂದೆಯೇ ಹಾದು ಹೋದರೂ ಗ್ರಾಾ.ಪಂ ಕಚೇರಿಗೆ ಭೇಟಿ ನೀಡಿಲ್ಲ ಪರಿಶೀಲನೆ ಮಾಡಿಲ್ಲ.
ಗ್ರಾಾ.ಪಂ ಮಾಜಿ ಅಧ್ಯಕ್ಷ ಅಯ್ಯಪ್ಪ ಸ್ವಾಾಮಿ ನೇತೃತ್ವದಲ್ಲಿ ಪಟ್ಟಣದ ವಾರ್ಡ್ ಸಂಖ್ಯೆೆ 8 ಮತ್ತು 9 ರಲ್ಲಿ ಕಳೆದ ಎರಡು ವರ್ಷಗಳಿಂದ ಚರಂಡಿ ಸಮಸ್ಯೆೆ ಉಂಟಾಗಿ ಹೊಲಸು ನೀರು ರಸ್ತೆೆಯಲ್ಲಿ ಸಂಗ್ರಹವಾಗಿ ಜನತೆ ಸಂಚಾರಕ್ಕೆೆ ಹಾಗೂ ಸಾಂಕ್ರಾಾಮಿಕ ರೋಗ ಹರಡುವ ಭಯದಲ್ಲಿ ಕಾಲೋನಿ ನಿವಾಸಿಗಳು ಕಾಲ ಕಳೆಯುತ್ತಿಿದ್ದಾರೆ.
ನಿತ್ಯ ಜನತೆ ಗ್ರಾಾ.ಪಂ ಸದಸ್ಯರ ಮನೆಯ ಮುಂದೆ ಬಂದು ಕುಳಿತುಕೊಳ್ಳುತ್ತಿಿದ್ದಾರೆ. ಅನೇಕ ಸಲ ಜಿಲ್ಲಾ, ತಾಲ್ಲೂಕು ಮಟ್ಟದ ಅಧಿಕಾರಿಗಳ ಗಮನಕ್ಕೆೆ ಸಮಸ್ಯೆೆ ಬಗ್ಗೆೆ ತಂದರೂ ಪ್ರಯೋಜನವಾಗಿಲ್ಲ.
ಅದ್ದರಿಂದ ಜಿಲ್ಲಾ ಉಸ್ತುವಾರಿ ಅಧಿಕಾರಿಗಳಿಗೆ ಜನತೆಯ ಸಮಸ್ಯೆೆ ಹೇಳಬೇಕೆಂದು ಕಾದು ಕುಳಿತರು ಸಹ ಸೌಜನ್ಯ ಕ್ಕೂ ವಾಹನ ನಿಲ್ಲಿಸಿ ಸಮಸ್ಯೆೆ ಕೇಳದೇ ಹಾಗೆಯೇ ಕಾರ್ಗಳನ್ನು ಓಡಿಸಿಕೊಂಡು ದೇವದುರ್ಗ ನಗರಕ್ಕೆೆ ಹೊರಟು ಹೋದರು.
ಅವರು ಜಿಲ್ಲಾ ಉಸ್ತುವಾರಿ ಅಧಿಕಾರಿಯಾಗಿ ಜನತೆಯ ಸಮಸ್ಯೆೆ ಕೇಳಿಸಿಕೊಳ್ಳುವಷ್ಟು ಸೌಜನ್ಯ ಇಲ್ಲವಾದರೆ, ಪ್ರವಾಸ ಮಾಡುವ ನಾಟಕ ಯಾಕೆ ಮಾಡಬೇಕೆಂದು ಅವರು ಪ್ರಶ್ನಿಿದ್ದಾರೆ.
ಈ ಅಧಿಕಾರಿ ಧೋರಣೆ ಬಗ್ಗೆೆ ಈಗಾಗಲೇ ಮುಖ್ಯಮಂತ್ರಿಿಗಳಿಗೆ ಪತ್ರ ಬರೆದು ಕಳಿಸಲಾಗಿದೆ. ಮುಂದಿನ ಒಂದು ವಾರದಲ್ಲಿ ಎರಡು ವಾರ್ಡ್ ಗಳ ಸಮಸ್ಯೆೆಯನ್ನು ಸರಿಪಡಿಸದೇ ಇದ್ದರೆ. ಗ್ರಾಾ.ಪಂ ಕಚೇರಿ ಎದುರು ನಿವಾಸಿಗಳನ್ನು ಸೇರಿಸಿಕೊಂಡು ಪ್ರತಿಭಟನೆ ಕೈಗೊಳ್ಳಲಾಗುವುದು ಎಂದು ಗ್ರಾಾ.ಪಂ ಮಾಜಿ ಅಧ್ಯಕ್ಷ ಅಯ್ಯಪ್ಪ ಸ್ವಾಾಮಿ ತಿಳಿಸಿದ್ದಾರೆ.