ಸೂಕ್ತ ಸಮಯದಲ್ಲಿ ಜಾರಿ – ಸಿಎಂ ಸಿದ್ದರಾಮಯ್ಯ ಭರವಸೆ
ಸುದ್ದಿಮೂಲ ವಾರ್ತೆ ಬೆಂಗಳೂರು, ಜು.22:
ಅಧಿಕಾರ ವಿಕೇಂದ್ರೀಕರಣಗೊಳಿಸುವ ಉದ್ದೇಶದಿಂದ ಸಂವಿಧಾನದ 73ನೇ ತಿದ್ದುಪಡಿ ಅನುಸಾರ ರಾಜ್ಯದಲ್ಲಿ ಅಸ್ಥಿಿತ್ವದಲ್ಲಿರುವ ಗ್ರಾಾಮ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಮತ್ತು ಜಿಲ್ಲಾ ಪಂಚಾಯಿತಿಗಳು ಅನುಕ್ರಮವಾಗಿ ಗ್ರಾಾಮ ಸರ್ಕಾರ, ತಾಲ್ಲೂಕು ಸರ್ಕಾರ ಮತ್ತು ಜಿಲ್ಲಾ ಸರ್ಕಾರ ರೀತಿಯಲ್ಲಿ ಅಧಿಕಾರ ನಿರ್ವಹಿಸಲು ಅನುಕೂಲವಾಗುವಂತೆ ಶೀಘ್ರವೇ ಅಧಿಕಾರ ಹಸ್ತಾಾಂತರಕ್ಕೆೆ ಚಾಲನೆ ನೀಡುವುದಾಗಿ ಮುಖ್ಯಮಂತ್ರಿಿ ಸಿದ್ದರಾಮಯ್ಯ ಭರವಸೆ ನೀಡಿದರು.
ಪ್ರಕಾಶ್ ರಾಥೋಡ್ ಅವರ ನಿಯಮ 72ರ ಮೇರೆಗೆ ಮಂಡಿಸಿದ ಗಮನ ಸೆಳೆಯುವ ಸೂಚನೆ ವೇಳೆ ಗ್ರಾಾಮೀಣಾಭಿವೃದ್ಧಿಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಿಯಾಂಕ್ ಖರ್ಗೆ, ಈಗಾಗಲೇ ಸಂವಿಧಾನದ 73ನೇ ತಿದ್ದುಪಡಿ ತಂದು ಕರ್ನಾಟಕ ಗ್ರಾಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ 1993ನ್ನು ಜಾರಿಗೊಳಿಸಲಾಗಿದೆ. ಆದರೆ, ಇಲ್ಲಿಯವರೆಗೂ ಅದರಡಿಯಲ್ಲಿ ಗ್ರಾಾಪಂ, ತಾಪಂ ಮತ್ತು ಜಿಪಂ ಸ್ವಯಂ ಆಡಳಿತ ಸಂಸ್ಥೆೆಗಳಾಗಿ ಕಾರ್ಯ ನಿರ್ವಹಿಸಬೇಕೆಂಬುದು ಅಧಿನಿಯಮದ ಆಶಯವಾಗಿತ್ತು. ಆದರೆ, ಅದು ಇನ್ನೂ ಅನುಷ್ಠಾಾನ ಮುಖ್ಯಮಂತ್ರಿಿಗಳೊಂದಿಗೆ ಚರ್ಚಿಸಿ ಶೀಘ್ರವೇ ತೀರ್ಮಾನ ತೆಗೆದು ಕೊಳ್ಳಲಾಗುವುದು ಎಂದರು.
ಆಗ ಮಧ್ಯ ಪ್ರವೇಶಿಸಿದ ಸಭಾಪತಿ ಬಸವರಾಜ ಹೊರಟ್ಟಿಿ, ನಾನು ಈ ಹಿಂದೆ ಸಚಿವನಾಗಿದ್ದಾಗ ಸಂವಿಧಾನದ ತಿದ್ದುಪಡಿ ಆಶಯದಂತೆ ಇದರ ಎಲ್ಲಾ ನಿಯಮಗಳನ್ನು ರೂಪಿಸಿ ಗ್ರಾಾಪಂ, ತಾಪಂ ಮತ್ತು ಜಿಪಂಗಳಿಗೆ ಹಣಕಾಸು ಮತ್ತುಇತರೆ ಆಡಳಿತ ಅಧಿಕಾರಿಗಳು ಸ್ಥಳೀಯ ಸರ್ಕಾರಗಳಂತೆಯೇ ನಿರ್ಧಾರ ತೆಗೆದುಕೊಳ್ಳುವ ಅಧಿಕಾರ ನೀಡಲು ನಿರ್ಧರಿಸಲಾಗಿತ್ತು. ಆದರೆ, ಅದು ಇನ್ನೂ ಅನುಷ್ಠಾಾನಗೊಂಡಿಲ್ಲವಾದ್ದರಿಂದ ಈ ಬಗ್ಗೆೆ ಮುಖ್ಯಮಂತ್ರಿಿಗಳೇ ಸದನದಲ್ಲಿದ್ದು ಅದನ್ನು ಅನುಷ್ಠಾಾನಗೊಳಿಸಲು ಸಲಹೆ ಮಾಡಿದಾಗ ಸೂಕ್ತ ಸಮಯದಲ್ಲಿ ಈ ಬಗ್ಗೆೆ ನಿರ್ಧಾರ ತೆಗೆದುಕೊಳ್ಳುವುದಾಗಿ ಮುಖ್ಯಮಂತ್ರಿಿ ಸಿದ್ದರಾಮಯ್ಯ ಭರವಸೆ ನೀಡಿದರು.
ಇದಕ್ಕೂ ಮುನ್ನ ಪ್ರಕಾಶ್ ರಾಥೋಡ್ ಮಾತನಾಡಿ, ಆ.19ರಂದು ತಿದ್ದುಪತಿ ಜಾರಿಗೆ ತಂದು 25 ವರ್ಷಗಳಾಗುತ್ತಿಿವೆ. ಆ.15ರ ಸ್ವಾಾತಂತ್ರ್ಯ ದಿನಾಚರಣೆ ಇಲ್ಲವೇ ಆ.20ರಂದು ರಾಜೀವ್ಗಾಂಧಿ ಜನ್ಮದಿನಾಚರಣೆ ಇದೆ. ಅವರ ಆಶಯದಂತೆಯೇ ಸಂವಿಧಾನದ 73ನೇ ವಿಧಿಗೆ ತಿದ್ದುಪಡಿಯಾಗಿ ಅಧಿಕಾರ ವಿಕೇಂದ್ರೀೀಕರಣ ಜಾರಿಗೆ ಬಂದಿತು. ಅಂದೇ ಅದನ್ನು ಜಾರಿ ಮಾಡಲು ಒತ್ತಾಾಯ ಮಾಡಿದರು.
ಈಗಾಗಲೇ ಕರ್ನಾಟಕ ಗ್ರಾಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮದಂತೆ ಗ್ರಾಾಮ, ತಾಲ್ಲೂಕು ಮತ್ತು ಜಿಲ್ಲಾ ಪಂಚಾಯತ್ಗಳಿಗೆ ಹೆಚ್ಚಿಿನ ಅಧಿಕಾರ ಮತ್ತು ಅನುದಾನ ನೀಡಲಾಗುತ್ತಿಿದ್ದು, ಸ್ಥಳೀಯ ಸಮಸ್ಯೆೆಗಳನ್ನು ಬಗೆಹರಿಸಲು, ಅಧ್ಯಕ್ಷರುಗಳ ಗೌರವಧನ ಹೆಚ್ಚಳ ಹಾಗೂ ಈ ಮೂರು ಸಂಸ್ಥೆೆಗಳ ಅಧಿಕಾರಿಗಳಿಗೆ ಹೆಚ್ಚಿಿನ ಅಧಿಕಾರ ನೀಡಿ ವ್ಯವಸ್ಥೆೆಯನ್ನು ಬಲಗೊಳಿಸಲಾಗಿದೆ ಎಂದು ಪ್ರಿಿಯಾಂಕ್ ಖರ್ಗೆ ವಿವರಣೆ ನೀಡಿ ಮುಖ್ಯಮಂತ್ರಿಿಯೊಂದಿಗೆ ಚರ್ಚಿಸಿ ಪ್ರಕಾಶ್ ರಾಥೋಡ್ ಸೂಚಿಸಿದ ಯಾವುದಾದರೂ ಒಂದು ದಿನದಂದು ಇದನ್ನು ಅನುಷ್ಠಾಾನಗೊಳಿಸಲು ನಿರ್ಧಾರ ಮಾಡಲಾಗುವುದು ಎಂದು ಹೇಳಿದರು.