ಸುದ್ದಿಮೂಲ ವಾರ್ತೆ ಸಿರವಾರ, ಜ.26:
77ನೇ ಗಣರಾಜ್ಯೋೋತ್ಸವ ಸೋಮವಾರ ಪಟ್ಟಣದಲ್ಲಿ ಅದ್ದೂರಿಯಾಗಿ ಆಚರಿಸಲಾಯಿತು. ಪೊಲೀಸ್ ಠಾಣೆಯಲ್ಲಿ ಸಿಪಿಐ ಎಂ.ಶಶಿಕಾಂತ ಧ್ವಜಾರೋಹಣ ಮಾಡಿದರು, ಇನ್ನೂ ಪಟ್ಟಣ ಪಂಚಾಯತಿಯಲ್ಲಿ ಅಧ್ಯಕ್ಷ ಹಾಜಿ ಚೌದ್ರಿಿ, ನೀರಾವರಿ ಇಲಾಖೆಯ ಇಇ ಕೋದಂಡರಾಮ್, ತಾಲೂಕಿನ ಪಂಚಾಯತಿ ಇಓ ಶಶಿಧರಸ್ವಾಾಮಿ ಮಠದ್, ತಾಲೂಕಿನ ಆಡಳಿತದಿಂದ ತಹಶಿಲ್ದಾಾರ ಅಶೋಕ ಪವಾರ್, ಕೃಷಿ ಪತ್ತಿಿನ ಸಹಕಾರಿ ಸಂಘದಲ್ಲಿ ಅಧ್ಯಕ್ಷ ಚೆನ್ನಪ್ಪ ಚನ್ನೂರು, 77ನೇ ಗಣರಾಜ್ಯೋೋತ್ಸವದ ಧ್ವಜಾರೋಹಣ ಮಾಡಿದರು.
ನಂತರ ತಾಲೂಕಿನ ಆಡಳಿತದಿಂದ ನಡೆದ ವೇದಿಕೆಯ ಕಾರ್ಯಕ್ರಮ ಸಸಿಗೆ ನೀರು ಹಾಕುವ ಮೂಲಕ ತಹಶಿಲ್ದಾಾರ ಅಶೋಕ ಪವಾರ ಉದ್ಘಾಾಟಿಸಿ ಮಾತನಾಡಿದರು.
ವೇದಿಕೆಯ ಮೇಲೆ ಪ.ಪಂ.ಅಧ್ಯಕ್ಷ ಹಾಜಿ ಚೌದ್ರಿಿ, ಉಪಾಧ್ಯಕ್ಷೆ ಲಕ್ಷ್ಮಿಿ ಆದೆಪ್ಪ, ಪ.ಪಂ.ಮುಖ್ಯಾಾಧಿಕಾರಿ ಸುರೇಶ ಶೆಟ್ಟಿಿ, ಇಓ ಶಶಿಧರಸ್ವಾಾಮಿ ಮಠದ್, ಸಿಪಿಐ ಶಶಿಕಾಂತ, ಸಿಡಿಪಿಓ ಗೋಕುಲಸಾಬ್, ನೌಕರರ ಸಂಘದ ಅಧ್ಯಕ್ಷ ಆರ್ೀ ಮಿಯ್ಯಾಾ ಚಾಗಭಾವಿ, ಉಪ ಖಜಾನೆ ಅಧಿಕಾರಿ ಶಂಕ್ರಮ್ಮ, ಎಇಇ ವಿಜಯಲಕ್ಷ್ಮಿಿ ಪಾಟೀಲ ಸೇರಿದಂತೆ ಅನೇಕರು ಇದ್ದರು. ಪೋಲಿಸ್ ಸಿಬ್ಬಂದಿ ವರ್ಗ ಹಾಗೂ ವಿವಿಧ ಶಾಲಾ ಮಕ್ಕಳಿಂದ ಪರೇಡ್, ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.
ಸಿರವಾರ: 77ನೇ ಗಣರಾಜ್ಯೋತ್ಸವ ಅದ್ಧೂರಿ ಆಚರಣೆ

