ಸುದ್ದಿಮೂಲವಾರ್ತೆ
ಕೊಪ್ಪಳ,ಜೂ.22:ಆಕೆಯದು ಇರೋದು ಸರಕಾರ ನೀಡಿರುವ ಆಶ್ರಯ ಮನೆ, ಕೇವಲ ಎರಡು ಬಲ್ಬ್ ಗಳನ್ನು ಹಾಕಲಾಗಿದೆ. ಮನೆಯಲ್ಲಿರೋದು ಕೇವಲ ಅಜ್ಜಿ ಹಾಗು ಆಕೆ ಮಗ ಆದರೆ ಆ ಅಜ್ಜಿಗೆ ಈಗ ಬಂದಿದೆ ಬರೋಬ್ಬರಿ 1.03 ಲಕ್ಷ ರೂಪಾಯಿ ವಿದ್ಯುತ್ ಬಿಲ್, ಇಷ್ಟು ಪ್ರಮಾಣದ ವಿದ್ಯುತ್ ಬಿಲ್ ನೋಡಿ ಹೌಹಾರಿದ ಅಜ್ಜಿ ಮನೆಗೆ ಭೇಟಿ ನೀಡಿದ ಜೆಸ್ಕಾಂ ಇಲಾಖೆಯ ಕಾರ್ಯನಿರ್ವಹಕ ಇಂಜನೀಯರ್ ಇದರಲ್ಲಿ ವಿದ್ಯುತ್ ಬಿಲ್ ನೀಡುವ ಅಧಿಕಾರಿಯ ನಿರ್ಲಕ್ಷ್ಯ ಎದ್ದು ಕಾಣುತ್ತಿದೆ, ಈಗ ಬಂದಿರುವ ಬಿಲ್ ಸರಿಪಡಿಸಲಾಗುವುದು. ಅಜ್ಜಿ ಯಾವುದೇ ಬಿಲ್ ಪಾವತಿಸಬೇಕಾಗಿಲ್ಲ ಎಂದು ಹೇಳಿದ್ದಾರೆ.
ಕೊಪ್ಪಳ ತಾಲೂಕಿನ ಭಾಗ್ಯನಗರದಲ್ಲಿಯ ಆಶ್ರಯ ಮನೆಯಲ್ಲಿ ವಾಸವಾಗಿರುವ ಗಿರಜಮ್ಮ ಚಿಂತಪಲ್ಲಿ ಎಂಬ ಅಜ್ಜಿಯ ಮನೆಯ ವಿದ್ಯುತ್ ಬಿಲ್ ಹೌಹಾರುವಂತೆ ಮಾಡಿದೆ. ಅಜ್ಜಿಗೆ ಈ ತಿಂಗಳಲ್ಲಿ ಬರೋಬ್ಬರಿಗೆ 1.03 ಲಕ್ಷ ರೂಪಾಯಿ ವಿದ್ಯುತ್ ಬಿಲ್ ಬಂದಿದೆ.
ಅದರಲ್ಲಿ ಬಹುತೇಕ ಬಾಕಿ ಹಣ ಎಂದು ನಮೂದಾಗಿದೆ. ಆದರೆ ಅಜ್ಜಿಯದು ಭಾಗ್ಯಜ್ಯೋತಿ ಯೋಜನೆಯಿಂದ ವಿದ್ಯುತ್ ಪಡೆದಿದ್ದಾರೆ., ಭಾಗ್ಯಜ್ಯೋತಿಯಲ್ಲಿ 40 ಯುನಿಟ್ ವರೆಗೂ ವಿದ್ಯುತ್ ಬಿಲ್ ಬರೋದಿಲ್ಲ.
ಅಜ್ಜಿಯ ಇಬ್ಬರ ಹೆಣ್ಣುಮಕ್ಕಳು ಅವರ ಗಂಡನ ಮನೆಯಲ್ಲಿದ್ದಾರೆ. ಈಗ ಮನೆಯಲ್ಲಿರೋದು ಅಜ್ಜಿ ಹಾಗು ಆಕೆಯ ಮಗ. ಮನೆಯಲ್ಲಿ ಕೇವಲ ಎರಡು ಬಲ್ಬಗಳನ್ನು ಹಾಕಲಾಗಿದೆ. ಪ್ರತಿ ತಿಂಗಳು ಕೇವಲ 70-80 ರೂಪಾಯಿ ವಿದ್ಯುತ್ ಬಿಲ್ ಬರುತ್ತಿರುವುದು ಈ ತಿಂಗಳಿನಲ್ಲಿ ಬರೋಬ್ಬರಿ ಲಕ್ಷಕ್ಕೂ ಅಧಿಕ ಬಿಲ್ ಬಂದಿದೆ. ಓದು ಬರಹ ಗೊತ್ತಿಲ್ಲದ.
ದುಡಿಮೆ ಇಲ್ಲದ ಅಜ್ಜಿ ವಿದ್ಯುತ್ ಬಿಲ್ ಹೇಗೆ ಕಟ್ಟೋದು ಎಂಬ ಚಿಂತೆಗೊಳಲಾಗಿದ್ದಳು. ಮುಂದೇನು ಮಾಡಬೇಕು ಎಂಬ ಚಿಂತೆಯಲ್ಲಿದ್ದಳು.
ಅಜ್ಜಿಯ ಮನೆಗೆ ಭೇಟಿ ನೀಡಿದ ಕೊಪ್ಪಳ ಜೆಸ್ಕಾಂ ಕಾರ್ಯನಿರ್ವಹಕ ಇಂಜನೀಯರ್ ಅಜ್ಜಿ ಪ್ರತಿ ತಿಂಗಳು ಕೇವಲ 10 ಯುನಿಟ್ ಗಿಂತ ಕಡಿಮೆ ಬಳಸಿದ್ದಾಳೆ.
ಆದರೆ ಮೀಟರ್ ಬದಲಾದಾಗ ಹಿಂದಿನ ಮೀಟರ್ ತಾಂತ್ರಿಕ ತೊಂದರೆಯಿಂದ ಬಾಕಿ ಇದೆ. 2021 ರಿಂದಲೇ ಈ ಬಾಕಿ ಮುಂದುವರಿದಿದೆ.
ಆದರೆ ವಿದ್ಯುತ್ ಬಿಲ್ ನೀಡುವ ಸಿಬ್ಬಂದಿ ಹಾಗು ಭಾಗ್ಯನಗರದ ಅಧಿಕಾರಿಗಳು ನಿರ್ಲಕ್ಷ್ಯ ಎದ್ದು ಕಾಣುತ್ತಿದೆ. ಸಿಬ್ಬಂದಿಯ ಮೇಲೆ ಕ್ರಮ ಕೈಗೊಳ್ಲಲಾಗುವುದು ತಕ್ಷಣದಿಂದ ಜೆಸ್ಕಾಂ ಐಟಿಯವರೆಗೆ ಮಾಹಿತಿ ನೀಡಿ ಅಜ್ಜಿ ಉಚಿತವಾಗಿ ವಿದ್ಯುತ್ ಬಿಲ್ ಪಡೆಯಬಹುದಾಗಿದೆ ಎಂದು ಹೇಳಿದ್ದಾರೆ.
ರಾಜ್ಯದಲ್ಲಿ ಈ ತಿಂಗಳು ಎಲ್ಲರ ವಿದ್ಯುತ್ ಬಿಲ್ ಹೆಚ್ಚಳವಾಗಿರುವ ಪ್ರಕರಣಗಳು. ಈ ಮಧ್ಯೆ ಗೃಹ ಜ್ಯೋತಿ ಯೋಜನೆಯಲ್ಲಿ ಉಚಿತ ವಿದ್ಯುತ್ ನೀಡುವ ಮುನ್ನ ಅಜ್ಜಿಗೆ ಲಕ್ಷ ರೂಪಾಯಿ ವಿದ್ಯುತ್ ಬಿಲ್ ಬಂದಿರೋದು ಸಾಕಷ್ಟು ಜನರ ಆಕ್ರೋಶಕ್ಕೆ ಕಾರಣವಾಗಿತ್ತು.
ಈಗ ವಿದ್ಯುತ್ ಬಿಲ್ ಕಟ್ಟಬೇಡಿ ಎಂದಿದ್ದು ಅಜ್ಜಿಗೆ ಸಮಾದಾನ ತಂದಿದೆ.