ಸುದ್ದಿಮೂಲವಾರ್ತೆ
ಕೊಪ್ಪಳ,ಜೂ.20: ಕೊಪ್ಪಳ ಜಿಲ್ಲಾ ನ್ಯಾಯಲಯಗಳ ಸಂಕೀರ್ಣದ ಕಟ್ಟಡಕ್ಕೆ ಭೂಮಿ ಸ್ವಾದೀನಕ್ಕಾಗಿ ರಾಜ್ಯ ಸರಕಾರ 11 ಕೋಟಿ ರೂಪಾಯಿ ಮಂಜೂರಾಗಿದ್ದು ಸರಕಾರಕ್ಕೆ ಕೊಪ್ಪಳ ಜಿಲ್ಲಾ ವಕೀಲರು ಹರ್ಷ ವ್ಯಕ್ತಪಡಿಸಿ ಬೇಗ ಕಾಮಗಾರಿ ಆರಂಭವಾಗಲಿ ಎಂದರು.
ಅವರು ಇಂದು ಕೊಪ್ಪಳ ಮೀಡಿಯಾ ಕ್ಲಬ್ ನಲ್ಲಿ ಮಾತನಾಡಿ ಕಟ್ಟಡಕ್ಕಾಗಿ ಜಿಲ್ಲಾ ವಕೀಲರಿಂದ ಸಾರ್ವಜನಿಕ ಹಿತಾಸಕ್ತಿಯ ಹಿನ್ನೆಲೆಯಲ್ಲಿ ವಕೀಲರ ಸಂಘದಿಂದ ಅರ್ಜಿ ಸಲ್ಲಿಸಲಾಗಿತ್ತು. ವಿಚಾರಣೆ ನಡೆಸಿದ ಧಾರವಾಡದ ಹೈಕೋರ್ಟು ನಿರ್ದೇಶನದಿಂದ ಈಗ ಹಣ ಬಿಡುಗಡೆಯ ಆದೇಶ ಹೊರಡಿಸಿದೆ ಎಂದು ಹೇಳಿದರು.
ನ್ಯಾಯಲಯ ನಿರ್ಮಾಣಕ್ಕೆ ಎಲ್ಲರಿಗೂ ಬೇಕು ರಾಜ್ಯದಲ್ಲಿ ಎಲ್ಲಾ ಜಿಲ್ಲೆಗಳಲ್ಲಿ ಸುಸಜ್ಜಿತ ನ್ಯಾಯಲಯ ಕಟ್ಟಡ ನಿರ್ಮಾಣವಾಗಿದೆ. ಈಗ ಭೂಮಿ ಸ್ವಾದೀನ ಮಾಡಿರುವ ಸರಕಾರ ಮುಂದೆ ನ್ಯಾಯಲಯಕ್ಕೆ 100 ಕೋಟಿ ರೂಪಾಯಿಯನ್ನು ನೀಡಬೇಕು. 11 ಎಕರೆಯಲ್ಲಿ ನಿರ್ಮಾಣವಾಗುವ ಜಿಲ್ಲಾ ನ್ಯಾಯಲಯ ಸಂಕೀರ್ಣಕ್ಕೆ ಕೊಪ್ಪಳ ಜಿಲ್ಲೆಯ ಜನಪ್ರತಿನಿಧಿಗಳು ಯತ್ನಿಸಬೇಕು. ಬೇಗ ಕಟ್ಟಡ ಕಾಮಗಾರಿ ಆರಂಭವಾಗದಿದ್ದರೆ ವಕೀಲರು ಮತ್ತೆ ಹೋರಾಟ ಮಾಡಲಾಗುವುದು ಎಂದು ತಿಳಿಸಿದ್ದಾರೆ.
ಈಗಿರುವ ಜಿಲ್ಲಾ ನ್ಯಾಯಲಯದಲ್ಲಿ ಮೂಲಭೂತ ಸೌಕರ್ಯವಿಲ್ಲ. ಇದರಿಂದ ಇಲ್ಲಿಗೆ ಬಂದಿರುವ ಕಕ್ಷಿದಾರ ತೊಂದರೆಯಾಗುತ್ತಿದೆ. ಸಾರ್ವಜನಿಕರು ನ್ಯಾಯಲಯಕ್ಕೆ ಅನುದಾನ ನೀಡುವಂತೆ ಆಗ್ರಹಿಸಿದ್ದಾರೆ.
ಈ ಸಂದರ್ಭದಲ್ಲಿ ಉಪಾಧ್ಯಕ್ಷ ದೇವರಾಜ ಬಾಗಲಕೋಟೆ, ಸಿ ಎಂ ಪೊಲೀಸ್ ಪಾಟೀಲ. ಎಲ್ ಹೆಚ್ ಹಿರೇಗೌಡರ ಇದ್ದರು.