ಸುದ್ದಿಮೂಲ ವಾರ್ತೆ
ಕೊಪ್ಪಳ,ಅ.3: ಸಾರ್ವಜನಿಕ ಸ್ಥಳಗಳಲ್ಲಿ ಪ್ರತಿಷ್ಠಾಪಿಸಿದ ಗಣೇಶ ಮೂರ್ತಿಗಳು ವಿಸರ್ಜನೆಯು ಅದ್ದೂರಿ ನಡೆಯುತ್ತಿವೆ. ಕೊಪ್ಪಳ ನಗರದ ಕಾವ್ಯಾನಂದ ಪಾರ್ಕಿನಲ್ಲಿ ಪ್ರತಿಷ್ಠಾಪಿಸಿದ್ದ ಹಿಂದುಮಹಾಮಂಡಳದ ಗಣೇಶ ವಿಸರ್ಜನೆಯು ಅದ್ದೂರಿಯಾಗಿ ನಡೆಯಿತು.
ಈ ಸಂದರ್ಭದಲ್ಲಿ ಸಾವಿರಾರು ಮಹಿಳೆಯರು ಭಾಗಿ ಸಕತ್ ಸ್ಟೆಪ್ ಹಾಕಿದರು. ಇದರಲ್ಲಿ ಸಂಸದ ಸಂಗಣ್ಣ ಕರಡಿ ಸೋಸೆ ಮಂಜುಳಾ ಕರಡಿ ಯು ಸಹ ಹೆಜ್ಜೆ ಹಾಕಿದರು. ಮಹಿಳೆಯರ ನಂತರ ಇಳಿವಯಸ್ಸಿನ ಸಂಸದ ಸಂಗಣ್ಣ ಕರಡಿ ಸಹ ಭರ್ಜರಿ ಡ್ಯಾನ್ಸ್ ಮಾಡಿದರು.
ಕೊಪ್ಪಳ ನಗರದಲ್ಲಿ ಬಹುತೇಕ ಗಣೇಶ ಮೂರ್ತಿಗಳು ವಿಸರ್ಜನೆ ಮಾಡಲಾಗಿದೆ. ಕೊನೆಯದಾಗಿ ಹಿಂದು ಮಹಾಸಭಾ ಮಂಡಳಿ ಗಣೇಶ ವಿಸರ್ಜನೆಯು ಸೋಮುವಾರ ಸಂಜೆ ನಡೆಯಿತು. ಪ್ರತಿಷ್ಠಾಪಿಸಿದ 14ನೆಯ ದಿನದಂದು ಗಣೇಶ ವಿಸರ್ಜನೆ ಮಾಡಲಾಯಿತು. ಅಬ್ಬರ ಡಿಜೆ ಸೌಂಡ ಜಗಮಗಿಸುವ ವಿದ್ಯುತ್ ಬೆಳಕಿನಲ್ಲಿ ಸಾವಿರಾರು ಜನರು ಭಾಗಿಯಾಗಿ ಗಣೇಶನಿಗೆ ವಿದಾಯ ಹೇಳಿದರು.
ಇದೇ ಮೆರವಣಿಗೆಯಲ್ಲಿ ಇದೇ ಮೊದಲು ಬಾರಿಗೆ ಸಾವಿರಾರು ಮಹಿಳೆಯರು ಗಣೇಶ ವಿಸರ್ಜನೆಯಲ್ಲಿ ಭಾಗಿಯಾಗಿದ್ದರು. ಮಹಿಳೆಯರು ಹಾಗು ಮಕ್ಕಳು ಡಿಜೆ ಸೌಂಡಿಗೆ ಸಕತ್ ಸ್ಟೆಪ್ ಹಾಕಿದರು. ಇದೇ ವೇಳೆ ಸಂಸದ ಸಂಗಣ್ಣ ಕರಡಿಯವರ ಸೋಸೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಪರಾಭಾವ ಕಂಡಿರುವ ಬಿಜೆಪಿ ಮುಖಂಡರಾದ ಮಂಜುಳಾ ಕರಡಿ ಸಹ ಡಿಜೆ ಸೌಂಡಿಗೆ ಹೆಜ್ಜೆ ಹಾಕಿದರು.
ಸೋಸೆ ಹಾಗು ಮಹಿಳೆಯರ ಕುಣಿತದ ನಂತರ ಮೆರವಣಿಗೆಯಲ್ಲಿ ಭಾಗಿಯಾದ ಸಂಸದ ಸಂಗಣ್ಣ ಇಳಿವಯಸ್ಸಿನಲ್ಲಿ ಸಕತ್ ಸ್ಟೆಪ್ ಹಾಕಿದರು.ಗಣೇಶ ವಿಸರ್ಜನೆಯ ವೇಳೆ ಯುವಕರು ಕುಣಿಯುವ ವೇಳೆಯಲ್ಲಿ ಅವರೊಂದಿಗೆ ತಾವು ಭಾಗಿಯಾಗಿ ಭರ್ಜರಿಯಾಗಿ ಕುಣಿದರು. ಸಂಸದರನ್ನು ಯುವಕರು ಮೇಲಕ್ಕೆ ಎತ್ತಿ ಕುಣಿದು ಕುಪ್ಪಳಿಸಿದರು. 73 ವಯಸ್ಸಿನ ಸಂಗಣ್ಣ ಉತ್ಸಾಹದಿಂದ ಕುಣಿದಿದ್ದು ಮೆರವಣಿಗೆಯಲ್ಲಿ ಉತ್ಸಾಹ ಹೆಚ್ಚಿಸಿತು.
ಗಣೇಶ ವಿಸರ್ಜನೆ ಸಂದರ್ಭದಲ್ಲಿ ಅಹಿತಕರ ಘಟನೆ ನಡೆಯದಂತೆ 500 ಕ್ಕೂ ಹೆಚ್ಚು ಪೊಲೀಸರನ್ನು ನಿಯೋಜಿಸಿ ಬಿಗಿ ಭದ್ರತೆ ನೀಡಲಾಗಿತ್ತು.