ಸುದ್ದಿಮೂಲ ವಾರ್ತೆ
ದೇವನಹಳ್ಳಿ, ಅ. 08 : ಚೆಕ್ ಡ್ಯಾಮ್ಗಳ ನಿರ್ಮಾಣದಿಂದ ಅಂತರ್ಜಲ ಮೇಲೆತ್ತಲು ಸಾಧ್ಯ ಹಾಗೂ ರೈತರಿಗೆ ಇದರಿಂದ ಪ್ರಯೋಜನವಾಗಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಚ್,ಮುನಿಯಪ್ಪ ತಿಳಿಸಿದರು.
ತಾಲೂಕಿನ ಕಸಬಾ ಹೋಬಳಿಯ ಸಾವಕನಹಳ್ಳಿ ಗ್ರಾಮದಲ್ಲಿ ಸಣ್ಣ ನೀರಾವರಿ ಇಲಾಖೆವತಿಯಿಂದ ಅಟಲ್ ಭೂಜಲ ಯೋಜನೆಯಡಿ ಚೆಕ್ ಡ್ಯಾಮ್ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.
ತಾಲೂಕಿನ ಸಾವಕನಹಳ್ಳಿ, ಹುರಳಗುರ್ಕಿ, ದಂಡದಾನಕೊಡಗೇಹಳ್ಳಿ, ತೈಲಗೆರೆ ಗ್ರಾಮಗಳಲ್ಲಿ ಅಂದಾಜು 2 ಕೋಟಿ 70 ಲಕ್ಷ ವೆಚ್ಚದಲ್ಲಿ ಚೆಕ್ ಡ್ಯಾಮ್ಗಳು ನಿರ್ಮಾಣವಾಗಲಿವೆ. ಮಳೆ ನೀರನ್ನು ಸಂಗ್ರಹಣೆ ಮಾಡಲು ಡ್ಯಾಮ್ಗಳನ್ನು ಕಟ್ಟಲಾಗುತ್ತಿದೆ. ಇದರಿಂದ ಅಂತರ್ಜಲ ವೃದ್ಧಿಯಾಗಲಿದೆ. ರೈತರಿಗೆ ಪೂರ್ತಿ ಪ್ರಮಾಣದಲ್ಲಿ ಇದರ ಪ್ರಯೋಜನೆ ಪಡೆಯಲಿದ್ದಾರೆ. ಈ ಯೋಜನೆ ಕೇಂದ್ರ ಸರ್ಕಾರ 2005-06ರಲ್ಲಿ ಯುಪಿಎ ಸರ್ಕಾರದಲ್ಲಿ ಪ್ರಾರಂಭಮಾಡಿದೆ. ಬಯಲು ಸೀಮೆ ಪ್ರದೇಶಗಳಲ್ಲಿ ಮಳೆ ನೀರನ್ನು ಸಂಗ್ರಹಣೆ ಮಾಡಿ ಅದರ ಮುಖಾಂತರ ಅಂತರ್ಜಲವನ್ನು ಅಭಿವೃದ್ಧಿ ಮಾಡುವುದರ ಜೊತೆಗೆ ರೈತರಿಗೆ ಸಂಪೂರ್ಣ ಸಹಕಾರವಾಗಲಿದೆ ಎಂದರು.
ಅಂತರ್ಜಲ ವೃದ್ಧಿಸುವ ಕಾರ್ಯಕ್ರಮವನ್ನು ಹೆಚ್ಚಿಸಲು ಚಿಂತನೆ ನಡೆಸುತ್ತಿದ್ದೇನೆ. ಜೊತೆಗೆ ಇದಕ್ಕೆ ಪೂರಕವಾಗಿ ಕೆರೆಗಳ ಹೂಳೆತ್ತುವ ಕಾರ್ಯಕೈಗೊಳ್ಳಲಾಗುವುದು. ಜಿಲ್ಲೆಯಲ್ಲಿ ಇರುವ ಎಲ್ಲಾ ಕೆರೆಗಳನ್ನು ಹಂತಹಂತವಾಗಿ ಹೂಳೆತ್ತಿ ಮಳೆ ನೀರನ್ನು ಸಂಗ್ರಹಣೆ ಮಾಡಲಾಗುವುದು. ಇದರಿಂದ ಮರಗಿಡಗಳು ಸಹ ಯಥೇಚ್ಚವಾಗಿ ಬೆಳೆದು ನೀರಿನ ಅಭಾವವನ್ನು ನೀಗಿಸಲಿದೆ ಎಂದರು.
ಇದೆ ವೇಳೆ ಸಣ್ಣನೀರಾವರಿ ಇಲಾಖೆ ಇಂಜಿನಿಯರ್ ಮಂಜುನಾಥ್ ಸಹಾಯಕ, ಇಂಜಿಯರ್ ವಿಕಾಸ್, ಬಿದಲೂರು ಗ್ರಾಮಪಂಚಾಯತಿ ಅಧ್ಯಕ್ಷ ಎಸ್.ಪಿ.ಮುನಿರಾಜು, ಪಿಡಿಒ ಸಿದ್ದರಾಜು, ಮುಖಂಡರಾದ ನಾರಾಯಣಸ್ವಾಮಿ, ರಾಮಚಂದ್ರಪ್ಪ ರಾಘವೇಂದ್ರ ಸೇರಿದಂತೆ ಅನೇಕರು ಇದ್ದರು.