ಸುದ್ದಿಮೂಲ ವಾರ್ತೆ ರಾಯಚೂರು, ಅ.07:
ವಿಶ್ವ ಕರ್ಮರ ಅಭಿವೃದ್ದಿಗಾಗಿನ ನಿಗಮ ಮಂಡಳಿಗೆ ಹೆಚ್ಚಿಿನ ಆರ್ಥಿಕ ನೆರವು ಸರ್ಕಾರದಿಂದ ಪಡೆಯುವುದರ ಜೊತೆಗೆ ಚಿನ್ನ ಮತ್ತು ಬೆಳ್ಳಿಿ ಆಭರಣಗಳ ಮೇಲಿನ ಜಿಎಸ್ಟಿ ಪಾಲು ನಿಗಮಕ್ಕೂ ನೀಡಲು ಕೋರಲಾಗುವುದು ಎಂದು ಕರ್ನಾಟಕ ರಾಜ್ಯ ವಿಶ್ವ ಕರ್ಮ ಅಭಿವೃದ್ದಿ ನಿಗಮದ ಅಧ್ಯಕ್ಷ ಸುಜ್ಞಾನಮೂರ್ತಿ ತಿಳಿಸಿದರು.
ನಗರದ ಪತ್ರಿಿಕಾ ಭವನದಲ್ಲಿ ಸುದ್ದಿಗೋಷ್ಠಿಿಯಲ್ಲಿ ಮಾತನಾಡಿ, ಕಳೆದ ಮೂರು ವರ್ಷಗಳಿಂದ ಬರೀ ನಿಗಮ ಘೋಷಣೆ ಮಾಡಿ ಬಿಡಲಾಗಿತ್ತುಘಿ. ಅಧ್ಯಕ್ಷರಿಲ್ಲದೆ ಕಾರ್ಯಕ್ರಮಗಳ ಅನುಷ್ಠಾಾನಕ್ಕೆೆ ತೊಂದರೆಯಾಗಿತ್ತುಘಿ. ಇದೀಗ ತಮ್ಮನ್ನು ಸರ್ಕಾರ ಅಧ್ಯಕ್ಷರನ್ನಾಾಗಿ ಮಾಡಿದೆ. ನಿಗಮಕ್ಕೆೆ 50 ಕೋಟಿ ಅನುದಾನವೂ ನಿಗದಿ ಪಡಿಸಲಾಗಿದೆ ಎಂದರು.
ರಾಜ್ಯದ ಉದ್ದಗಲಕ್ಕೂ ಸಂಚರಿಸಿ ವಿಶ್ವ ಕರ್ಮರ ವೃತ್ತಿಿ ಅಗತ್ಯ ಕೌಶಲ್ಯಘಿ, ಸಾಲ ಸೌಲಭ್ಯಗಳ ಬಗ್ಗೆೆ ಮಾಹಿತಿ ಪಡೆಯಲಾಗುವುದು. ರಾಜ್ಯದಲ್ಲಿ ಚಿನ್ನಘಿ, ಬೆಳ್ಳಿಿ ಆಭರಣ ತಯಾರಿಕೆ, ಖರೀದಿ ಹಾಗೂ ಮಾರಾಟ ಕ್ಷೇತ್ರದಲ್ಲಿ ಹೆಚ್ಚಿಿನವರು ಅಕ್ಕಸಾಲಿಗರಾಗಿ ವಿಶ್ವಕರ್ಮರೇ ಹೆಚ್ಚಿಿದ್ದಾಾರೆ. ಹೀಗಾಗಿ, ಇವುಗಳ ಮೇಲೆ ವಿಧಿಸುವ ಜಿಎಸ್ಟಿ ತೆರಿಗೆಯಲ್ಲಿ ನಿಗಮಕ್ಕೂ ಒಂದಷ್ಟು ಹಣ ನೀಡಲು ಸರ್ಕಾರಕ್ಕೆೆ ಮನವಿ ಮಾಡಲಾಗುವುದು ಎಂದರು.
ಎಷ್ಟು ಜನ ವೃತ್ತಿಿಯಲ್ಲಿದ್ದಾಾರೆ ಅವರಿಗೆ ಎಷ್ಟು ತರಬೇತಿಯ ಅಗತ್ಯವಿದೆ. ಶಿಕ್ಷಣ, ಅವರ ಸ್ಥಿಿತಿಗತಿ ಬಗ್ಗೆೆ ಈಗ ನಡೆಯುತ್ತಿಿರುವ ಸಮೀಕ್ಷೆೆಯಿಂದ ವಿವರ ಸಿಗಲಿದೆ ಆ ಮೂಲಕ ಈಗಿರುವ ಯೋಜನೆಗಳ ಜೊತೆಗೆ ಹೊಸದಾಗಿ ಏನೆಲ್ಲ ಯೋಜನೆ ರೂಪಿಸಬೇಕೆಂಬುದರ ಬಗ್ಗೆೆ ಸಮುದಾಯದವರ ಜೊತೆ ಸಮಾಲೋಚಿಸಿ ನಿರ್ಧರಿಸುತ್ತೇವೆ. ಸದ್ಯ ಅಧ್ಯಕ್ಷನಾಗಿ ಮಾತ್ರ ನಿಗಮದಲ್ಲಿದ್ದು ನಿರ್ದೇಶಕರ ಆಯ್ಕೆೆ ಮಾಡಬೇಕಿದೆ ಸರ್ಕಾರಕ್ಕೆೆ ನಿಯಮಾನುಸಾರ ಶೀಘ್ರವೇ ಪೂರ್ಣ ಪ್ರಮಾಣದ ಆಡಳಿತ ಮಂಡಳಿಗೆ ಮನವಿ ಮಾಡುವುದಾಗಿ ಹೇಳಿದರು.
ಸುದ್ದಿಗೋಷ್ಠಿಿಯಲ್ಲಿ ಸಮಾಜದ ಮುಖಂಡರಾದ ಮಾರುತಿ ಬಡಿಗೇರ, ಲಕ್ಷ್ಮೀಪತಿ, ವೌನೇಶ ಇತರರಿದ್ದರು.
ನಿಗಮದ ಅಧ್ಯಕ್ಷರು ರಾಯಚೂರಿಗೆ ಆಗಮಿಸಿದ್ದರೂ ಜಿಲ್ಲಾಾ ವಿಶ್ವಕರ್ಮ ಸಮಾಜದ ಸಂಘ ಹಾಗೂ ಮಹಾಸಭಾದ ಪದಾಧಿಕಾರಿಗಳು ಅಂತರ ಕಾಯ್ದುಕೊಂಡಿದ್ದು ಚರ್ಚೆಗೆ ಗ್ರಾಾಸವಾಯಿತು.
ಅಧ್ಯಕ್ಷರ ಸಂಚಾರದಲ್ಲಿ ಸಂಘದ ಯಾವೊಬ್ಬ ಪದಾಧಿಕಾರಿ ಜೊತೆಯಲ್ಲಿ ಕಂಡು ಬರಲಿಲ್ಲಘಿ. ಸಮಾಜದ ಮಾರುತಿ ಬಡಿಗೇರ , ಲಕ್ಷ್ಮೀಪತಿ ಯರಗೇರಾ ಮಾತ್ರ ನಿಗಮದ ಅಧ್ಯಕ್ಷರ ಜೊತೆ ಹಾಜರಿದ್ದರು.

