ಸುದ್ದಿಮೂಲವಾರ್ತೆ
ಕೊಪ್ಪಳ,ಸೆ.27: ಕಾಂಗ್ರೆಸ್ ಪಕ್ಷವು ಜನರ ಕೈಗೆ ಭಿಕ್ಷೆ ಪಾತ್ರೆ ನೀಡುತ್ತದೆ ಎಂದು ಜೆಡಿಎಸ್ ಕೋರ್ ಕಮಿಟಿ ಅಧ್ಯಕ್ಷ ಜಿ ಟಿ ದೇವೇಗೌಡ ಹೇಳಿದರು.
ಕೊಪ್ಪಳದಲ್ಲಿ ನಡೆದ ಜೆಡಿಎಸ್ ಪುನಶ್ಚೇತನ ಪರ್ವ ಕಾರ್ಯಕ್ರಮದಲ್ಲಿ ಮಾತನಾಡಿದರು. ಶರಣರ ಆಶಿರ್ವಾದ ಪಡೆದು ಪಕ್ಷದ ಅಭಿಯಾನ ಮಾಡುತ್ತಿದ್ದೇವೆ. ಕಾಂಗ್ರೆಸ್ ಇಷ್ಟು ಆಡಳಿತ ನಡೆಸಿ ಏನು ಅಭಿವೃದ್ದಿ ಮಾಡಿದ್ದಾರೆ ಎಂಬುವುದು ಗೊತ್ತಾಗುತ್ತದೆ ಎಂದರು.
ಕಾಂಗ್ರೆಸ್ ಪಕ್ಷವು ಗ್ಯಾರಂಟಿ ಯೋಜನೆಗೆ ಹಣ ಹೊಂದಿಸುವಲ್ಲಿ ನಿರತರಾಗಿದ್ದಾರೆ. ಅಭಿವೃದ್ದಿಯಾಗುತ್ತಿಲ್ಲ. ಕಾಂಗ್ರೆಸ್ ಪಕ್ಷವು ಎಂದು ನೀರಾವರಿಗೆ ಆದ್ಯತೆ ನೀಡಿಲ್ಲ ಎಂದರು.
ಈ ಸಂದರ್ಭದಲ್ಲಿ ಮತನಾಡಿದ ಸಿ ಎಸ್ ಪುಟ್ಟರಾಜು ಜೆಡಿಎಸ್ ಪಕ್ಷ ಉತ್ತರ ಕರ್ನಾಟಕದಲ್ಲಿ ಬಲಿಷ್ಠವಾಗಿದೆ. ಲೋಕಸಭೆಯಲ್ಲಿ ಸೀಟು ಹಂಚಿಕೆಯನ್ನು ಪಕ್ಷದ ಮುಖಂಡರು ತೀರ್ಮಾನಿಸಿ ಎರಡು ಪಕ್ಷದವರು ಚುನಾವಣೆಯಲ್ಲಿ ಗೆಲುವು ಸಾಧಿಸುತ್ತೇವೆ ಎಂದರು.
ಇದೇ ಸಂದರ್ಭದಲ್ಲಿ ಮಾತನಾಡಿದ ಹೆಚ್ ಕೆ ಕುಮಾರಸ್ವಾಮಿ ಮಾತನಾಡಿ ಪರಿಶಿಷ್ಠರಿಗೆ ಮೀಸಲಾತಿ ನೀಡಿ ಸಮಾಜಿಕ ನ್ಯಾಯ ನೀಡಿದ್ದು ಇದಕ್ಕೆ ದೇವೇಗೌಡರ ಕಾಣಿಕೆ. ಲೋಕಸಭೆಯಲ್ಲಿ ಚುನಾವಣೆಯಲ್ಲಿ ಗೆಲ್ಲುವ ಶಕ್ತಿ ಜೆಡಿಎಸ್ ಪಕ್ಷಕ್ಕಿದೆ ಎಂದರು.
ಇದೇ ಸಂದರ್ಭದಲ್ಲಿ ಮಾತನಾಡಿದ ಮಾಜಿ ಶಾಸಕ ರಾಜಾ ವೆಂಕಟಪ್ಪ ನಾಯಕ ಕಲ್ಯಾಣ ಕರ್ನಾಟಕದಲ್ಲಿ ಜೆಡಿಎಸ್ ಪಕ್ಷವು ಬಲಿಷ್ಠವಾಗಿದೆ. ಸಂಘಟನೆಯಾದರೆ ಹತ್ತು ಹದಿನೈದು ಸ್ಥಾನ ಗೆಲ್ಲುತ್ತೇವೆ. ಲೋಕಸಭೆಯ ನಂತರ ಈ ಕಾಂಗ್ರೆಸ್ ಸರಕಾರ ಉಳಿಯುವುದಿಲ್ಲ ಎಂದರು.
ಈ ಸಂದರ್ಭದಲ್ಲಿ ಮಾತನಾಡಿದ ಕರಿಯಮ್ಮ ನಾಯಕ ನಾನು ಶಾಸಕಿಯಾಗಿ ನಿಂತಿರೋದು ಜೆಡಿಎಸ್ ನಿಂದ. ದೇವೇಗೌಡರು ಹಾಗು ಕುಮಾರಣ್ಣ ಕಾರಣ. ನಾವು ಒಗ್ಗಟ್ಟಾಗಿದ್ದೇವೆ. ಕ್ಷೇತ್ರದ ವಿಷಯದಲ್ಲಿ ಮಾತನಾಡಿದ್ದೇವೆ. ಆದರೆ ಮುಖಂಡರು ಪಕ್ಷದ ವಿರುದ್ದ ಮಾತನಾಡಿಲ್ಲ .ಮೈತ್ರಿಯ ಬಗ್ಗೆ ಮುಖಂಡರ ನಿರ್ಧಾರಕ್ಕೆ ಬದ್ದ ಎಂದರು.
ಇದೇ ಸಂದರ್ಭದಲ್ಲಿ ಮಾತನಾಡಿದ ಮಾಜಿ ಸಚಿವ ಹನುಮಂತಪ್ಪ ಆಲ್ಕೋಡ ಜನಸಾಮಾನ್ಯರಿಗೆ ಸ್ಪಂದಿಸುವ ಉದ್ದೇಶದಿಂದ ಜೆಡಿಎಸ್ ಬಲಿಷ್ಢ ಪಡಿಸಬೇಕು. ಈಗಿನ ಸರಕಾರದಲ್ಲಿ ದಲಿತರ ಮೇಲೆ ದೌರ್ಜನ್ಯ ನಡೆಯುತ್ತಿದೆ. ಬಿಜೆಪಿಗಿಂತ ಹೆಚ್ಚಿನ ದಬ್ಬಾಳಿಕೆಯು ಈಗಿನ ಸರಕಾರದಿಂದ ಆಗುತ್ತದೆ ಎಂದರು.
ಈ ಸಂದರ್ಭದಲ್ಲಿ ಮಾತನಾಡಿದ ಮಾಜಿ ಸಚಿವ ವೆಂಕಟರಾವ್ ನಾಡಗೌಡ ಪಕ್ಷವನ್ನು ತಳಮಟ್ಟದಿಂದ ಕಟ್ಟಲು ಈಗ ಸಂಘಟನೆ ನಡೆದಿದೆ. ಜಾತ್ಯತೀತ ಪಕ್ಷ ಎಂದು ಜಾತಿವಾದಿಗಳ ಎಂದು ಕೇಳುತ್ತಿದ್ದಾರೆ. ಯಾರಿಗೆ ರಾಷ್ಟ್ರ ಪ್ರೇಮವಿದೆ ಅವರು ಜಾತ್ಯಾತೀತವಾದಿಗಳು.ನಾವು ಸಿದ್ದಾಂತ ಬಿಟ್ಟು ಹೋಗಿಲ್ಲ. ಸೀಟು ಹಂಚಿಕೆಯ ಬಗ್ಗೆ ನಿರ್ಧಾರವಾಗಬೇಕು. ತಳಮಟ್ಟದ ಕಾರ್ಯಕರ್ತರಲ್ಲಿಯ ಗೊಂದಲಗಳಿದ್ದರೆ ಬಗೆಹರಿಸುತ್ತೇವೆ ಎಂದರು.
ಸ್ವಾಗತವನ್ನು ಜೆಡಿಎಸ್ ಜಿಲ್ಲಾಧ್ಯಕ್ಷ ವೀರೇಶ ಮಹಾಂತಯ್ಯನಮಠ ಮಾಡಿದರು.ಪ್ರಸ್ತಾವಿಕವಾಗಿ ಸಿ ವಿ ಚಂದ್ರಶೇಖರ ಮಾತನಾಡಿ ದೇವೇಗೌಡರು ಹಾಗು ಕುಮಾರಣ್ಣ ಸಾರಥ್ಯದಲ್ಲಿ ಪಕ್ಷ ಬೆಳೆಸಬೇಕು. ಇದು ಕರ್ನಾಟಕದ ಸ್ವಾಭಿಮಾನಿ ಕನ್ನಡಿಗರ ಪಕ್ಷ. ಜೆಡಿಎಸ್ ಪಕ್ಷ ಕೇವಲ ಅಪ್ಪ ಮಕ್ಕಳ ಪಕ್ಷ ಎಂಬುವದನ್ನು ಹೊಡೆದುಹಾಕಬೇಕಾಗಿದೆ. ನರೇಂದ್ರ ಮೋದಿ ಕೈ ಪಡಿಸಬೇಕು.ಕಾಂಗ್ರೆಸ್ಸಿನ ದುರಾಡಳಿತ ಮಣಿಸಬೇಕೆಂಬ ಕಾರಣಕ್ಕೆ ಹೊಂದಾಣಿಕೆ ಮಾಡಿ 28 ಸ್ಥಾನ ಗೆಲ್ಲಸಬೇಕಾಗಿದೆ.
ಈ ಸಂದರ್ಭದಲ್ಲಿ ರಾಜುಗೌಡ. ನೇಮಿರಾಜ ನಾಯಕ. ದೊಡ್ಡಪ್ಪಗೌಡ ನರಬೋಳ ಮಾತನಾಡಿದರು ವೇದಿಕೆಯಲ್ಲಿ ಪ್ರಸನ್ನಕುಮಾರ, ತಿಪ್ಪರಾಯಪ್ಪ. ವೀರಭದ್ರಪ್ಪ ಹಾಲಹರವಿ, ಸುನೀಲಕುಮಾರ. ಸುರೇಶಗೌಡರು ಕೃಷ್ಣಾರಡ್ಡಿ , ಸಿದ್ದು ಬಂಡಿ. ಸುನೀತ ಚವ್ಹಾಣ ಇದ್ದರು.