ಸುದ್ದಿಮೂಲವಾರ್ತೆ
ಕೊಪ್ಪಳ,ಸೆ.27:ಬಿಜೆಪಿ ಜೆಡಿಎಸ್ ಹೊಂದಾಣಿಕೆ ನಿರಂತರವಾಗಿರುತ್ತದೆ ಎಂದು ಜೆಡಿಎಸ್ ಕೋರ್ ಕಮಿಟಿ ಅಧ್ಯಕ್ಷ ಜಿ ಟಿ ದೇವೇಗೌಡ ಹೇಳಿದರು.
ಅವರು ಇಂದು ಕೊಪ್ಪಳದಲ್ಲಿ ಮಾತನಾಡಿ ಈಗಿನ ಹೊಂದಾಣಿಕೆಯು ಲೋಕಸಭಾ ಚುನಾವಣೆಯ ನಂತರವೂ ಮುಂದುವರಿಯಲಿದೆ ಎಂದು ಹೇಳಿದರು.
ಈಗಿನ ಸಂದರ್ಭದಲ್ಲಿ ಪಕ್ಷ ಸಂಘಟನೆಗೆ ಸಿದ್ದವೆಂದು ಕಾರ್ಯಕರ್ತರು ಹೇಳಿದ್ದಾರೆ. ಬ ಮೈತ್ರಿ ವಿಷಯಕ್ಕಾಗಿ ಕರೆದ ಸಭೆಯಲ್ಲಿ ಸಿ ಎಂ ಇಬ್ರಾಹಿಂ ದಹ ಭಾಗಿಯಾಗಿದ್ದರು. ಈ ಸಭೆಯಲ್ಲಿ ದೇವೇಗೌಡರ ತೆಗೆದುಕೊಳ್ಳುವ ನಿರ್ಧಾರಕ್ಕೆ ಬದ್ದ ಎಂದಿದ್ದಾರೆ. ನಂತರ ಬೆಳೆವಣಿಗೆ ಗೊತ್ತಿಲ್ಲ ಎಂದರು.
ಅಲ್ಪ ಸಂಖ್ಯಾತರಿಗೆ 4 ಪರ್ಸಂಟೇಜ್ ಮೀಸಲಾತಿ ಹಿಂಪಡೆದಿದ್ದಾಗ ಮಾತನಾಡಿದ್ದು ದೇವೇಗೌಡರು ಮಾತ್ರ.ಅಲ್ಪ ಸಂಖ್ಯಾತರು ನಮ್ಮೊಂದಿಗೆ ಇರುತ್ತಾರೆ ಎಂದು ಹೇಳಿದರು.
ಈ ಹಿಂದೆ ನಾವು ಕಾಂಗ್ರೆಸ್ಸಿನವರೊಂದಿಗೆ ಹೋದಾಗ ಕೋಮುವಾದ ಇರಲಿಲ್ಲವೇ. ಅಂದು ನಮ್ಮನ್ನು ಕರೆದುಕೊಂಡು ಹೋದಾಗ ಈ ಕೋಮುವಾದ ಬರಲಿಲ್ಲವೇ.ಸಿದ್ದರಾಮಯ್ಯ ಈ ಹಿಂದೆ ಬಿಜೆಪಿಗೆ ಹೋಗಲು ಸಿದ್ದವಾಗಿದ್ದರು.ಮಹಾರಾಷ್ಟ್ರದಲ್ಲಿ ಅವರು ಯಾರೊಂದಿಗೆ ಹೊಂದಾಣಿಕೆ ಮಾಡಿಕೊಂಡಿದ್ದರು.ನಾವು ಯಾರೊಂದಿಗೆ ಹೊಂದಾಣಿಕೆ ಮಾಡಿಕೊಂಡರೂ ನಾವು ನಮ್ಮ ಸಿದ್ದಾಂತ ಬಿಡೋದಿಲ್ಲ ಎಂದರು.
4 ಪರ್ಸೆಂಟೇಜ್ ಮೀಸಲಾತಿ ಹಿಂಪಡೆದಿದ್ದನ್ನು ಈಗಿನ ಸರಕಾರ ಮತ್ತೆ ಜಾರಿಗೊಳಿಸಬೇಕಲ್ಲ ಯಾಕೆ ಮಾತನಾಡುತ್ತಿಲ್ಲ. ನಮ್ಮೊಂದಿಗೆ ಅಲ್ಪಸಂಖ್ಯಾತ ಇರುತ್ತಾರೆ. ನಾವು ಹೊಂದಾಣಿಕೆ ಮಾಡಿಕೊಂಡು ಈಗಿನ ಸರಕಾರ ತೆಗೆಯಬೇಕೆನ್ನುವುದು ಕಾರ್ಯಕರ್ತರ ಅಭಿಪ್ರಾಯವಾಗಿದೆ ಎಂದರು.