ಸುದ್ದಿಮೂಲ ವಾರ್ತೆ ಕಲಬುರಗಿ, ಡಿ.20:
ಇಂದಿನ ಯುವ ಸಮುದಾಯ ಮೊಬೈಲ್ ಸೇರಿದಂತೆ ಸೋಷಿಯಲ್ ಮೀಡಿಯಾ ಎಂಬ ಗುಂಗಿನಿಂದ ಹೊರಬರಬೇಕಿದೆ. ಸಾಮಾಜಿಕ ಜಾಲತಾಣದ ಮೇಲೆ ನಿಮ್ಮ ಭವಿಷ್ಯ ನಿರ್ಧರಿಸಬೇಡಿ ಎಂದು ಬಹುಭಾಷಾ ಸಿನಿಮಾ ನಟ ಪ್ರಕಾಶ್ ರಾಜ್ ಯುವ ಸಮುದಾಯಕ್ಕೆೆ ಕಿವಿ ಮಾತು ಹೇಳಿದರು.
ಗುಲಬರ್ಗಾ ವಿಶ್ವವಿದ್ಯಾಾಲಯದ ಡಾ.ಬಿ.ಆರ್.ಅಂಬೇಡ್ಕರ್ ಸಭಾಂಗಣದಲ್ಲಿ ನಡೆದ 2025-26ನೇ ಶೈಕ್ಷಣಿಕ ಸಾಲಿನ ಗುಲಬರ್ಗಾ ವಿಶ್ವವಿದ್ಯಾಾಲಯ ಅಂತರ ಮಹಾವಿದ್ಯಾಾಲಯಗಳ ಯುವಜನೋತ್ಸವಕ್ಕೆೆ ಡೊಳ್ಳು ಬಾರಿಸುವ ಮೂಲಕ ವಿದ್ಯುಕ್ತ ಚಾಲನೆ ನೀಡಿ ಮಾತನಾಡಿದ ಅವರು ಲೈಕ್, ಡಿಸ್ಲೈಕ್ನಿಂದ ಭವಿಷ್ಯ-ಬದುಕು ಕಟ್ಟಿಿಕೊಳ್ಳಲಾಗಲ್ಲ. ಕುಟುಂಬಸ್ಥರು, ನೆರಹೊರೆಯವರೊಂದಿಗೆ ಬೆರೆಯಿರಿ. ನಾವು ನಾವಾಗಿರೋಣ. ಆ ನಿಟ್ಟಿಿನಲ್ಲಿ ಸಾಗೋಣ ಎಂದರು.
ಯುವ ಜನೋತ್ಸವ ಕಾರ್ಯಕ್ರಮ ಒಳ್ಳೆೆಯ ಕವಿ, ನಟ, ಕಲಾವಿದನನ್ನು ಮಾಡಲು ಸಾಧ್ಯವಿಲ್ಲ. ಆದರೆ ಒಬ್ಬ ಪರಿಪಕ್ವತೆಯ ಮನುಷ್ಯನಾಗಿ ಮಾಡಬಹುದುದು. ಸರ್ವಾಂಗೀಣ ಅಭಿವೃದ್ಧಿಿಗೆ ವ್ಯಕ್ತಿಿತ್ವ ವಿಕಸನ ತುಂಬಾ ಅವಶ್ಯಕ. ಅದು ಇಂತಹ ಯುವಜನೋತ್ಸವದಲ್ಲಿ ಸರ್ವರೊಂದಿಗೆ ಬೆರೆಯುವಿಕೆಯಿಂದ ಸಿಗುತ್ತದೆ ಎಂಬುದನ್ನು ಮರೆಯದಿರಿ ಎಂದು ಯುವ ಸಮುದಾಯಕ್ಕೆೆ ಕಿವಿಮಾತು ಹೇಳಿದರು.
ಕಾರ್ಯಕ್ರಮ ಮುನ್ನ ಜ್ಞಾನಗಂಗಾ ಆವರಣದಲ್ಲಿ ಪ್ರಾಾಣಿ ಶಾಸ ವಿಭಾಗದಿಂದ ಡಾ.ಬಿ.ಆರ್.ಅಂಬೇಡ್ಕರ್ ಭವನದವರೆಗೆ ಭವ್ಯ ಸಾಂಸ್ಕೃತಿಕ ಮೆರವಣಿಗೆ ಜರುಗಿತು. ಗುಲಬರ್ಗಾ ವಿವಿ ಕುಲಪತಿ ಪ್ರೊೊ. ಶಶಿಕಾಂತ ಎಸ್. ಉಡಿಕೇರಿ, ವಿದ್ಯಾಾವಿಷಯಕ ಪರಿಷತ್ ಸದಸ್ಯ ಪ್ರೊೊ. ಕೆ.ಸಿದ್ದಪ್ಪ, ಮೌಲ್ಯಮಾಪನ ಕುಲಸಚಿವ ಡಾ. ಎನ್. ಜಿ. ಕಣ್ಣೂರ, ಕುಲಸಚಿವ ಹಾಗೂ ವಿದ್ಯಾಾರ್ಥಿ ಕಲ್ಯಾಾಣಾಧಿಕಾರಿ ಪ್ರೊೊ. ರಮೇಶ್ ಲಂಡನಕರ್, ವಿತ್ತಾಾಧಿಕಾರಿ ಜಯಾಂಬಿಕ ಸೇರಿದಂತೆ ವಿಶ್ವವಿದ್ಯಾಾಲಯದ ಅಧಿಕಾರಿಗಳು, ವಿವಿಧ ವಿಭಾಗಗಳ ಮುಖ್ಯಸ್ಥರು, ಪ್ರಾಾಧ್ಯಾಾಪಕರು ಶಿಕ್ಷಕ-ಶಿಕ್ಷಕೇತರ ಸಿಬ್ಬಂದಿಗಳು, ಅತಿಥಿ ಶಿಕ್ಷಕರು, ವಿದ್ಯಾಾರ್ಥಿಗಳಿದ್ದರು.
ಯುವಜನೋತ್ಸವದ ಮೊದಲನೇ ದಿನವಾದ ಶನಿವಾರ ಡಾ. ಬಿ.ಆರ್. ಅಂಬೇಡ್ಕರ್ ಭವನದ ಮುಖ್ಯ ಸಭಾಂಗಣದಲ್ಲಿ ವೃಂದ ಗಾಯನ (ಭಾರತೀಯ), ವೃಂದಗಾಯನ (ಪಾಶ್ಚಿಿಮಾತ್ಯ.) ಪಾಶ್ಚಿಿಮಾತ್ಯ ಇನ್ ಸ್ಟ್ರುಮೆಂಟಲ್ ಸೋಲೋ ಹಾಗೂ ಏಕವ್ಯಕ್ತಿಿ ಸ್ವರಗಾಯನ (ಪಾಶ್ಚಿಿಮಾತ್ಯ) ಸ್ಪರ್ಧೆಗಳು ಮತ್ತು ಡಾ. ಬಿ.ಆರ್. ಅಂಬೇಡ್ಕರ್ ಭವನದ ಮೊದಲನೇ ಮಹಡಿಯಲ್ಲಿ ಕಾರ್ಟೂನಿಂಗ್ ಮತ್ತು ಕೋಲಾಜ್ ಸ್ಪರ್ಧೆಗಳು ಯಶಸ್ವಿಿಯಾಗಿ ಜರುಗಿದವು.
ಗುಲಬರ್ಗಾ ವಿವಿ ಅಂತರ ಮಹಾವಿದ್ಯಾಾಲಯ ಯುವಜನೋತ್ಸವಕ್ಕೆ ಚಾಲನೆ ಮೊಬೈಲ್ ಗೀಳಿನಿಂದ ಹೊರಬನ್ನಿ, ಸಾಮಾಜಿಕ ಜಾಲತಾಣಗಳ ಮೇಲೆ ಅವಲಂಬಿತರಾಗಬೇಡಿ – ಪ್ರಕಾಶ ರಾಜ್

