ಯುವಘಟಕದ ಅಧ್ಯಕ್ಷರಾಗಿ ಗುಂಡು ಗುತ್ತೇದಾರ ಜನಿವಾರ ಆಯ್ಕೆ
ಜೇವರ್ಗಿ:ತಾಲೂಕಿನ ಭೋವಿ ವಡ್ಡರ ಸಮಾಜದ ಯುವ ಘಟಕದ ತಾಲೂಕ ಅಧ್ಯಕ್ಷರಾಗಿ ಗುಂಡು ಗುತ್ತೇದಾರ್ ಜನಿವಾರ ಆಯ್ಕೆಯಾಗಿದ್ದಾರೆ.
ಈ ಸಂದರ್ಭದಲ್ಲಿ ತಾಲೂಕ ಯುವ ಘಟಕದ ಗೌರವಾಧ್ಯಕ್ಷರಾಗಿ ಮೌನೇಶ್, ಪ್ರಧಾನ ಕಾರ್ಯದರ್ಶಿಗಳಾಗಿ ರಾಜಶೇಖರ್ ಮಂದವಾಲ್, ಕಾರ್ಯಾಧ್ಯಕ್ಷರಾಗಿ ಲಕ್ಷ್ಮಣ ಅರಳಗುಂಡಗಿ, ಉಪಾಧ್ಯಕ್ಷರಾಗಿ ನಿಂಗು ನಂದಿಹಳ್ಳಿ, ಪರಸು ನೇದಲಗಿ, ಶಾಂತಪ್ಪ ಶಕಾಪುರ, ಪ್ರಕಾಶ ಗುತ್ತೇದಾರ, ದೀಪಕ್ ಜಾದವ್, ದುರ್ಗಪ್ಪ ದೇವಕೇರಿ, ಮಲ್ಲಿಕಾರ್ಜುನ್ ದಂಡುಲ್ಕರ್, ಸಹ ಕಾರ್ಯದರ್ಶಿ ತಿಪ್ಪಣ್ಣ ಗೌಂಡಿ, ಸುನಿಲ್ ಬಿ, ಭೀಮರಾಯ ಪವರ್ ಸಂಘಟನಾ ಸಂಚಾಲಕರು, ಮರೆಪ್ಪ ಖಜಾಂಚಿ, ಸಂಘಟನಾ ಸಂಚಾಲಕರು ರಾಮು ಯಡ್ರಾಮಿ, ಸಹ ಕಾರ್ಯದರ್ಶಿ ವೀರೇಶ್ ಇಂಗಳಗಿ, ಯಲ್ಲಪ್ಪ ಸಿದ್ದಪ್ಪ ಯಡ್ರಾಮಿ, ಶರಣು ಯಲಗೋಡ, ಸಂಘಟನೆ ಸದಸ್ಯರು ಆಯ್ಕೆಯಾಗಿದ್ದಾರೆಂದು ಕಮಿಟಿ ತಿಳಿಸಿದೆ.
ಈ ಸಂದರ್ಭದಲ್ಲಿ ರವಿಚಂದ್ರ ಗುತ್ತೇದಾರ್ ಶರಣು ಗುತ್ತೇದಾರ್, ಶಿವು ಗುತ್ತೇದಾರ್, ಶರಣಪ್ಪ ಗುತ್ತೇದಾರ್, ನಾಗರಾಜ್ ಲಕಣಪುರ್ ಭೋವಿ ಸಮಾಜದ ಯುವಕರು ಹಿರಿಯರು ಉಪಸ್ಥಿತರಿದ್ದರು.