ಸುದ್ದಿಮೂಲ ವಾರ್ತೆ
ಹೊಸಕೋಟೆ, ಜು 3 : ಅಜ್ಞಾನದಿಂದ ಜ್ಞಾನದ ಬೆಳಕನ್ನು ನೀಡುತ್ತಾ ಗುರಿಮುಟ್ಟುವ ದಾರಿ ತೋರಿಸುವವರೆ ಗುರುಗಳು ಎಂದು ಕಲಾವಿದರ ಕ್ಷೇಮಾಭಿವೃದ್ಧಿ ಸಂಘದ ಮುಖ್ಯ ಸಲಹೆಗಾರ ಮುನಿರಾಜ ಭಾಗವತರು ತಿಳಿಸಿದರು
ನಗರದ ಕಲಾವಿದರ ಕ್ಷೇಮಾಭಿವೃದ್ಧಿ ಸಂಘದ ಕಚೇರಿಯ ಆವರಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಗುರುವಂದನಾ ಕಾರ್ಯಕ್ರಮದಲ್ಲಿ ರಂಗಭೂಮಿ ನಿರ್ದೇಶಕರಾದ ರಾಮಚಂದ್ರಪ್ಪ ಮತ್ತು ವೇಣುಗೋಪಾಲ್ ರವರನ್ನು ಅಬಿನಂಧಿಸಿ ಮಾತನಾಡಿದರು.
ಗುರು ಎಂದರೆ ಅಂಧಕಾರದಿಂದ ಬೆಳಕಿನೆಡೆಗೆ ನಡೆಸುವವರೂ ಎಂದು ಅರ್ಥವಿದ್ದು ಹಿಂದೂ ಮತ್ತು ಬೌಧ್ದ ಧರ್ಮಗಳಲ್ಲಿ ಗುರುಪೌರ್ಣಿಮೆಯಂದು ಗುರುಗಳನ್ನು ಪೂಜಿಸುವ ಪರಿಪಾಠವಿದ್ದು, ನಮಗೆ ಗೊತ್ತಿಲ್ಲದ ಯಾವುದೇ ವಿಷಯದ ಬಗ್ಗೆ ಬೆಳಕು ಚೆಲ್ಲಿ ಜ್ಞಾನರ್ಜನೆ ಮಾಡಿಸುವ ಪ್ರತಿಯೊಬ್ಬರೂ ಸಹ ಗುರುವಾಗಿದ್ದು ಅಂತಹ ಗುರುಗಳನ್ನು ಗೌರವಿಸಿ ದೈವಭಾವನೆಯಿಂದ ಪೂಜಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದರು.
ಈ ಸಂಧರ್ಭದಲ್ಲಿ ಕಲಾವಿದರ ಕ್ಷೇಮಾಭಿವೃದ್ಧಿ ಸಂಘದ ಉಪಾಧ್ಯಕ್ಷ ಬಸವರಾಜಪ್ಪ, ಕಾರ್ಯದರ್ಶಿ ಶ್ರೀನಿವಾಸ್ ಮೂರ್ತಿ, ಖಜಾಂಚಿ ಈಶ್ವರ್ ರಾವ್ , ನಿರ್ದೇಶಕ ರಾಮಾಂಜಿನಪ್ಪ, ಸೀಮೆ ಹಸು ನಾಗರಾಜ್ ಸೊಣ್ಣಳ್ಯಪ್ಪ ಸೇರಿದಂತೆ ಇತರರು ಇದ್ದರು.