ಸುದ್ದಿಮೂಲ ವಾರ್ತೆ ಬೀದರ್, ಡಿ.06:
ನಗರದ ನೆಹರು ಸ್ಟೇಡಿಯಂ ಹತ್ತಿಿರವಿರುವ ಗುರು ನಾನಕ ಪಬ್ಲಿಿಕ್ ಶಾಲೆಯ ವಾರ್ಷಿಕೋತ್ಸವ ಸಡಗರ ಸಂಭ್ರಮದಿಂದ ಶಾಲೆಯ ಆವರಣದಲ್ಲಿ ಜರುಗಿತು.
ಹಿರಿಯ ಸಿವಿಲ್ ನ್ಯಾಾಯಾಧೀಶ ಪ್ರಕಾಶ ಅರ್ಜುನ್ ಬನಸೋಡೆ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ, ವಿದ್ಯಾಾರ್ಥಿಗಳು ಅಂಕಗಳನ್ನು ಗಳಿಸುವುದೆ ಮುಖ್ಯವಲ್ಲ. ಪಠ್ಯದ ಜೊತೆಗೆ ವಿದ್ಯಾಾರ್ಥಿಗಳು ನೈತಿಕ, ಆಧ್ಯಾಾತ್ಮಿಿಕ, ಭೌದ್ದಿಕ ಮತ್ತು ಮಾನಸಿಕವಾಗಿ ಬೆಳೆದರೆ ಭವಿಷ್ಯ ರೂಪಿಸುವಲ್ಲಿ ಯಶಸ್ವಿಿಪಡೆದುಕೊಳ್ಳಲು ಸಾಧ್ಯವೆಂದು ಮಕ್ಕಳಿಗೆ ಸಲಹೆ ಮಾಡಿದರು.
ಇನ್ನೊೊರ್ವ ಮುಖ್ಯ ಅತಿಥಿ ಪಶು ವೈದ್ಯಕೀಯ ಕಾಲೇಜಿನ ಡೀನ್ ಡಾ. ಮಾಣಿಕ ಕಿಶನ್ ತಾಂದಳೆ ಭಾಗವಹಿಸಿ ಮಾತನಾಡಿ, ಜಿಲ್ಲೆಯಲ್ಲಿ ಗುರು ನಾನಕ ಶಾಲೆಯು ಶಿಕ್ಷಣ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸುತ್ತ ಮಕ್ಕಳ ಭವಿಷ್ಯ ನಿರ್ಮಿಸುವ ಕಾರ್ಯ ಮಾಡುತ್ತಿಿರುವುದು ಶ್ಲಾಾಘನೀಯ ಕಾರ್ಯವೆಂದು ತಿಳಿಸಿದರು.
ಮಕ್ಕಳಿಗೆ ಶಿಕ್ಷಕರ ಮಾಗದರ್ಶನ ಅತ್ಯವಶ್ಯಕವಾಗಿದೆ. ಈ ಯುಗದಲ್ಲಿ ವಿದ್ಯಾಾಭ್ಯಾಾಸವು ಚೆನ್ನಾಾಗಿ ಕೊಡಿಸಬೇಕೆಂದು ಪಾಲಕರಿಗೆ ಕಿವಿ ಮಾತು ಹೇಳಿದರು.
ಇದೇ ಸಂದರ್ಭದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಾಣ ಅಭಿವೃದ್ಧಿಿಯ ಸಲಹಾ ಸದಸ್ಯರಾಗಿ ಆಯ್ಕೆೆಯಾಗಿರುವ ಶೈನಿ ಪ್ರದೀಪ್ ಗುಂಟಿ ಅವರನ್ನು ಸನ್ಮಾಾನಿಸಲಾಯಿತು.
ಶಾಲೆಯ ಆಡಳಿತ ಮಂಡಳಿಯ ಉಪಾಧ್ಯಕ್ಷೆ ಡಾ. ರೇಷ್ಮಾಾ ಕೌರ್ಅವರು ವಾರ್ಷಿಕ ವರದಿ ವಾಚನ ಮಾಡಿ ಶಾಲೆಯ ಐದು ದಶಕಗಳ ಸುದೀರ್ಘ ಪಯಣದ ಸಾಹಸಗಾಥೆ ತೆರೆದಿಟ್ಟರು.
ಇದೇ ಸಂದರ್ಭದಲ್ಲಿ ಗುರು ನಾನಕ ಶಾಲೆಯ ಸುವರ್ಣ ಮಹೋತ್ಸವ ನಿಮಿತ್ಯ ಶಾಲೆಯ ಸಂಚಿಕೆ ಬಿಡುಗಡೆ ಮಾಡಲಾಯಿತು ಮತ್ತು 25ವರ್ಷ ಶಾಲೆಯಲ್ಲಿ ಸೇವೆ ಸಲ್ಲಿಸಿದ ಸಿಬ್ಬಂದಿ ವರ್ಗದವರಿಗೆ ಸನ್ಮಾಾನಿಸಲಾಯಿತು.
ಈ ಕಾರ್ಯಕ್ರಮದ ಅಧ್ಯಕ್ಷತೆ ಸಂಸ್ಥೆೆ ಅಧ್ಯಕ್ಷ ಡಾ.ಎಸ್.ಬಲಬೀರ್ ಸಿಂಗ್ ಅವರು ವಹಿಸಿದ್ದರು. ಈ ಸಂದರ್ಭದಲ್ಲಿ ಕಾರ್ಯದರ್ಶಿಗಳಾದ ಸರದಾರ ನಾನಕ ಸಿಂಗ್, ಸರದಾರ ಪ್ರೀೀತಮ ಸಿಂಗ್, ಪ್ರಾಾಂಶುಪಾಲೆ ನಲಿನಿ ಡಿ.ಜಿ., ಅಮಜದ ಅಲಿ, ಡೀನ್ ಬಿ.ಹನುಮಾನ, ಮುಖ್ಯ ಗುರು ಆರ್ೀ ಹಾದಿ ಮತ್ತು ಸಿಬ್ಬಂದಿ ವರ್ಗದವರು ಉಪಸ್ಥಿಿತರಿದ್ದರು.
ಗುರು ನಾನಕ ಪಬ್ಲಿಕ್ ಶಾಲೆಗೆ 50ನೇ ಸಂಭ್ರಮ ಪಠ್ಯೇತರ ಚಟುವಟಿಕೆಗೂ ಆದ್ಯತೆ ಇರಲಿ : ನ್ಯಾ. ಬನಸೋಡೆ

