ಸುದ್ದಿಮೂಲ ವಾರ್ತೆ ಸಿರವಾರ, ಜ.29:
ಪಟ್ಟಣದ ಅಭಿವೃದ್ಧಿಿ ಕಾರ್ಯಕ್ಕೆೆ ಸಾರ್ವಜನಿಕರು ಹಾಗೂ ಎಲ್ಲಾ ಸದಸ್ಯರು ಸಹಕಾರ ನೀಡಬೇಕು ಎಂದು ಪಟ್ಟಣ ಪಂಚಾಯತಿ ನೂತನ ಅಧ್ಯಕ್ಷ ಹಾಜಿ ಚೌದ್ರಿಿ ಹೇಳಿದರು.
ಅವರು ಗುರುವಾರ ಪಟ್ಟಣ ಪಂಚಾಯತಿ ಅಧ್ಯಕ್ಷ ಪದಗ್ರಹಣ ಸ್ವೀಕರಿಸಿ ಮಾತನಾಡಿದರು.
ರಾಜ್ಯದಲ್ಲಿ ನಮ್ಮದೇ ಸರಕಾರ ಇದ್ದು ಸಚಿವರಾದ ಎನ್.ಎಸ್.ಭೋಸರಾಜು, ಶಾಸಕ ಹಂಪಯ್ಯ ನಾಯಕ, ಸಂಸದರು, ನಮ್ಮವರೆ ಇರುವುದರಿಂದ ಹೆಚ್ಚಿಿನ ಅನುದಾನ ಹಾಗೂ ಬಡವರಿಗೆ ಆಶ್ರಯ ಮನೆಗಳು ನೀಡುವ ಭರವಸೆ ನೀಡಿದ್ದಾರೆ.
ಪಟ್ಟಣದಲ್ಲಿ ರಸ್ತೆೆ ವಿಭಜಕ, ಚರಂಡಿ, ಮಿನಿ ವಿಧಾನ ಸೌಧ, ಕ್ರೀೆಡಾಂಗಣ ಸೇರಿದಂತೆ ಅನೇಕ ಕಾರ್ಯಕ್ಕೆೆ ಚಾಲನೆ ನೀಡಿದ್ದಾರೆ, ನಾನು ಪಟ್ಟಣದ ಮೂಲಭೂತ ಸೌಕರ್ಯಗಳ ಬಗ್ಗೆೆ ಹೆಚ್ಚಿಿನ ಪ್ರಮಾಣದಲ್ಲಿ ಶ್ರಮಿಸಿ ನಮ್ಮ ನಾಯಕರ ಹೆಸರು ಉಳಿಸುವ ಹಾಗೂ ಎಲ್ಲಾ ಸದಸ್ಯರ ವಿಶ್ವಾಾಸಕ್ಕೆೆ ತೆಗೆದುಕೊಂಡು, ಕಾಂಗ್ರೆೆಸ್ ಪಕ್ಷದ ಮುಖಂಡರಿಗೆ, ಕಾರ್ಯಕರ್ತರಿಗೆ ಸಹಕಾರ ನೀಡಲಾಗುತ್ತದೆ, ಪ.ಪಂ.ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆೆಮಾಡಲು ಪಕ್ಷ ಭೇದ ಮರೆತು ಸಹಕಾರ ನೀಡಿದ್ದು, ಅಭಿವೃದ್ಧಿಿಗೂ ಸಹ ಸಹಕಾರ ನೀಡಬೇಕು ಎಂದರು.
ಈ ಸಂದರ್ಭದಲ್ಲಿ ಪ.ಪಂ.ಉಪಾಧ್ಯಕ್ಷೆ ಲಕ್ಷ್ಮೀ ಆದೆಪ್ಪ, ಮಾಜಿ ಅಧ್ಯಕ್ಷ ವೈ.ಭೂಪನಗೌಡ, ಸದಸ್ಯರಾದ ಹಸನ್ ಸಾಬ್, ಮೌಲಸಾಬ್, ಕೃಷ್ಣನಾಯಕ, ಅಜಿತ್ಕುಮಾರ, ಗಡ್ಲ ಅಮರೇಶ, ವಿನಯ್,ಮಾರ್ಕಪ್ಪ, ಗ್ಯಾಾನಪ್ಪ,ಬಂದೇನವಾಜ್, ನಾಗರಾಜ, ಪ.ಪಂ.ಮುಖ್ಯಾಾಧಿಕಾರಿ ಸುರೇಶ ಶೆಟ್ಟಿಿ, ಜಿ.ವೀರೇಶ, ಬಸವರಾಜ ಬೆಣ್ಣೆೆ ಸೇರಿದಂತೆ ಅನೇಕರು ಇದ್ದರು.
ಪಟ್ಟಣದ ಅಭಿವೃದ್ಧಿಗೆ ಸಹಕಾರ ನೀಡಿ – ಹಾಜಿ ಚೌದ್ರಿ

