ಸುದ್ದಿಮೂಲ ವಾರ್ತೆ ಸಿರವಾರ, ಜ.20:
ಸ್ಥಳೀಯ ಪಟ್ಟಣ ಪಂಚಾಯತಿ ಅಧ್ಯಕ್ಷರ ರಾಜೀನಾಮೆಯಿಂದ ತೆರವಾದ ಸ್ಥಾಾನಕ್ಕೆೆ ಮಂಗಳವಾರ ನಡೆದ ಚುನಾವಣೆಯಲ್ಲಿ ಕಾಂಗ್ರೆೆಸ್ ಪಕ್ಷದ ಅಭ್ಯರ್ಥಿಯಾಗಿ 6ನೇ ವಾರ್ಡ್ ಸದಸ್ಯ ಹಾಜೀ ಚೌದ್ರಿಿ ಮಾತ್ರ ನಾಮಪತ್ರ ಸಲ್ಲಿದರಿಂದ ಅವಿರೋಧವಾಗಿ ಆಯ್ಕೆೆಯಾದರು ಎಂದು ಚುನಾವಣೆಯ ಅಧಿಕಾರಿ ಮಾನ್ವಿಿ ತಹಶಿಲ್ದಾಾರ ಭೀಮರಾಯ ಸಮುದ್ರ ಘೋಷಿಸಿದರು.
ಅಧ್ಯಕ್ಷ ಸ್ಥಾಾನ ಸಾಮಾನ್ಯ ವರ್ಗಕ್ಕೆೆ ಮೀಸಲಾಗಿದ್ದರಿಂದ ಅಧ್ಯಕ್ಷ ಆಯ್ಕೆೆ ಭಾರೀ ಕುತೂಹಲ ಕೆರಳಿಸಿತ್ತು.
ಪ.ಪಂ.ಮೊದಲ ಅವಧಿಯಲ್ಲಿ ಒಳ ಒಪ್ಪಂದದ ಪ್ರಕಾರ ಭೂಪನಗೌಡ ಅವರು 15ತಿಂಗಳ ನಂತರ ತಮ್ಮ ಸ್ಥಾಾನಕ್ಕೆೆ ರಾಜೀನಾಮೆ ನೀಡಿದ್ದರು.
ಇನ್ನುಳಿದ ಅವಧಿಗೆ ಕಾಂಗ್ರೆೆಸ್ ಪಕ್ಷದಿಂದ ಆಯ್ಕೆೆಯಾದ 3ನೇ ವಾರ್ಡ್ ಸದಸ್ಯ ಹಸೇನ ಅಲಿ ಸಾಬ್ ಹಾಗೂ ಮೌಲಸಾಬ್ ವರ್ಚಸ್ಸು ಹೆಸರು ಮುಂಚೂಣಿಯಲ್ಲಿತ್ತು. ಕೊನೆ ದಿನ ತಾತನ ವಿರುದ್ಧ ಮೊಮ್ಮಗ ಹಾಜೀ ಚೌದ್ರಿಿ ಅವಿರೋಧವಾಗಿ ಆಯ್ಕೆೆಯಾದರು.
ಒಟ್ಟು 20 ಸದಸ್ಯರು. ಕಾಂಗ್ರೆೆಸ್ ಪಕ್ಷದ 9 ಜನ ಸದಸ್ಯರು, ಬಿಜೆಪಿ 6, ಜೆಡಿಎಸ್ 3 ಇಬ್ಬರು ಪಕ್ಷೇತರರು ಇದರಲ್ಲಿ ಒಬ್ಬರು ಕಾಂಗ್ರೆೆಸ್ ಪಕ್ಷದಲ್ಲಿ ಗುರುತಿಸಿಕೊಂಡಿದ್ದಾಾರೆ. ಕಾರಣ ಕಾಂಗ್ರೆೆಸ್ಗೆ 10 ಸಂಸದರು, ಶಾಸಕರು ಸೇರಿ 12 ಬಲ ಆದ ಕಾರಣ, ಬಿಜೆಪಿ ಪಕ್ಷದ ಸದಸ್ಯರು ನಾಮಪತ್ರ ಸಲ್ಲಿಸಲು ಮುಂದೆ ಬಾರದೆ ಕಣದಿಂದ ಹಿಂದೆ ಸರಿದರು.
ಈ ಸಂದರ್ಭದಲ್ಲಿ ಪ.ಪಂ.ಮುಖ್ಯಾಾಧಿಕಾರಿ ಸುರೇಶ ಶೆಟ್ಟಿಿ, ಸದಸ್ಯರಾದ ಭೂಪನಗೌಡ, ಸೂರಿ ದುರಗಣ್ಣ, ಹಸೇನ ಅಲಿ ಸಾಬ್, ಮೌಲಸಾಬ್, ಚೆನ್ನಪ್ಪ ಗಡ್ಲ, ಮುಖಂಡರಾದ ಬಿ.ಕೆ.ಅಮರೇಶಪ್ಪ, ಕೆ.ಬಸವರಾಜ ನಾಯಕ, ಚೆನ್ನಬಸವ ಗಡ್ಲ, ರಂಗನಾಥ ಸೇರಿದಂತೆ ಅನೇಕರು ಇದ್ದರು.
ನಂತರ ಪ್ರವಾಸಿ ಮಂದಿರದಲ್ಲಿ ನೂತನ ಅಧ್ಯಕ್ಷರಿಂದ ಶಾಸಕ ಹಂಪಯ್ಯ ನಾಯಕ ಹಾಗೂ ಸರ್ವ ಸದಸ್ಯರಿಗೆ ಸನ್ಮಾಾನಿಸಿ ಗೌರವಿಸಿದರು.
ಸಿರವಾರ : ಪ.ಪಂ. ಅಧ್ಯಕ್ಷರಾಗಿ ಹಾಜೀ ಚೌದ್ರಿ ಅವಿರೋಧ ಆಯ್ಕೆ, ತಾತನ ಹಿಂದಿಕ್ಕಿದ ಮೊಮ್ಮಗ

