ಸುದ್ದಿಮೂಲ ವಾರ್ತೆ ಕವಿತಾಳ, ಡಿ.09:
ಸಮೀಪದ ವಟಗಲ್ ಗ್ರಾಾಮ ಪಂಚಾಯತಿ ವ್ಯಾಾಪ್ತಿಿಯ ಇರಕಲ್ ಗ್ರಾಾಮದಲ್ಲಿ ಮೂರು ತಿಂಗಳಿಂದ ಪಡಿತರ ವಿತರಣೆ ಮಾಡಿಲ್ಲ ಎಂದು ಗ್ರಾಾಮಸ್ಥರು ಆರೋಪಿಸಿದರು.
ಗ್ರಾಾಮದಲ್ಲಿ 175 ಪಡಿತರ ಕಾರ್ಡ್ ಗಳಿದ್ದು ಪ್ರತಿ ತಿಂಗಳು ಗ್ರಾಾಮಕ್ಕೆೆ ಬಂದು ಥಂಬ್ ಹಾಕಿಸಿಕೊಂಡು ಹೋಗುತ್ತಾಾರೆ ಅದಕ್ಕೆೆ ಪ್ರತಿಯೊಬ್ಬರಿಂದಲೂ ಪ್ರತಿ ಚೀಟಿಗೆ 20 ರೂಪಾಯಿ ತೆಗೆದುಕೊಳ್ಳುತ್ತಾಾರೆ ಅಕ್ಕಿಿ ಕೇಳಿದರೆ ಇಂದು ನಾಳೆ ವಾರಬಿಟ್ಟು ಕೊಡುತ್ತೇವೆ ಎಂದು ಸಬೂಬು ಹೇಳುತ್ತಾಾರೆ ಹೀಗೆಯೇ ಮೂರು ತಿಂಗಳಿಂದ ಜಾರಿಕೊಂಡು ಹೋಗುತ್ತಿಿದ್ದಾರೆ. ಕೆಲವರಿಗೆ ಮೂರು ತಿಂಗಳಾಗಿದೆ ಇನ್ನು ಕೆಲವರಿಗೆ 5 ತಿಂಗಳಿಂದ ಪಡಿತರ ಕೊಟ್ಟಿಿಲ್ಲ.
ಗ್ರಾಾಮದಲ್ಲಿ ಗ್ರಾಾಮ ದೇವತೆ ಜಾತ್ರೆೆ ಇದೆ ತಿನ್ನಲು ಅಕ್ಕಿಿ ಇಲ್ಲ ಖರೀದಿ ಮಾಡಿಕೊಂಡು ತಿನ್ನುವ ಪರಿಸ್ಥಿಿತಿ ಉಂಟಾಗಿದೆ. ವಾರದಲ್ಲಿ ಪಡಿತರ ಅಕ್ಕಿಿ ಕೊಡದಿದ್ದರೆ ಗ್ರಾಾಮಸ್ಥರೆಲ್ಲರೂ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸುತ್ತೇವೆ ಎಂದು ನಿಂಗಮ್ಮ, ಅಯ್ಯಮ್ಮ, ನರಸಮ್ಮ, ಯಂಕಮ್ಮ, ರೆಣಕಮ್ಮ, ವಿಜಯ ಲಕ್ಷ್ಮಿಿ, ಪಾರ್ವತಮ್ಮ, ದುರುಗಮ್ಮ, ಹುಚ್ಚಮ್ಮ, ಪರಶುರಾಮ, ಬಸವರಾಜ, ಹನುಮಂತ, ಬಸಲಿಂಗಪ್ಪ, ದುರುಗಪ್ಪ, ರಮೇಶ, ರಾಘವೇಂದ್ರ, ನಾಗರಾಜ, ಮಲ್ಲಪ್ಪ ಆಕ್ರೋೋಶ ವ್ಯಕ್ತಪಡಿಸಿದರು.
ಈ ಬಗ್ಗೆೆ ತಮ್ಮ ಗಮನಕ್ಕೆೆ ಇಲ್ಲ ಸಂಬಂಧಪಟ್ಟ ಅಧಿಕಾರಿಗಳ ಜೊತೆ ಮಾತನಾಡಿ ಸಮಸ್ಯೆೆ ಸರಿಪಡಿಸಲಾಗುವುದು ಎಂದು ತಹಸೀಲ್ದಾಾರ್ ಮಂಜುನಾಥ ಭೋಗಾವತಿ ತಿಳಿಸಿದರು.

