ಸುದ್ದಿಮೂಲ ವಾರ್ತೆ ಲಿಂಗಸುಗೂರು, ಜ.13:
ತಾಲೂಕಿನ ಸಾರ್ವಜನಿಕ ಆಸ್ಪತ್ರೆೆಗೆ ತಾಲೂಕು ಸೇರಿದಂತೆ ಸುತ್ತಮುತ್ತಲ ತಾಲೂಕಿನಿಂದ ನಿತ್ಯ ಸಾವಿ ರಾರು ರೋಗಿಗಳು ತಪಾಸಣೆ ಆಗಮಿಸುತ್ತಾಾರೆ ಆದರೆ ನುರಿತ ತಜ್ಞ ವೈದರ ನೇಮಕವಿಲ್ಲದೆ ಪರದಾಡುವಂತಾಗಿದ್ದು ಕೂಡಲೇ ತಜ್ಞ ವೈದ್ಯರ ನೇಮಕ ಮಾಡುವಂತೆ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಾಭಿಮಾನಿ ಸೇನೆ ತಾಲೂಕು ಅಧ್ಯಕ್ಷ ಜಿಲಾನಿ ಪಾಷಾ ನೇತೃತ್ವದಲ್ಲಿ ಕಾರ್ಯಕರ್ತರು ಪಟ್ಟಣದಲ್ಲಿ ಅರೆಬೆತ್ತಲೆ ಮೆರೆವಣೆಗೆ ನಡೆಸಿ ಮುಖ್ಯ ವೈದ್ಯಾಾಧಿಕಾರಿ ಡಾ, ರುದ್ರಗೌಡ ಪಾಟೀಲ್ ಅವರಿಗೆ ಮನವಿ ಸಲ್ಲಿಸಿದರು.
ಆರೋಗ್ಯ ಸಚಿವರಿಗೆ ಬರೆದ ಮನವಿಯಲ್ಲಿ ಪ್ರತಿದಿನ ನೂರಾರು ಬಡ ಮತ್ತು ಮಧ್ಯಮ ವರ್ಗದ ಜನರು ಆರೋಗ್ಯ ಸಮಸ್ಯೆೆಗಳಿಗೆ ಚಿಕಿತ್ಸೆೆ ಪಡೆಯಲು ಲಿಂಗಸಗೂರು ಸರಕಾರಿ ಆಸ್ಪತ್ರೆೆಗೆ ಬರುತ್ತಾಾರೆ. ಹೃದಯರೋಗ ಹಾಗೂ ಇಎನ್ಟಿ ವೈದ್ಯರು ಸೇರಿ ಹಲವು ವೈದ್ಯರಿಲ್ಲದೆ ತೊಂದರೆಯಾಗಿದೆ. ಹೃದಯ ರೋಗ ತಜ್ಞರ ಕೊರತೆಯಿಂದ ಖಾಸಗಿ ಆಸ್ಪತ್ರೆೆಗಳತ್ತ ಮುಖಮಾಡುವಂತಾಗಿದೆ ಇದರಿಂದ ಬಡವರಿಗೆ ಭಾರೀ ಆರ್ಥಿಕ ಸಂಕಷ್ಟ ಎದುರಾಗಿದೆ. ತುರ್ತು ವೇಳೆ ಚಿಕಿತ್ಸೆೆ ಸಿಗದೆ ಜೀವ ಕಳೆದುಕೊಂಡ ಬಡ ಮತ್ತು ಸಾಮಾನ್ಯ ಜನರ ಹಿಡಿಶಾಪ ಹಾಕುತ್ತಿಿದ್ದು ಜನರ ಹಿತದೃಷ್ಟಿಿಯಿಂದ, ಸಾರ್ವಜನಿಕ ಆಸ್ಪತ್ರೆೆಯಲ್ಲಿ ಶಾಶ್ವತವಾಗಿ ಅನುಭವಿ ಹೃದಯ ರೋಗ ತಜ್ಞರನ್ನು ಹಾಗೂ ಕಿವಿ, ಮೂಗು, ಗಂಟಲು ತಜ್ಞರನ್ನು ನೇಮಕ ಮಾಡದಂತೆ ಆಗ್ರಹಿಸಿದರು.
ಹೃದಯ ಸಂಬಂಧಿ ಖಾಯಿಲೆ ಗುರುತಿಸುವ ಇಕೋ ಯಂತ್ರದ ಜತೆಗೆ ಅಗತ್ಯ ಉಪಕರಣಗಳು ಮತ್ತು ಸೌಲಭ್ಯಗಳನ್ನು ಒದಗಿಸುವಂತೆ ಇದೇ ವೇಳೆ ಒತ್ತಾಾಯಿಸಿದರು.
ಎಸ್.ಎನ್ ಖಾದ್ರಿಿ, ರವಿಕುಮಾರ ಬರಗುಡಿ, ಅಜೀಜಪಾಶಾ, ಮೋಸಿನಖಾನ, ಬಸನಗೌಡ, ಮಲ್ಲಣ್ಣ, ಇಲಿಯಾಸ, ಜಮೀರಖಾನ, ಪ್ರಭುಗೌಡ, ಪರಮಣ್ಣ, ವಿರೇಶಹಿರೇಮಠ, ರಾಜು ನಾಯಕ, ಶ್ರಿನಿವಾಸ, ನಾಗರಾಜ ನಾಯಕ ಇತರರಿದ್ದರು.
ತಜ್ಞ ವೈದ್ಯರ ನೇಮಕಕ್ಕೆ ಆಗ್ರಹಿಸಿ ಕರವೇಯಿಂದ ಅರೆಬೆತ್ತಲೆ ಮೆರೆವಣಿಗೆ

