ಸುದ್ದಿಮೂಲ ವಾರ್ತೆ ಜಾಲಹಳ್ಳಿ, ಜ.14:
ಸಮ ಸಮಾಜ ನಿರ್ಮಿಸುವ ಶಕ್ತಿಿ ಬಹು ಸಂಸ್ಕ್ರತಿಗೆ ಇದೆ ಎಂದು ಜನಪದ ವಿಶ್ವ ವಿದ್ಯಾಾಲಯದ ಪ್ರೊೊ. ಮಲ್ಲಿಕಾರ್ಜುನ ಮಾನ್ಪಡೆ ಅಭಿಪ್ರಾಾಯ ವ್ಯಕ್ತಪಡಿಸಿದರು.
ಅವರು ಇಂದು ಬುಧವಾರ ಕಲ್ಬುರ್ಗಿ ವಿಭಾಗ ಮಟ್ಟದ ತಿಂಥಿಣಿ ಬ್ರಿಿಜ್ನ ಕಾಗಿನೆಲೆ ಕನಕ ಗುರು ಪೀಠದಲ್ಲಿ ಬಹುಜನ ಸಂಸ್ಕ್ರತಿ ಮತ್ತು ಅಸ್ತಿಿತ್ವ ಗೋಷ್ಠಿಿಯಲ್ಲಿ ಮಾತನಾಡಿ, ದೇಶದಲ್ಲಿ ಏಕ ಸಂಸ್ಕ್ರತಿ ಮತ್ತು ಏಕ ಧರ್ಮ ಎಂದು ಹೇಳುವ ಬಲಪಂಥೀಯ ಸಂಸ್ಕ್ರತಿ ಬಹು ಸಂಸ್ಕ್ರತಿ ಯನ್ನು ನಾಶ ಮಾಡಲು ಹೊರಟಿವೆ, ನಮ್ಮ ದೇಶದಲ್ಲಿ ಬಹುಭಾಷೆ ಬಹು ಸಂಸ್ಕೃತಿ ಇದೆ ಈ ಸಂಸ್ಕೃತಿಯಲ್ಲಿ ಅನೇಕ ತಳ ಸಮುದಾಯದ ಜಾತಿಗಳಿವೆ ಇದರಲ್ಲಿ ಅಲೆಮಾರಿಗಳು, ಜೇನು ಕುರುಬರು, ಕಾಡುಕುರುಬರು, ಗೊಂಡ ಕುರುಬರು ಸೇರಿದಂತೆ ಅನೇಕ ಪಂಗಡಗಳು ಇವೆ ಇವುಗಳಲ್ಲಿ ಪರಿಶಿಷ್ಟ ಜಾತಿಗೆ ಸೇರಿದ ಚನ್ನದಾಸ, ಮಾಲದಾಸ, ಹೊಲೆಯದಾಸ, ಮಾದಿಗ ದಾಸ ಎನ್ನುವ ಗುಂಪುಗಳು ಇವೆ ಇವೆಲ್ಲವೂ ಬಹು ಸಂಸ್ಕೃತಿ ಆಚರಣೆ ಮಾಡುತ್ತಾಾ ಬಂದಿವೆ ಆದರೆ ವೈಷ್ಣವ ಮತ್ತು ಶೈವ ಸಂಸ್ಕೃತಿ ಗಳು ಬೆಳೆದು ಬಹು ಸಂಸ್ಕೃತಿ ಮೇಲೆ ದಾಳಿ ಮಾಡುತ್ತಿಿವೆ.
ಬಹು ಸಂಸ್ಕ್ರತಿಯಿಂದ ಮಾತ್ರ ಸಮ ಸಮಾಜ ನಿರ್ಮಾಣ ಮಾಡಲು ಸಾಧ್ಯ, ನಮ್ಮನ್ನು ಆಳುವ ಸರ್ಕಾರಗಳು ತಮ್ಮ ಮತ ಬ್ಯಾಾಂಕ್ಗಾಗಿ ಏಕ ಧರ್ಮ, ಏಕ ದೇವರು (ರಾಮ) ಪ್ರೋೋತ್ಸಾಾಹ ಕೊಡುತ್ತವೆ ನಾವು ತಳ ಸಮುದಾಯದವರು ನಮ್ಮ ಸಂಸ್ಕ್ರತಿಗಾಗಿ ಸಂಘಟನೆ ಮಾಡಿ ವಿಶಾಲವಾದ ಐಕ್ಯತೆ ಯಾಗಬೇಕು ಎಂದು ಹೇಳಿದರು.
ಗೋಷ್ಠಿಿಯ ಅಧ್ಯಕ್ಷತೆ ವಹಿಸಿದ್ದ ಲೇಖಕಿಯರ ಸಂಘದ ಅಧ್ಯಕ್ಷರಾದ ಸುನಂದಮ್ಮ ಮಾತನಾಡಿ, ಯಾವುದಾದರೂ ಸಮುದಾಯ ಅಭಿವೃದ್ಧಿಿಯಾಗಿದ್ದರೆ ಅಲ್ಲಿ ಮಹಿಳೆಯರು ಅಭಿವೃದ್ಧಿಿಯಾಗಿದ್ದಾರೆ ಅಂತಹ ಅರ್ಥ, ಹಾಲುಮತದಲ್ಲಿ ಮೇಲು ಕೀಳು ಭಾವನೆ ತೊಡೆದು ಹಾಕಬೇಕು ಮನುಷ್ಯರು ಎಲ್ಲರೂ ಒಂದೇ ಎಂಬ ಭಾವನೆ ಬರಬೇಕು, ನಮ್ಮ ಒಳಗೆ ಇರುವ ಜಾತಿ, ವರ್ಗಗಳ ತಾರತಮ್ಯ ಬಿಡಬೇಕು ನಮ್ಮ ತಲೆಯಿಂದ ಮನುಸಂಸ್ಕ್ರತಿ ಚರಿತ್ರೆೆ ತೆಗೆದು ಹಾಕಿ ಬಹು ಸಂಸ್ಕ್ರತಿ ಒಪ್ಪಿಿಕೊಳ್ಳಬೇಕು ಎಂದರು.
ಕಾರ್ಯಕ್ರಮದಲ್ಲಿ ಭೀಮಣ್ಣ ಮೇಟಿ, ಹನುಮಂತಪ್ಪ ಜಾಲಿಬೆಂಚಿ, ಬಸ್ಸಯ್ಯ ಗೊಲಪಲ್ಲಿ, ಮುದುಕಪ್ಪ ವಕೀಲರು, ರೇವಯ್ಯ ಒಡೆಯರ್, ವಿ ಎಂ ಮೇಟಿ, ನಾಗವೇಣಿ, ಬಸವರಾಜ ವಿಭೂತಿಹಳ್ಳಿಿ, ವಿ ಆರ್. ರಾಸಿನ್, ಮಾಜಿ ಶಾಸಕ ಅಮರೇಗೌಡ ಬಯ್ಯಾಾಪುರ, ಬಸವಂತರಾಯ ಕುರಿ ಸೇರಿದಂತೆ ಅನೇಕರು ಉಪಸ್ಥಿಿತರಿದ್ದರು.
ಸಾನಿಧ್ಯವನ್ನು ರೇವಣ ಸಿದ್ದೇಶ್ವರ, ಬಂಡೆಪ್ಪನಹಳ್ಳಿಿ ಸ್ವಾಾಮಿ, ಸೋಮಲಿಂಗೇಶ್ವರ ಸ್ವಾಾಮಿ, ನಿರಂಜನಾನಂದಾಸ್ವಾಾಮಿ ವಹಿಸಿದ್ದರು.
ಸ್ವಾಾಗತ ಚಿದಾನಂದ ಗುರುವಿನ ಮಾಡಿದರೆ, ನಿರೂಪಣೆ ಶಿಕ್ಷಕ ನಾಗರಾಜ್ ಹರಳಿಮರ ನಿರ್ವಹಿಸಿದರು.
ಹಾಲುಮತ ಸಾಹಿತ್ಯ ಸಮ್ಮೇಳನ ಸಮ ಸಮಾಜ ನಿರ್ಮಿಸುವ ಶಕ್ತಿ ಬಹು ಸಂಸ್ಕ್ರತಿಯಲ್ಲಿ : ಮಾನ್ಪಡೆ

