ಸುದ್ದಿಮೂಲ ವಾರ್ತೆ ಸಿಂಧನೂರು, ಜ.08:
ಬಸನಗೌಡ ಬಾದರ್ಲಿ ಚಿಕ್ಕ ವಯಸ್ಸಿಿನಲ್ಲಿ ಉನ್ನತ ಸ್ಥಾಾನಕ್ಕೆೆ ಹೋಗಿರಬಹುದು. ಐದು ಬಾರಿ ಶಾಸಕರಾಗಿರುವ ಹಂಪನಗೌಡ ಬಾದರ್ಲಿ ಜನಪ್ರಿಿಯತೆ ಸಹಿಸದೇ ತೇಜೋವಧೆ ಮಾಡುವದು ಸಲ್ಲ. ಬಸನಗೌಡ ಅನನುಭವಿ ರಾಜಕಾರಣಿ ಎಂದು ಕಾಂಗ್ರೆೆಸ್ ಮುಖಂಡ, ಭೋವಿ ಸಮಾಜದ ಅಧ್ಯಕ್ಷ ಅಶೋಕ ಉಮಲೂಟಿ ಟೀಕಿಸಿದರು.
ಅವರು ನಗರದ ಪತ್ರಿಿಕಾ ಭವನದಲ್ಲಿ ಗುರುವಾರ ಪರಿಶಿಷ್ಟ ನಾಯಕರೊಂದಿಗೆ ಸುದ್ದಿಗೋಷ್ಟಿಿ ನಡೆಸಿ ಮಾತನಾಡಿದರು. ಸಿಂಧನೂರು ವಿಧಾನಸಭಾ ಕ್ಷೇತ್ರದ ವ್ಯಾಾಪ್ತಿಿಯಲ್ಲಿ ಜನರಿಂದ ಆಯ್ಕೆೆಯಾದ ಶಾಸಕರು ಕಳುಹಿಸಿದ ಲಾನುಭವಿಗಳ ಪಟ್ಟಿಿಗೆ ಸರಕಾರ ಆದ್ಯತೆ ನೀಡುತ್ತದೆ. ಬಸನಗೌಡ ಬಾದರ್ಲಿ ಕಳುಹಿಸಿದ ಪಟ್ಟಿಿಯಲ್ಲಿ ಅನರ್ಹರಿದ್ದಾಾರೆ. ಬಿಜೆಪಿ, ಜೆಡಿಎಸ್ನವರಿದ್ದಾಾರೆ. ಇದಕ್ಕಾಾಗಿ ಶಾಸಕ ಹಂಪನಗೌಡ ಬಾದರ್ಲಿ ರದ್ದತಿಗೆ ಪತ್ರ ಬರೆದಿದ್ದಾಾರೆ. ಇದರಲ್ಲಿ ಬಸನಗೌಡ ಬಾದರ್ಲಿ ರಾಜಕಾರಣ ಮಾಡುತ್ತಾಾ, ಹಂಪನಗೌಡರನ್ನು ಪರಿಶಿಷ್ಟ ವಿರೋಧಿ ಎಂದು ಬಿಂಬಿಸುವದು ಅವರ ಸಣ್ಣತನ ತೋರಿಸುತ್ತದೆ ಎಂದು ಟೀಕಿಸಿದರು.
ಎಸ್ಸಿ-ಎಸ್ಟಿ ಟ್ರಂಪ್ಕಾರ್ಡ್ ಬಳಸಿ ಆರೋಪಿಸುವದು ನೈತಿಕ ರಾಜಕಾರಣವಲ್ಲ. ಎಸ್ಇಪಿ, ಟಿಎಸ್ಪಿ ಯೋಜನೆಯಡಿ ಪ್ರಸಕ್ತ ಆರ್ಥಿಕ ವರ್ಷದಲ್ಲಿ ಶಾಸಕ ಹಂಪನಗೌಡ ಬಾದರ್ಲಿ 1461 ಕೋಟಿ ಅನುದಾನ ತಂದಿದ್ದಾಾರೆ. ಸಜ್ಜನ ರಾಜಕಾರಣಿ ಬಗ್ಗೆೆ ಇಲ್ಲ-ಸಲ್ಲದ ಆರೋಪ ಮಾಡುವದು ಸರಿಯಲ್ಲ. ಅಸಂಖ್ಯಾಾತ ಪರಿಶಿಷ್ಟರು ಹಂಪನಗೌಡರ ಜೊತೆಗಿದ್ದರಿಂದಲೇ ಐದು ಬಾರಿ ಶಾಸಕರಾಗಿದ್ದಾಾರೆ. ಅವರ ವಿರುದ್ದ ಷಡ್ಯಂತ್ರ ಮಾಡಿದರೆ ನಿಮ್ಮ ಮುಖಕ್ಕೆೆ ಮಂಗಳಾರತಿಯಾಗುತ್ತದೆ. ಬಸನಗೌಡರೇ ತುಂಬಾ ಆಲೋಚನೆ ಮಾಡಿ ಮಾತನಾಡಿ, ಸಂಸ್ಕೃತಿಯಿಲ್ಲದಂತೆ ಮಾತನಾಡಬೇಡಿ. ಹಿರಿಯರಿಗೆ ಗೌರವ ಕೊಡೋದನ್ನು ಕಲಿಯಿರಿ ಎಂದು ಹರಿಹಾಯ್ದರು.
ಬಸನಗೌಡ ಬಾದರ್ಲಿ ಅವರು ನೀಡಿದ ಪಟ್ಟಿಿಯಲ್ಲಿ ಪಕ್ಷ ವಿರೋಧಿ ಚಟುವಟಿಕೆ ಮಾಡಿವರಿದ್ದಾಾರೆ. ನೈಜ ಕಾರ್ಯಕರ್ತರಿಲ್ಲ. ಅಭಿವೃದ್ದಿ ವಿಚಾರದಲ್ಲಿ ಹಂಪನಗೌಡ ಬಾದರ್ಲಿ ಎಂದೂ ರಾಜಕಾರಣ ಮಾಡಿಲ್ಲ. ಅರ್ಹ, ನೈಜ ಲಾನುಭವಿಗಳನ್ನು ಗುರುತಿಸುತ್ತಾಾರೆ. ಗೌಡರ ಬಗ್ಗೆೆ ಎಚ್ಚರಿಕೆಯಿಂದ ಮಾತನಾಡಬೇಕು. ವಿನಃಕಾರಣ ಹಂಪನಗೌಡರ ಬಗ್ಗೆೆ ಹೇಳಿಕೆ ನೀಡಿದ ವೆಂಕಟೇಶ ರಾಗಲಪರ್ವಿ ದಾಖಲೆಯೊಂದಿಗೆ ಚರ್ಚೆಗೆ ಬರಲಿ ಎಂದು ಸವಾಲೆಸೆದರು.
ಈ ಸಂದರ್ಭದಲ್ಲಿ ಮುಖಂಡರಾದ ಬಿ.ಹೆಚ್.ನಾಯಕ, ರಾಮಣ್ಣ ಸಾಸಲಮರಿ, ಅಂಬ್ರೂಸ್, ಸುಭಾಷ ್ರಾಂಕ್ಲಿಿನ್, ನಾಗರಾಜ ರಾಮತ್ನಾಾಳ, ಹನುಮಂತಪ್ಪ, ನರಸಪ್ಪ ಕಟ್ಟಿಿಮನಿ, ವೈ.ಅನಿಲಕುಮಾರ, ನಾಗಪ್ಪ ಗೋಮರ್ಸಿ, ಹನುಮಂತಪ್ಪ ಗೋಮರ್ಸಿ, ಅಮರಯ್ಯ, ನಾಗರಾಜ ರಾಮತ್ನಾಾಳ ಸೇರಿದಂತೆ ಅನೇಕರು ಇದ್ದರು.
ಹಂಪನಗೌಡ ಬಾದರ್ಲಿ ದಲಿತ ವಿರೋಧಿಯಲ್ಲ ಪಕ್ಷ ಸಂಘಟನೆ ಬಗ್ಗೆ ಮಾತನಾಡುವ ನೈತಿಕತೆ ಬಸನಗೌಡರಿಗಿಲ್ಲ. ಬಸನಗೌಡ ಬಾದರ್ಲಿ ಅನನುಭವಿ ರಾಜಕಾರಣಿ – ಅಶೋಕ ಉಮಲೂಟಿ

