ಸುದ್ದಿಮೂಲ ವಾರ್ತೆ ಹೊಸಪೇಟೆ, ೆ.11:
ಐತಿಹಾಸಿಕ ವಿಜಯನಗರ ಸಾಮ್ರಾಾಜ್ಯದ ರಾಜಧಾನಿಯಾಗಿದ್ದ, ದಕ್ಷಿಣದ ಕಾಶಿ ಹಾಗೂ ವಿಶ್ವ ಪಾರಂಪರಿಕ ತಾಣ ಎಂದೇ ಪ್ರತ್ಯಾಾತಿ ಪಡೆದ ಹಂಪಿಯಲ್ಲಿ ೆಬ್ರವರಿ 13, 14 ಮತ್ತು 15ರಂದು ’ಹಂಪಿ ಉತ್ಸವ-2026’ ಅದ್ದೂರಿಯಾಗಿ ಜರುಗಲಿದೆ.13ರಂದು ಮುಖ್ಯಮಂತ್ರಿಿ ಸಿದ್ದರಾಮಯ್ಯ ಅವರು ಸಾಂಸ್ಕೃತಿಕ ವೈಭವಕ್ಕೆೆ ಚಾಲನೆ ನೀಡುವರು ಎಂದು ಜಿಲ್ಲಾ ಉಸ್ತುವಾರಿ ಸಚಿ ವ ಜಮೀರ್ ಅಹ್ಮದ್ ಖಾನ್ ತಿಳಿಸಿದರು.
ಈ ಬಾರಿಯ ಉತ್ಸವದ ಸಿದ್ಧತೆ ಮತ್ತು ವಿಶೇಷತೆಗಳ ಕುರಿತು ದಿ. ಎಂಪಿ ಪ್ರಕಾಶ್ ಮುಖ್ಯ ವೇದಿಕೆ ವೀಕ್ಷಿಸಿ ನಂತರ ಸುದ್ದಿಗೋಷ್ಠಿಿಯಲ್ಲಿ ಮಾತನಾಡಿದರು. ಹಂಪಿ ಉತ್ಸವ ಆರು ವೇದಿಕೆಗಳಲ್ಲಿ ಸಾಂಸ್ಕೃತಿಕ ಸೌರಭ ನಡೆಯಲಿದೆ. ಉತ್ಸವಕ್ಕಾಾಗಿ ಒಟ್ಟು 6 ಬೃಹತ್ ವೇದಿಕೆಗಳನ್ನು ಸಿದ್ಧಪ ಡಿಸಲಾಗಿದೆ.
ಎಂ.ಪಿ. ಪ್ರಕಾಶ್ ವೇದಿಕೆ ಇದು ಪ್ರಧಾನ ವೇದಿಕೆ – ಇಲ್ಲಿ 50,000 ಆಸನಗಳ ವ್ಯವಸ್ಥೆೆ ಮಾಡಲಾಗಿದೆ.
ಕೃಷ್ಣದೇವರಾಯ ವೇದಿಕೆ.ವಿರೂಪಾಕ್ಷ ವೇದಿಕೆ ಹಾಗೂ ಇನ್ನಿಿತರ ಮೂರು ವೇದಿಕೆಗಳು ಇರಲಿವೆ ಎಂದರು.
ಪತ್ರಕರ್ತರಿಗೆ ಹಂಪಿ ಉತ್ಸವದ ಮುಖ್ಯ ವೇದಿಕೆಯ ಲಾಂಛನವುಳ್ಳ ಪಾಸ್ ಮಾಧ್ಯಮದ ಎದುರು ಪ್ರದರ್ಶಿಸಿ ಎಲ್ಲಾ ಪತ್ರಕರ್ತರಿಗೆ ನೀಡಲು ಅಧಿಕಾರಿಗಳಿಗೆ ಹೇಳಿದರು.
ಈ ಬಾರಿಯ ಹಂಪಿ ಉತ್ಸವದಲ್ಲಿ ಶಿವ ರಾಜ್ ಕುಮಾರ್, ಅಶ್ವಿಿನಿ ಪುನೀತ್ ರಾಜ್ಕುಮಾರ್, ಗೋಲ್ಡನ್ ಸ್ಟಾಾರ್ ಗಣೇಶ್, ರಕ್ಷಿತ್ ಶೆಟ್ಟಿಿ, ರಚಿತಾ ರಾಮ್, ಡಾಲಿ ಧನಂಜಯ್ ಮತ್ತು ಬಿಗ್ ಬಾಸ್ ವಿ ಜೇತ ಗಿಲ್ಲಿನಟ ಭಾಗವಹಿಸುವುದು ಖಚಿತವಾಗಿದೆ ಎಂದರು. ಉತ್ಸವಕ್ಕಾಾಗಿ ಸುಮಾರು 14 ರಿಂದ 15 ಕೋಟಿ ರೂಪಾಯಿ ಬಜೆಟ್ ಮೀಸಲಿ ಡಲಾಗಿದೆ ಎಂದರು.
ಶಾಸಕ ಎಚ್ ಆರ್ ಗವಿಯಪ್ಪನವರು ಹಂಪಿ ಉತ್ಸವದಿಂದ ದೂರ ಉಳಿಯು ತ್ತಿಿರುವ ಬಗ್ಗೆೆ ಕೇಳಿದ ಪತ್ರಕರ್ತರಿಗೆ ಸಚಿವರು ಸಮಾಜಾಯಿಸಿ ನೀಡಿ ನಾನು ಕಳೆದ ಸಲ ಪೂರ್ವಭಾವಿ ಸಭೆಗೆ ಬಂದಾಗ ಶಾಸಕರು ಮುಖ್ಯಮಂತ್ರಿಿ ಅವರ ಜೊತೆ ಸಭೆಯಲ್ಲಿ ಇದ್ದರು. ಈಗ ಇನ್ನು 15 ನಿಮಿಷದಲ್ಲಿ ಅವರು ಇಲ್ಲಿಗೆ ಬರುತ್ತಾಾರೆ ಎಂದು ಹೇಳಿದರು. ಆದರೆ ಸಚಿವರು ಎಲ್ಲಾ ವೇದಿಕೆಗಳ ವೀಕ್ಷಣೆ ಮುಗಿಸಿಕೊಂಡು ಹೋದರು ಸಹ ಶಾಸಕರು ಬರಲಿಲ್ಲ. ಮುಖ್ಯಮಂತ್ರಿಿ ಸಿದ್ದರಾಮಯ್ಯ ನವರು ಹಂಪಿ ಉತ್ಸವದ ಉದ್ಘಾಾಟನೆ ಸಂದರ್ಭದಲ್ಲಿ ಶಾಸಕರು ಹಾಜರಾಗುತ್ತಾಾರೆಯೇ ಅಥವಾ ಸಚಿವರೊಂದಿಗೆ ಅಸಮಾಧಾನ ಮುಂದುವರೆಸಿ ಕೊಂಡು ಗೈರು ಹಾಜರಾಗುತ್ತಾಾರೆಯೇ ಎಂಬುದು ಯಕ್ಷಪ್ರಶ್ನೆೆಯಾಗಿದೆ
ಈ ಸಂದರ್ಭದಲ್ಲಿ ಹರಪನಹಳ್ಳಿಿ ಶಾಸಕಿ ಲತಾ ಮಲ್ಲಿಕಾರ್ಜುನ , ವಿಜಯನಗರ ಜಿಲ್ಲಾ ಗ್ಯಾಾರೆಂಟಿ ಅಧ್ಯಕ್ಷ ಕುರಿ ಶಿವಮೂರ್ತಿ , ವಿಜಯನಗರ ಜಿಲ್ಲಾ ಕಾಂಗ್ರೆೆಸ್ ಅಧ್ಯಕ್ಷ ಹಾಗೂ ಮಾಜಿ ಶಾಸಕ ಸಿರಾಜ್ ಶೇಖ್ , ಜಿಲ್ಲಾಧಿಕಾರಿ ಕವಿತಾ ಎಸ್ ಮನ್ನಿಿಕೇರಿ, ಸಿಇಓ ನೋಂಗ್ಜಾಾಯ್ ಮಹ್ಮದ್ ಅಲಿ ಅಕ್ರಂ ಷಾ, ಎಸ್.ಪಿ.ಜಾಹ್ನವಿ ಹಾಗೂ ವಿವಿಧ ಅಧಿಕಾರಿಗಳು ಉಪಸ್ಥಿಿತರಿದ್ದರು.
ಹಂಪಿ ಉತ್ಸವ : ಸಿದ್ದರಾಮಯ್ಯರಿಂದ ಚಾಲನೆ- ಸಚಿವ ಜಮೀರ್

