ಸುದ್ದಿಮೂಲ ವಾರ್ತೆ ಹೊಸಪೇಟೆ (ಹಂಪಿ ಉತ್ಸವ), ೆ.13:
ಯಾವತ್ತೂ ನೇಗಿಲ ನೊಗದ ಭಾರ ಹೊತ್ತು, ರೈತನೊಂದಿಗೆ ಹೊಲದಲ್ಲಿ ಬಿತ್ತನೆಗೆ ಭೂಮಿ ಹದಗೊಳಿಸುವ ಜೋಡೆತ್ತುಗಳು ಹಂಪಿ ಉತ್ಸವಕ್ಕೆೆ ಮೆರಗು ನೀಡಲು ಶುಕ್ರವಾರ ಹಂಪಿಯ ಕಡೆಗೆ ಮುಖ ಮಾಡಿದ್ದವು ಹಂಪಿ ಉತ್ಸವದ ಜೋಡೆತ್ತುಗಳ ಸ್ಪರ್ಧೆಗೆ ಆಗಮಿಸಿದ್ದರು. ಸಂಘಟಕರ ನಿರೀಕ್ಷೆಗೂ ಮೀರಿ ಜೋಡೆತ್ತುಗಳ ಸ್ಪರ್ಧೆಯನ್ನು ವಸತಿ, ವ್ಫೃ್ ಹಾಗೂ ಅಲ್ಪ ಸಂಖ್ಯಾಾತ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಬಿ.ಜೆಡ್.ಜಮೀರ್ ಅಹ್ಮದ್ ಖಾನ್ ಉದ್ಘಾಾಟಿಸಿದರು.
ಜಿಲ್ಲಾಡಳಿತ, ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ವತಿಯಿಂದ ಕಮಲಾಪುರದ ಹಂಪಿ ವಿಶ್ವ ಪಾರಂಪರಿಕ ತಾಣ ನಿರ್ವಹಣಾ ಪ್ರಾಾಧಿಕಾರದ (ಹವಾ ಮಾ) ಕಚೇರಿ ಹಿಂಭಾಗದಲ್ಲಿ ಒಟ್ಟು180 ಅಧಿಕ ಜೋಡೆತ್ತುಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಎತ್ತುಗಳ ಪ್ರದರ್ಶನ ಸಾರ್ವಜನಿಕರ ಗಮನ ಸೆಳೆಯಿತು
ಸಚಿವ ಬಿ.ಜೆಡ್.ಜಮೀರ್ ಅಹ್ಮದ್ ಖಾನ್ರಿಂದ ನಾಲ್ಕು ಜೊತೆ ಜೊಡೆತ್ತುಗ ಳಿಗೆ ವೈಯುಕ್ತಿಿಕ ರೂ.2 ಲಕ್ಷ ನಗದು ಬಹುಮಾನ:
ಸಚಿವ ಬಿ.ಜೆಡ್.ಜಮೀರ್ ಅಹ್ಮದ್ ಖಾನ್ ಅವರು ಪ್ರಶಸ್ತಿಿಗೆ ಭಾಜನವಾದ ನಾಲ್ಕು ಜೋತೆ ಜೊಡೆತ್ತುಗಳಿಗೆ ವೈಯಕ್ತಿಿಕವಾಗಿ ರೂ.2 ಲಕ್ಷ ನಗದು ಬಹುಮಾನ ನೀಡಿದರು. ಸ್ಪರ್ಧೆಯಲ್ಲಿ ಪ್ರಥಮ ಸ್ಥಾಾನ ಪಡೆದ ಹೊಸಪೇಟೆ ರೈತ ಮಂಜುನಾಥ್.ಆರ್ ಅವರ ಹಳ್ಳಿಿಕಾರ ತಳಿಯ ಜೋಡೆತ್ತುಗಳು ರೂ.10,000 ಹಾಗೂ ಪ್ರಮಾಣ ಪತ್ರ ಪಡೆದು ಚಾಂಪಿಯನ್ ಪಟ್ಟ ಮುಡಿಗೇರಿಸಿಕೊಂಡವು. ಗಾದಿನಗ ನೂರು ಗ್ರಾಾಮದ ಬಿ.ಬಸವ ಅವರ ಜೋಡು ಎತ್ತುಗಳು ದ್ವೀತಿ ಯ ಸ್ಥಾಾನ ಗಳಿಸುವ ಮೂಲಕ ರೂ.7,500 ಹಾಗೂ ಪ್ರಮಾಣ ಪತ್ರ ಪಡೆದುಕೊಂಡವು. ಬಾಳಾಪುರದ ರೈತ ಶಂಕರಪ್ಪನವರ ಎತ್ತುಗಳು ತೃತೀಯ ಸ್ಥಾಾನ ಪಡೆದು, ರೂ. 5,500 ಹಾಗೂ ಪ್ರಮಾಣ ಪತ್ರ ಗಿಟ್ಟಿಿಸಿಕೊಂಡವು. ಹೊಸಪೇಟೆ ಮಹಮದ್ ಹುಸೇನ್ ಅವರ ಜೋಡೆತ್ತುಗಳು ರೂ.2500 ಪಡೆದುಕೊಂಡು ನಾಲ್ಕನೇ ಸ್ಥಾಾನ ಪಡೆದು ಕೊಂಡವು.
ಕಲಲಾಪುರ, ಹೊಸಪೇಟೆ ಸೇರಿದಂತೆ ಜಿಲ್ಲೆಯ ವಿವಿಧ ಕಡೆಗಳಿಂದ 180ಕ್ಕೂ ಹೆಚ್ಚಿಿನ ಜೋಡೆತ್ತುಗಳು ಉತ್ಸವದಲ್ಲಿ ಭಾಗವಹಿದ್ದವು. ಹಳ್ಳಿಿಕಾರ್, ಮಲೆನಾಡ ಗಿಡ್ಡ, ಓಂಗೋಲ್, ಅಮೃತ್ಮಹಲ್, ಕಿಲಾರಿ ಜಾತಿ ವಿವಿಧ ದೇಶಿ ಹಾಗೂ ವಿದೇಶಿ ತಳಿಯ ಜೋಡೆತ್ತುಗಳು ತಮ್ಮ ಗಾಂಭೀರ್ಯದಿಂದ ನೋಡುಗರನ್ನು ಚಕಿತಗೊಳಿಸಿದವು.
ಬೀದರ್ ಪಶುವೈದ್ಯಕೀಯ ಕಾಲೇಜಿನ ಪ್ರಾಾಧ್ಯಾಾಪಕ ಡಾ.ಕೊಟ್ರೇೇಶ್ ಬಸವರಾ ಜ್ ಹಾಗೂ ವಿವಿಧ ಜಿಲ್ಲೆಗಳಿಂದ ಆಗಮಿಸಿದ ಪಶು ವೈದ್ಯರ ತಂಡ ಜೋಡೆತ್ತುಗಳ ಸ್ಪರ್ಧೆಯಲ್ಲಿ ತೀರ್ಪುಗಾರರಾಗಿ ಕೆಲಸ ನಿರ್ವಹಿಸಿದರು. ಪ್ರದರ್ಶನದಲ್ಲಿ ಎತ್ತುಗಳ ಮೂಲತಳಿ, ದೇಹದಾರ್ಢ್ಯತೆ, ಚುರುಕುತನ, ಅವುಗಳ ಚಲನವಲನಗಳ, ಹೊಳೆಯುವ ಚರ್ಮ, ಕಣ್ಣು, ವಯಸ್ಸು, ಹಲ್ಲು ಸೇರಿದಂತೆ ರೈತರಿಂದ ಅವುಗಳ ಪೋಷಣೆ ಕ್ರಮ ಪರಿಗಣಿಸಿ ತೀರ್ಪುಗಾರರು ಬಹುಮಾನ ಘೋಷಿಸುವರು. ನಿವೃತ್ತ ಸಹಾಯಕ ನಿರ್ದೇಶಕ ಡಾ.ಬಸವರಾಜ ಬೆಣ್ಣಿಿ ರೈತರೊಂದಿಗೆ ಸಂವಾದ ನಡೆಸುವ ಮೂಲಕ ನಿರೂಪಣೆ ಕಾರ್ಯ ನಡೆಸಿದರು.
ಕಾರ್ಯಕ್ರಮದಲ್ಲಿ ಬಳ್ಳಾಾರಿ ಲೋಕಸಭಾ ಸಂಸದ ತುಕಾರಾಂ, ಹೊಸಪೇಟೆ ಶಾಸಕ ಹೆಚ್.ಆರ್.ಗವಿಯಪ್ಪ, ಜಿಲ್ಲಾಧಿಕಾರಿ ಕವಿತಾ ಮನ್ನಿಿಕೇರಿ, ಜಿ.ಪಂ.ಸಿ ಇಓ ನೋಂಗ್ಜಾಾಯ್ ಮೋಹಮ್ಮದ್ ಅಲಿ ಅಕ್ರಮ್ ಷಾ, ನಂದಿಪುರ ಮಠದ ಶ್ರೀಮಹೇಶ್ವರ ಸ್ವಾಾಮೀಜಿ, ಪಶುಪಾಲನೆ ಮತ್ತು ಪಶು ವೈದ್ಯ ಸೇವೆಗಳ ಇಲಾ ಖೆಯ ಉಪನಿರ್ದೇಶಕ ಡಾ.ಎಂ.ರವಿ, ಸಹಾಯ ನಿರ್ದೇಶಕರು ಡಾ.ಇಮ್ರಾಾನ್, ಡಾ.ಯುಗಂದ್ರರ್ ಮಾನ್ವಿಿ, ಡಾ.ಪ್ರಶಾಂತ್, ಡಾ.ಅಜಯ್ ಕುಮಾರ್, ಡಾ.ಸುರೇಶ್, ಡಾ.ರಾಘವೇಂದ್ರ, ಡಾ.ಮಲ್ಲಿಕಾರ್ಜುನ್, ಡಾ.ಚಂದ್ರನಾಯ್ಕ್, ಡಾ.ಶಿವಕುಮಾರ್, ಡಾ.ಲೋಹಿತ್, ಡಾ.ಸತೀಶ್, ಡಾ.ನೇಮಿನಾಯ್ಕ್, ಇಲಾಖೆಯ ಸಿಬ್ಬಂದಿ ವರ್ಗದವರು, ರೈತರು, ಸಾರ್ವಜನಿಕರು ಹಾಗೂ ಇತರರು ಇದ್ದರು.ಕಸ ವಿಲೇವಾರಿಗೆ ಆಸ್ಪತ್ರೆೆ ನಿರ್ಲಕ್ಷ್ಯ ; ಪಾಲಿಕೆ ಸಿಬ್ಬಂದಿಗಳ ಆಕ್ರೋೋಶ
? ಸುದ್ದಿಮೂಲ ವಾರ್ತೆ ಬಳ್ಳಾಾರಿ, ೆ.04:
ಬಳ್ಳಾಾರಿ ನಗರದ ಪಾರ್ವತಿನಗರದ ಪದ್ಮಾಾವತಿ ಕಿಡ್ನಿಿಕೇರ್ ಆಸ್ಪತ್ರೆೆ ಬಸವೇಶ್ವರ ನಗರದ ದ್ವಾಾರಕಾ ಆಸ್ಪತ್ರೆೆ (ಶಾಂತಾ ಸೀತಾರಾಂ ಆಸ್ಪತ್ರೆೆ)ಯವರು ಮೆಡಿಕಲ್ ವೇಸ್ಟ್ ನಿರ್ವಹಣೆಗೆ ಪ್ರತ್ಯೇಕ ವ್ಯವಸ್ಥೆೆಯನ್ನು ಕೈಗೊಳ್ಳದೇ, ತೀವ್ರ ನಿರ್ಲಕ್ಷ್ಯಕ್ಕೆೆ ಒಳಗಾಗಿದ್ದರು. ಇದರಿಂದ ಬೇಸತ್ತಿಿದ್ದ ಮಹಾನಗರ ಪಾಲಿಕೆಯ ಅಧಿಕಾರಿ – ಸಿಬ್ಬಂದಿಗಳು, ಬುಧವಾರ ಬೆಳಗ್ಗೆೆ, ಮೆಡಿಕಲ್ ವೇಸ್ಟ್ ಅನ್ನು ಆಸ್ಪತ್ರೆೆಯ ಮುಂಭಾಗದಲ್ಲಿ ಹಾಕಿ, ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಬಳ್ಳಾಾರಿ ಮಹಾನಗರ ಪಾಲಿಕೆಯ ಮೇಯರ್ ಪಿ. ಗಾದೆಪ್ಪ ಅವರು, ಪರಿಸ್ಥಿಿತಿ ಹೀಗೇ ಮುಂದುವರೆದಲ್ಲಿ ಲೈಸೆನ್ಸ್ ರದ್ದತಿಗೆ ಮುಂದಾಗುತ್ತೇವೆ ಎಂದರು.
ಬಳ್ಳಾಾರಿ ಮಹಾನಗರ ಪಾಲಿಕೆಯ ಆಯುಕ್ತ ಪಿ.ಸಿ. ಮಂಜುನಾಥ್ ಅವರು, ಎರಡು ಆಸ್ಪತ್ರೆೆಗಳು ಮೆಡಿಕಲ್ ವೇಸ್ಟ್ ಅನ್ನು ಪ್ರತ್ಯೇಕವಾಗಿ ವಿಲೇವಾರಿ ಮಾಡಲು ಅನೇಕಸಲ ಮನವಿ ಮಾಡಲಾಯಿತು. ಆದರೆ, ಆಸ್ಪತ್ರೆೆಗಳ ಸಿಬ್ಬಂದಿಗಳು ನಿರ್ಲಕ್ಷ್ಯವಹಿಸಿದರು. ಕಾರಣ, ನಮ್ಮ ಸಿಬ್ಬಂದಿಗಳು ಕಸವನ್ನು – ಮೆಡಿಕಲ್ ವೇಸ್ಟ್ ಅನ್ನು ಆಯಾ ಆಸ್ಪತ್ರೆೆಗಳ ಮುಂದೆ ಹಾಕಿ, ತಮ್ಮ ಸಿಟ್ಟನ್ನು ತೋರಿಸಿರುವುದು ಸ್ವಾಾಗತಾರ್ಹ ಎಂದರು.
ಹಂಪಿ ಉತ್ಸವ: ಎತ್ತುಗಳ ಪ್ರದರ್ಶನ: 180ಕ್ಕೂ ಹೆಚ್ಚಿನ ಜೋಡೆತ್ತುಗಳು ಭಾಗಿ, ಹಳ್ಳಿಕಾರ ತಳಿಗೆ ಪ್ರಥಮ ಬಹುಮಾನ : ಸಚಿವ ಬಿ.ಜಡ್.ಜಮೀರ್ ಅಹ್ಮದ್ ಖಾನ್ ರಿಂದ ವೈಯಕ್ತಿಕ ತಲಾ ರೂ.2 ಲಕ್ಷ ಬಹುಮಾನ

