ಸುದ್ದಿಮೂಲವಾರ್ತೆ
ಕಾರಟಗಿ,ಏ.೭- ಹನುಮ ಜಯಂತಿ ನಿಮಿತ್ಯ ಪಟ್ಟಣದ ಶ್ರೀಕೋಟೆ ಆಂಜನೇಯ ದೇವಾಲಯ ಸಮಿತಿ ನೇತ್ರತ್ವದಲ್ಲಿ ವಿವಿಧ ವಾಧ್ಯ-ಮೇಳ, ಕುಂಭ,ಕಳಸಗಳೊಂದಿಗೆ ವಿಜೃಂಭಣೆಯಿಂದ ಶ್ರೀಆಂಜನೇಯ ದೇವರ ಭಾವಚಿತ್ರದ ಮೆರವಣಿಗೆ ನೆರವೇರಿತು.
ಬೆಳಿಗ್ಗೆ ಆಂಜನೇಯ ದೇವಸ್ಥಾನದಲ್ಲಿ ಪ್ರಜ್ವಲ್ ಆಚಾರ್ಯರು ಹೊಸಪೇಟೆ ಇವರ ನೇತ್ರತ್ವದಲ್ಲಿ ಪವಮಾನ ಹೋಮ, ಕಲಾಭಿಷೇಕ, ಗೋಪುರ ಕಳಶ ಸ್ಥಾಪನೆ, ಪಂಚಾಮೃತ ಅಭಿಷೇಕ, ಅಲಂಕಾರ, ನೀರಿಕ್ಷಣಾ ಮೂಹೂರ್ತದಲ್ಲಿ ದೇವಸ್ಥಾನದ ಎಲ್ಲಾ ಧಾರ್ಮಿಕ ಪೂಜಾ ಕಾರ್ಯಗಳು ಜರುಗಿದವು. ನಂತರ ಕುಂಭ, ಕಳಸ-ಕನ್ನಡಿ ಹೊತ್ತ ಸುಮಂಗಲೇಯರೊಂದಿಗೆ ಹಾಗೂ ಭಾಜಾ ಭಜಂತ್ರಿಯೊAದಿಗೆ ಗಂಗೆ ಸ್ಥಳಕ್ಕೆ ಹೊಗಿ ಪೂಜೆ ಸಲ್ಲಿಸಿದ ಬಳಿಕಾ ಹನುಮಾನ ಭಾವಚಿತ್ರದ ಮೆರವಣಿಗೆ ಪಟ್ಟಣದ ಪುರಸಭೆ ಕಚೇರಿಯ ಮುಖ್ಯ ರಸ್ತೆಯ ಮೂಲಕ ಆರಂಭವಾಗಿ ಕನಕದಾಸ ವೃತ್ತದ, ಹಳೆಬಸ್ ನಿಲ್ದಾಣದ ಬಳಿಯ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನಕ್ಕೆ ಬಂದು ತಲುಪಿತು. ಬಳಿಕ ಮಹಾ ಅನ್ನಸಂತರ್ಪಣೆ ಕಾರ್ಯಕ್ರಮ ಜರುಗಿತು.
ಕೆಆರ್ಪಿ ಪಕ್ಷದ ಕನಕಗಿರಿ ಕ್ಷೇತ್ರದ ಅಭ್ಯರ್ಥಿ ಡಾ.ಚಾರುಲ್ ವೇಂಕಟರಮಣ ದಾಸರಿ, ಪ್ರಮುಖರಾದ ರುದ್ರಗೌಡ ನಂದಿಹಳ್ಳಿ, ಶಶಾಂಕ ತಂಗಡಗಿ, ಮಹೇಶ ಕಂದಗಲ್, ಸುಪ್ರೀಯಾ ಅರಳಿ, ಈಶಪ್ಪ ಇಟ್ಟಂಗಿ, ಮೌನೇಶ ದಢೇಸೂಗೂರು, ನಾಗರಾಜ ಅರಳಿ, ಚಂದ್ರಶೇಖರ ಅರಳಿ, ಸ್ವಪ್ರಕಾಶ ಹಿರೇಮಠ, ರೇಣುಕಾ ಅಯೋದ್ಯೆ ರಮೆಶ ಕೋಟೆ, ದೇವಸ್ಥಾನ ಸೇವಾ ಸಮಿತಿಯ ಶಾಮಸಿಂಗ್, ಹಾಲೇಶ, ಸತ್ಯನಾರಾಯಣ ಸಿಂಗ್, ನರಸಪ್ಪ ಸಿಂಗಾಪೂರ, ಶಿವುರಾಜ ನಾಯಕ, ಸುನೀಲ್ ಸಿಂಗ್, ಪ್ರತಾಪಸಿಂಗ್, ಮಂಜುನಾಥ ಸಿಂಗಾಪೂರ ಸೇರಿದಂತೆ ಪಟ್ಟಣದ ಜನತೆ ಇದ್ದರು.