ಸುದ್ದಿಮೂಲ ವಾರ್ತೆ ರಾಯಚೂರು, ೆ.21:
ಜಿಲ್ಲೆೆಯ ಮುದಗಲ್ ಪಟ್ಟಣದಲ್ಲಿ ತನಗೆ ಸೇರಿದ ವಾಣಿಜ್ಯ ಮಳಿಗೆಗಳನ್ನು ರೌಡಿಶೀಟರ್ ಕಾಂಗ್ರೆೆಸ್ ಬೆಂಬಲಿಗ ಟಿಪ್ಪುು ಸುಲ್ತಾಾನ್ ಎನ್ನುವವ ಕೀಲಿ ಹಾಕಿ ಕಿರುಕುಳ ನೀಡುತ್ತಿಿದ್ದು ನ್ಯಾಾಯಾಲಯ ರಕ್ಷಣೆ ನೀಡಲು ಪೊಲೀಸರಿಗೆ ಸೂಚಿಸಿದರೂ ಪಿಎಸ್ಐ ವೆಂಕಟೇಶ ಮತ್ತಿಿತರ ಪೇದೆಗಳು ಸ್ಪಂದಿಸದೆ ರೌಡಿ ಪರ ಕೆಲಸ ಮಾಡುತ್ತಿಿದ್ದಾಾರೆ ಎಂದು ಸ್ಥಳೀಯ ನಿವಾಸಿ ಶಶಿಕಾಂತ ಆದಿ ಆರೋಪಿಸಿದರು.
ನಗರದ ಪತ್ರಿಿಕಾ ಭವನದಲ್ಲಿ ಸುದ್ದಿಗೋಷ್ಠಿಿಯಲ್ಲಿ ಮಾತನಾಡಿ, ತನಗೆ ಸೇರಿದ ನಾಲ್ಕು ವ್ಯಾಾಪಾರ ಮಳಿಗೆಗಳಿದ್ದು, ಆರೋಪಿಯು ಅಕ್ರಮವಾಗಿ ಪ್ರವೇಶಿಸಿ ಮಳಿಗೆಗಳಿಗೆ ಕೀಲಿ ಹಾಕಿ ವ್ಯಾಾಪಾರಕ್ಕೆೆ ಅಡ್ಡಿಿಪಡಿಸುತ್ತಿಿದ್ದಾನೆ ಎಂದು ದೂರಿದರು.
ಈ ಸಂಬಂಧ ನ್ಯಾಾಯಾಲಯದ ಮೊರೆ ಹೋದಾಗ ತಮ್ಮ ಪರ ಆದೇಶ ನೀಡಿ ಪೊಲೀಸರು ರಕ್ಷಣೆ ನೀಡಲು ಹೇಳಿದರೂ ಆರೋಪಿಯು ಅದನ್ನು ಲೆಕ್ಕಿಿಸದೇ ಕಿರುಕುಳ ಮುಂದುವರೆಸಿದ್ದು ಈ ಬಗ್ಗೆೆ ಮುದಗಲ್ ಠಾಣೆ ಪಿಎಸ್ಐ ವೆಂಕಟೇಶ ಅವರ ಗಮನಕ್ಕೆೆ ತಂದರೂ ಆತ ಆಡಳಿತಾರೂಢ ಪಕ್ಷದ ಬೆಂಬಲಿಗನಾಗಿದ್ದರಿಂದ ಗೌರವ ಕೊಟ್ಟು ನನಗೆ ಅನ್ಯಾಾಯ ಮಾಡುತ್ತಿಿದ್ದಾಾರೆ. ಹೀಗೆ ಹಲವರ ಆಸ್ತಿಿ ನುಂಗಿದ ದಾಖಲೆ, ಠಾಣೆಯಲ್ಲಿ 150ಕ್ಕೂ ಹೆಚ್ಚು ಪ್ರಕರಣಗಳಲ್ಲಿ ಆರೋಪಿಯಾಗಿದ್ದಾಾನೆ ಟಿಪ್ಪುುಸುಲ್ತಾಾನ, ಪೊಲೀಸರ ರಕ್ಷಣೆಯೊಂದಿಗೆ ಸಾರ್ವಜನಿಕರಿಗೆ ನಿತ್ಯ ಕಿರುಕುಳ ಮತ್ತು ದೌರ್ಜನ್ಯ ಎಸಗುತ್ತಿಿದ್ದಾನೆ ಎಂಬ ಗಂಭೀರ ಆರೋಪ ಮಾಡಿದರು.
ಕೂಡಲೇ ಆರೋಪಿಯನ್ನು ಬಂಧಿಸಿ ಕಿರುಕುಳಕ್ಕೆೆ ತೆರೆ ಎಳೆಯದಿದ್ದರೆ ಠಾಣೆಯ ಮುಂದೆಯೇ ಉಪವಾಸ ಸತ್ಯಾಾಗ್ರಹ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದರು. ಈ ಕುರಿತು ಜಿಲ್ಲಾ ಪೊಲೀಸ್ ವರಿಷ್ಠಾಾಧಿಕಾರಿಗಳಿಗೆ ದೂರು ಸಲ್ಲಿಸುವುದಾಗಿ ತಿಳಿಸಿದ್ದಾರೆ.

