ಸುದ್ದಿಮೂಲವಾರ್ತೆ
ಕೊಪ್ಪಳ,ಸೆ.12: ಬಿ ಕೆ ಹರಿಪ್ರಸಾದರು ನೇರವಾಗಿ ಮಾಧ್ಯಮಗಳಿಗೆ ಹೇಳಿಕೆ ನೀಡುವ ಮುನ್ನ ಪಕ್ಷದ ವೇದಿಕೆಯಲ್ಲಿ ಚರ್ಚೆ ಮಾಡಬಹುದಾಗಿತ್ತು ಎಂದು ಸಚಿವ ಶಿವರಾಜ ತಂಗಡಗಿ ಹೇಳಿದರು.
ಅವರು ಇಂದು ಕೊಪ್ಪಳ ಜಿಲ್ಲೆಯ ಕುಷ್ಟಗಿಯಲ್ಲಿ ಮಾಧ್ಯಮಪ್ರತಿನಿಧಿಗಳೊಂದಿಗೆ ಮಾತನಾಡಿ ಬಿ.ಕೆ. ಹರಿಪ್ರಸಾದ್ ಅವರಿಗೆ ನೋವಾಗಿರಬಹುದು. ಆದರೆ ಮಾಧ್ಯಮದ ಮುಂದೆ ಹೇಳುವ ಅವಶ್ಯಕತೆ ಇದ್ದಿಲ್ಲ. ಚರ್ಚೆ ಮಾಡುವ ವೇದಿಕೆಯಲ್ಲಿ ಚರ್ಚೆ ಮಾಡಬಹುದಿತ್ತು. ಸಣ್ಣ ಪುಟ್ಟ ಭಿನ್ನಾಭಿಪ್ರಾಯವಿರಬಹುದು. ಹರಿಪ್ರಸಾದ್ ಅವರು ನೇರವಾಗಿ ಸಿದ್ದರಾಮಯ್ಯ ಅವರ ಹೆಸರು ಹೇಳಿಲ್ಲ ಎಂದರು.
ಕಾಂಗ್ರೆಸ್ ಒಂದು ದೊಡ್ಡ ಶಕ್ತಿ. ಕಾಂಗ್ರೆಸ್ ಮುಂದೆ ಯಾವ ಶಕ್ತಿ ಪ್ರದರ್ಶನ ನಡೆಯೋದಿಲ್ಲ. ಸಿದ್ದರಾಮಯ್ಯ ದೇವರಾಜ ಅರಸು ಆಗ್ತಾರೆ ಅಂತ ಯಾರ್ ಹೇಳಿದರು? ಸಿದ್ದರಾಮಯ್ಯ ಅವರು ಹೇಳಿದ್ದಾರಾ? ಎರಡನೇ ದೇವರಾಜ ಅರಸು ಅಂತ ನಾನೇ ಹೇಳಿದ್ದು. ನಾನು ದೇವರಾಜ ಅರಸು ಅಲ್ಲ, ಸಿದ್ದರಾಮಯ್ಯ ಅಂತ ಹೇಳಿದ್ದಾರೆ. ಎಸ್ಸಿಪಿ ಟಿಎಸ್ಪಿ ಬಗ್ಗೆ ಮಾತನಾಡುವ ನೈತಿಕತೆ ಬಿಜೆಪಿಯವರಿಗೆ, ಗೋವಿಂದ ಕಾರಜೋಳ ಅವರಿಗೂ ಇಲ್ಲ. ಎಸ್ಸಿಪಿ, ಟಿಎಸ್ಸ್ ಪಿ ಬಗ್ಗೆ ನಮಗೂ ಅರಿವಿದೆ. ಬಿಜೆಪಿಯವರಿಂದ ಕೇಳಬೇಕಿಲ್ಲ. ಸಿದ್ದರಾಮಯ್ಯ ಅವರ ಯಾವುದೇ ಹಗರಣವಿಲ್ಲ. ಅವರು ತುಂಬಾ ಕ್ಲೀನ್ ಹ್ಯಾಂಡ್ ಎಂದು ರಾಜ್ಯ, ದೇಶದ ಜನರಿಗೆ ಗೊತ್ತಿದೆ ಎಂದರು.
ಲೋಕಸಬೆಯ ನಂತರ ರಾಜ್ಯ ಸರಕಾರ ಡಮಾರ ಎಂಬ ಹೇಳಿಕೆ ಯತ್ನಾಳ್ ಅವರಿಗೆ ಬಗ್ಗೆ ಮಾತಾಡೋದೆ ತಪ್ಪು.. ರೈತರ ವಿಚಾರದಲ್ಲಿ ಯಾರೂ ಹಗುರವಾಗಿ ಮಾತನಾಡಬಾರದು. ರೈತ ಆತ್ಮಹತ್ಯೆ ಮಾಡಿಕೊಂಡರೆ 2 ಲಕ್ಷದಿಂದ 5 ಲಕ್ಷಪರಿಹಾರ ಮಾಡಿದ್ದು ಸಿದ್ದರಾಮಯ್ಯ.. ಯತ್ನಾಳ್ ಅವರಿಗೆ ಭ್ರಮೆ ಬಂದಿದೆ. ಅವರ ಪಕ್ಷದ ಭಾಷೆಯಲ್ಲಿ ಹೇಳೋದಾದ್ರೆ ಧಮ್ಮು ತಾಕತ್ತು ಇದ್ರೆ ಕಾಂಗ್ರೆಸ್ ನ 4 ಜನರನ್ನು ಕರೆದುಕೊಂಡು ಹೋಗಿರಿ. ರಾಜ್ಯ ಕಾಂಗ್ರೆಸ್ ಸರಕಾರದ ಐದು ವರ್ಷ ಬಂಡೆಯಂತಿರುತ್ತದೆ. ನಾವು ಯಾಕೆ ಆಪರೇಷನ್ ಮಾಡಬೇಕು? ಅವಶ್ಯಕತೆ ಇಲ್ಲ. . ಜೆಡಿಎಸ್ ಮತ್ತು ಬಿಜೆಪಿ ಮೈತ್ರಿ ಅಲ್ಲ. ಅದು ಅಪಮೈತ್ರಿ. ಬಿಜೆಪಿಯನ್ನು ಕೋಮುವಾದಿ ಅಂತಾರೆ. ಜಾತ್ಯಾತೀತ ಎಂದು ಹೇಳುವ ಜೆಡಿಎಸ್ ಕೋಮುವಾದಿಗಳ ಜೊತೆ ಹೋಗಿದ್ದು ಅಪಮೈತ್ರಿಮಾತನಾಡುವುದಕ್ಕೂ, ಭೇಟಿಯಾಗೋದಕ್ಕೂ ವ್ಯತ್ಯಾಸವಿದೆ ಎಂದು ಹೇಳಿದರು.