ಅತುಲ್ ಚತುರ್ವೇದಿ ಬೆಂಗಳೂರು, ನ.07:
ಭಾರತೀಯ ಆಡಳಿತ ಸೇವಾ ಅಧಿಕಾರಿಯೋರ್ವರು ಬರೆದ ಪತ್ರವೊಂದು ಕರ್ನಾಟಕ ಸರ್ಕಾರದಲ್ಲಿ ಆಡಳಿತದ ಚುಕ್ಕಾಾಣಿ ಹಿಡಿದಿರುವ ಉನ್ನತ ಮಟ್ಟದ ಆಡಳಿತ ವರ್ಗ ಹಾಗೂ ಸಚಿವಾಲಯ ಸೇವೆಗೆ ಸೇರಿದ ಅಧಿಕಾರಿ ಮತ್ತು ನೌಕರರ ನಡುವೆ ಬಿರುಕು ಮೂಡಿಸಿದೆ. ಅಲ್ಲದೆ, ಈ ಬಿರುಕು ಈಗ ಹಣಾಹಣಿಯ ಹೊಸ ಹಂತ ತಲುಪಿದೆ.
ಆರೋಗ್ಯ ಮತ್ತು ಕುಟುಂಬ ಕಲ್ಯಾಾಣ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿ ಹರ್ಷಗುಪ್ತಾಾ ಅವರು ಸಚಿವಾಲಯ ನೌಕರರ ನಿರಾಸಕ್ತಿಿ ಹಾಗೂ ವಿಳಂಬ ದ್ರೋಹ ಧೋರಣೆ ಕುರಿತು ಬರೆದ ಪತ್ರವನ್ನು ಕೂಡಲೇ ಹಿಂಪಡೆಯಲು ಕರ್ನಾಟಕ ಸರ್ಕಾರದ ಸಚಿವಾಲಯ ನೌಕರರ ಸಂಘವು ಸೋಮವಾರದವರೆಗೂ ಗಡುವು ನೀಡಿದೆ.
ಸಚಿವಾಲಯದ ಅಧಿಕಾರಿಗಳ ಕಾರ್ಯ ವೈಖರಿಯನ್ನು ಟೀಕಿಸಿ, ಸಂಘಟನಾ ಬದಲಾವಣೆಗಳನ್ನು ಶಿಾರಸ್ಸು ಮಾಡಿದ ಹರ್ಷ್ ಗುಪ್ತಾಾ ಅವರ ಈ ಪತ್ರವು ಸಚಿವಾಲಯದಲ್ಲಿ ಅಸಹನೆಯ ಸ್ಫೋೋಟಕ್ಕೆೆ ಕಾರಣವಾಗಿದೆ.
ಸಚಿವಾಲಯ ನೌಕರರ ಸಂಘವು ಇದನ್ನು ಆಡಳಿತದ ಬುನಾದಿಯನ್ನು ಅಪಮಾನಗೊಳಿಸುವಂತದ್ದು ಎಂದು ಆರೋಪಿಸಿದ್ದಲ್ಲದೆ, ಸೋಮವಾರದೊಳಗೆ ವಿವಾದಾತ್ಮಕ ಪತ್ರವನ್ನು ಹಿಂಪಡೆಯದಿದ್ದರೆ ರಾಜ್ಯದಾದ್ಯಂತ ಪ್ರತಿಭಟನೆ ಮತ್ತು ಹೋರಾಟಕ್ಕೆೆ ಇಳಿಯುವುದಾಗಿ ಸಂಘವು ಎಚ್ಚರಿಕೆ ನೀಡಿದೆ.
ಇದೇ ಅಕ್ಟೋೋಬರ್ 29 ರಂದು ಬರೆದ ತಮ್ಮ ಪತ್ರದಲ್ಲಿ ಹರ್ಷ ಗುಪ್ತಾಾ ಅವರು ಆರೋಗ್ಯ ಇಲಾಖೆಯ ಸೇವಾ ಕಡತಗಳು ಅನಗತ್ಯವಾಗಿ ವಿಳಂಬವಾಗುತ್ತಿಿವೆ. ಮೇಲ್ವಿಿಚಾರಣೆಯ ಕೊರತೆ ಹಾಗೂ ಕಚೇರಿಯ ಕ್ರಮ ಅಸಮರ್ಪಕವಾಗಿದೆ ಎಂದು ಟೀಕಿಸಿದ್ದರಲ್ಲದೆ, ಶಾಖಾಧಿಕಾರಿಗಳು, ಉಪ ಕಾರ್ಯದರ್ಶಿಗಳು ಕಡತಗಳನ್ನು ಸಮಯಕ್ಕೆೆ ತೀರುವಳಿ ಅಥವಾ ವಿಲೇವಾರಿ ಮಾಡುತ್ತಿಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದರು.
ಹರ್ಷ ಗುಪ್ತ ಪತ್ರದಲ್ಲೇನಿದೆ?
ಮೇಲಿಂದ ಮೇಲೆ ಸೂಚನೆಗಳನ್ನು ನೀಡಿದರೂ ಕಡತಗಳು ವಿಳಂಬವಾಗಿ ಬರುತ್ತಿಿವೆ, ಅಗತ್ಯ ದಾಖಲೆಗಳಿಲ್ಲದೆ ಮಂಡನೆಯಾಗುತ್ತಿಿವೆ. ಇದರಿಂದ ನಿರ್ಧಾರ ಕೈಗೊಳ್ಳುವಲ್ಲಿ ವಿಳಂಬ ಉಂಟಾಗುತ್ತಿಿದೆ ಎಂದು ಹರ್ಷ ಗುಪ್ತಾಾ ಪತ್ರದಲ್ಲಿ ನಮೂಸಿದ್ದರು.
ಸಚಿವಾಲಯದ ವ್ಯವಸ್ಥೆೆಯ ಪುನಾರಚನೆ ಅಗತ್ಯವಿದೆ ಎಂದು ಹೇಳಿ, ಅಲ್ಲಿನ ಮೇಲ್ಮಟ್ಟದ ಹುದ್ದೆಗಳಿಗೆ ಭಾರತೀಯ ಆಡಳಿತ ಸೇವಾ (ಐಎಎಸ್) ಅಥವಾ ಕರ್ನಾಟಕ ಆಡಳಿತ ಸೇವಾ (ಕೆಎಎಸ್) ಹಿರಿಯ ಅಧಿಕಾರಿಗಳನ್ನು ನೇಮಕ ಮಾಡುವಂತೆ ಹಾಗೂ ಅಸಮರ್ಥ ನೌಕರರನ್ನು ವರ್ಗಾವಣೆ ಮಾಡುವ ಅಧಿಕಾರ ನೀಡುವಂತೆ ತಮ್ಮ ಪತ್ರದಲ್ಲಿ ಶಿಾರಸ್ಸು ಮಾಡಿದ್ದರು.
ನೌಕರರ ಸಂಘದ ಕಿಡಿ:
ಹರ್ಷ ಗುಪ್ತಾಾ ಅವರ ಪತ್ರ ಹೊರಬಂದ ಕೆಲವೇ ದಿನಗಳಲ್ಲಿ ಸಚಿವಾಲಯದ ನೌಕರರ ಸಂಘವು ತೀವ್ರ ಆಕ್ಷೇಪ, ಆಕ್ರೋೋಶ ವ್ಯಕ್ತಪಡಿಸಿದೆ.
ಸಂಘದ ಅಧ್ಯಕ್ಷ ರಮೇಶ್ ಸಂಗಾ ಅವರ ಸಹಿ ಹೊಂದಿರುವ ನಾಲ್ಕು ಪುಟಗಳ ಪ್ರತಿಕ್ರಿಿಯೆಯ ಪತ್ರವನ್ನು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರಿಗೆ ಕಳುಹಿಸಿ, ಹರ್ಷ ಗುಪ್ತಾಾ ಅವರ ಪತ್ರವನ್ನು ‘ದುರಾಹಂಕಾರ, ಕಾನೂನುಬಾಹಿರ ಮತ್ತು ನೌಕರರ ಮನೋಬಲ ಕುಗ್ಗಿಿಸುವ ಕೃತ್ಯ’ ಎಂದು ಹೇಳಿದೆ. ಸಚಿವಾಲಯವು ಕರ್ನಾಟಕದ ಆಡಳಿತದ ಸ್ಥಂಭದಂತಿದೆ. ಅದನ್ನು ದುರ್ಬಲಗೊಳಿಸುವ ಈ ಪ್ರಯತ್ನ ಅಸಹ್ಯಕರ ಎಂದು ಸಂಘವು ಕಟುವಾಗಿ ಟೀಕಿಸಿದೆ.
ಒಂದು ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿಗೆ ಇಡೀ ಸಚಿವಾಲಯದ ಪುನಾರಚನೆ ಸಲಹೆ ನೀಡುವ ಅಧಿಕಾರವೇ ಇಲ್ಲ. ಇದು ನಾನು ಸರ್ಕಾರದ ಮಾಲೀಕ ಎಂಬ ಮನೋಭಾವದಿಂದ ಹೊರಹೊಮ್ಮಿಿದ ಧೋರಣೆ ಎಂದು ಸಂಘವು ಅಭಿಪ್ರಾಾಯಪಟ್ಟಿಿದೆ.
ಐಎಎಸ್ ಅಹಂಕಾರ’ಕ್ಕೆೆ ವಿರುದ್ಧವಾಗಿ ನೌಕರರ ಏಕತೆ
ಸಂಘದ ಹೇಳಿಕೆಯಲ್ಲಿ ಐಎಎಸ್ ಅಹಂಕಾರ ಎಂದು ಬಣ್ಣಿಿಸಿ, ಇತ್ತೀಚಿನ ವರ್ಷಗಳಲ್ಲಿ ಐಎಎಸ್ ಅಧಿಕಾರಿಗಳು ಮತ್ತು ರಾಜ್ಯ ಸೇವಾ ಅಧಿಕಾರಿಗಳ ನಡುವೆ ಹೆಚ್ಚುತ್ತಿಿರುವ ಅಂತರಕ್ಕೆೆ ಇದು ಮತ್ತೊೊಂದು ಉದಾಹರಣೆ ಎಂದು ಬಣ್ಣಿಿಸಲಾಗಿದೆ.
ಓರ್ವ ಐಎಎಸ್ ಅಧಿಕಾರಿಯ ಅಸಮರ್ಥತೆಯಿಂದ ಇಡೀ ಐಎಎಸ್ ಸೇವೆ ಅಸಮರ್ಥ ಎಂದು ಹೇಳಲಾಗದು. ಹಾಗೆಯೇ, ಕೆಲವು ನೌಕರರ ತಪ್ಪಿಿನಿಂದ ಇಡೀ ಸಚಿವಾಲಯದ ಕಾರ್ಯಕ್ಷಮತೆಯನ್ನು ಪ್ರಶ್ನಿಿಸುವುದು ಅನ್ಯಾಾಯ, ಎಂದು ಸಂಘವು ಸ್ಪಷ್ಟಪಡಿಸಿದೆ.
ಸಚಿವಾಲಯದ ಅಧಿಕಾರಿಗಳು ಕರ್ನಾಟಕ ಲೋಕಸೇವಾ ಆಯೋಗದ ಮೂಲಕ ಆಯ್ಕೆೆಯಾಗುತ್ತಾಾರೆ ಎಂಬುದನ್ನು ಸಂಘವು ಉಲ್ಲೇಖಿಸಿದೆ.
ನಮ್ಮ ಅಧಿಕಾರಿಗಳು ಕರ್ನಾಟಕ ಲೋಕ ಸೇವಾ ಆಯೋಗದ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಉನ್ನತ ಶ್ರೇೇಣಿಯಲ್ಲೇ ತೇರ್ಗಡೆ ಹೊಂದಿದವರು. ಅಂತಹವರ ಕಾರ್ಯಕ್ಷಮತೆ ಹಾಗೂ ವೃತ್ತಿಿಪರತೆಯನ್ನು ಪ್ರಶ್ನಿಿಸುವುದು ರಾಜ್ಯದ ಆಡಳಿತ ಪರಂಪರೆಯ ವರ್ಚಸ್ಸು ಕುಂದಿಸುವಂತಾಗಿದೆ ಎಂದು ಸಂಘ ತನ್ನ ಹೇಳಿಕೆ ತಿಳಿಸಿದೆ.
ಶುಭಂ ಶುಕ್ಲಾಾ ವಿವಾದ:
ಈ ವಿವಾದಕ್ಕೆೆ ಮುನ್ನ ಮತ್ತೊೊಂದು ಬೆಳವಣಿಗೆಯೂ ನಡೆದಿತ್ತು. ಐಎಎಸ್ ಅಧಿಕಾರಿ ಶುಭಂ ಶುಕ್ಲಾಾ ಅವರನ್ನು ಆರೋಗ್ಯ ಇಲಾಖೆಯ ಸರ್ಕಾರದ ಉಪ ಕಾರ್ಯದರ್ಶಿ ಹುದ್ದೆಗೆ ನೇಮಕ ಮಾಡಲಾಗಿತ್ತು.
ಈ ನೇಮಕಾತಿಯನ್ನು ಸಚಿವಾಲಯದ ನೌಕರರ ಒತ್ತಡ ಹಾಗೂ ಪ್ರತಿಭಟನೆಗೆ ಮಣಿದು, ಸೇವಾ ಕ್ರಮದ ಉಲ್ಲಂಘನೆ ಎಂಬ ಸಂಘದ ವಾದಕ್ಕೆೆ ಮನ್ನಣೆ ದೊರೆತು ಮುಖ್ಯ ಕಾರ್ಯದರ್ಶಿ ಶಾಲಿನಿ ರಾಜನೀಶ್ ಅವರ ಮಧ್ಯಸ್ಥಿಿಕೆ ಬಳಿಕ, ಶುಭಂ ಶುಕ್ಲಾಾ ಅವರ ನೇಮಕಾತಿಯನ್ನು ತಕ್ಷಣ ಹಿಂತೆಗೆದುಕೊಳ್ಳಲಾಗಿದ್ದು, ನಂತರ ಅವರನ್ನು ಬೇರೆಡೆಗೆ ವರ್ಗಾವಣೆ ಮಾಡಲಾಗಿದೆ.
ಈ ಬೆಳವಣಿಗೆಯು ಐಎಎಸ್ ಅಧಿಕಾರಿಗಳು ಸಚಿವಾಲಯದ ನೌಕರರ ಕಾರ್ಯಗಳಲ್ಲಿ ಹಸ್ತಕ್ಷೇಪ ಮಾಡುತ್ತಿಿದ್ದಾರೆ ಎಂಬ ಆರೋಪಕ್ಕೆೆ ಮತ್ತೊೊಂದು ಉದಾಹರಣೆಯಾಗಿದೆ.
ಸೋಮವಾರವರೆಗೆ ಗಡುವು:
‘ಹರ್ಷ ಗುಪ್ತಾಾ ಅವರ ಪತ್ರವನ್ನು ತಕ್ಷಣ ಹಿಂಪಡೆಯಬೇಕು. ಇಡೀ ಸಚಿವಾಲಯದ ನೌಕರರ ಗೌರವಕ್ಕೆೆ ಧಕ್ಕೆೆಯಾಗಿದೆ. ರಾಜ್ಯ ಸರ್ಕಾರ ಸೋಮವಾರದೊಳಗೆ ಕ್ರಮ ಕೈಗೊಳ್ಳದಿದ್ದರೆ ರಾಜ್ಯದಾದ್ಯಂತ ಹೋರಾಟ ಆರಂಭವಾಗಲಿದೆ’ ಎಂದು ಸಂಘವು ಎಚ್ಚರಿಕೆ ನೀಡಿದೆ.
ಜಿಲ್ಲಾಮಟ್ಟದ ಶಾಖೆಗಳಿಗೆ ಈಗಾಗಲೇ ಸೂಚನೆ ನೀಡಿ, ಸರ್ಕಾರ ಕ್ರಮ ಕೈಗೊಳ್ಳದಿದ್ದರೆ ರಾಜ್ಯಮಟ್ಟದ ಪ್ರತಿಭಟನೆಗೆ ಸಿದ್ಧತೆ ಪ್ರಾಾರಂಭಿಸಿದೆ.
ಸರ್ಕಾರದ ಮೌನ, ಅಧಿಕಾರಿಗಳ ಆತಂಕ :
ಮುಖ್ಯ ಕಾರ್ಯದರ್ಶಿಯವರ ಕಚೇರಿಯಿಂದ ಯಾವುದೇ ಅಧಿಕೃತ ಪ್ರತಿಕ್ರಿಿಯೆ ಬಂದಿಲ್ಲದಿದ್ದರೂ, ಮುಖ್ಯಮಂತ್ರಿಿ ಸಿದ್ದರಾಮಯ್ಯ ಅವರಿಗೆ ವರದಿ ಸಲ್ಲಿಕೆಯಾಗಿದೆ. ಮುಂದಿನ ವಾರ ಹಿರಿಯ ಅಧಿಕಾರಿಗಳ ಸಭೆ ಕರೆದರೆ ಅಚ್ಚರಿ ಇಲ್ಲ. ಕೆಲವು ಹಿರಿಯ ಐಎಎಸ್ ಅಧಿಕಾರಿಗಳು ಖಾಸಗಿಯಾಗಿ ’ಗುಪ್ತಾಾ ಅವರ ಅಸಮಾಧಾನ ನ್ಯಾಾಯ ಸಮ್ಮತವಾದರೂ, ಅವರ ಪತ್ರದ ಶೈಲಿ ಮತ್ತು ವಿಷಯ ವ್ಯಾಾಪ್ತಿಿ ಅತಿಯಾಗಿ ಹೋಯಿತು’ ಎಂದು ಒಪ್ಪಿಿಕೊಂಡಿದ್ದಾರೆ.
ಆಡಳಿತದ ಶಿಸ್ತಿಿನ ಪ್ರಶ್ನೆೆ :
ಈ ವಿವಾದವು ರಾಜ್ಯದ ಆಡಳಿತದಲ್ಲಿ ಐಎಎಸ್ ಮತ್ತು ಸಚಿವಾಲಯದ ನೌಕರರ ನಡುವಿನ ಶಕ್ತಿಿಯ ಹೋರಾಟವನ್ನು ಮತ್ತೊೊಮ್ಮೆೆ ಬೆಳಕಿಗೆ ತಂದಿದೆ. ಆಡಳಿತವು ಸಹಕಾರದಿಂದ ನಡೆಯಬೇಕು, ಸ್ಪರ್ಧೆಯಿಂದ ಅಲ್ಲ. ಗೌರವ ಮತ್ತು ಸಂಯಮ ಇಲ್ಲದಿದ್ದರೆ ವ್ಯವಸ್ಥೆೆ ಕುಸಿಯುತ್ತದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಸೋಮವಾರದ ಗಡುವು ಮುಗಿಯುವ ವೇಳೆಗೆ, ರಾಜ್ಯ ಸರ್ಕಾರ ಈ ವಿವಾದವನ್ನು ಹೇಗೆ ನಿಭಾಯಿಸುತ್ತದೆ? ಎನ್ನುವುದು ಕರ್ನಾಟಕದ ಆಡಳಿತದ ಸೌಹಾರ್ಧತೆಯ ಭವಿಷ್ಯವನ್ನು ನಿರ್ಧರಿಸಲಿದೆ.

