ಕೆ ಬಿ ಖವಾಸ್
ಹೊಸಪೇಟೆ (ವಿಜಯನಗರ ): ಹೂವಿನಹಡಗಲಿಯು ಐತಿಹಾಸಿಕವಾಗಿ, ಧಾ ರ್ಮಿಕ, ಭೌಗೋಳಿಕ ಹಾಗೂ ರಾಜ ಕೀಯ ಕ್ಷೇತ್ರದಲ್ಲಿ ತನ್ನದೇ ಆದ ಹೆಸರನ್ನು ಪಡೆದ ಕ್ಷೇತ್ರ. ಐತಿಹಾಸಿಕವಾಗಿ ಹೇಳಬೇಕಾದರೆ ಹೂವಿನ ಹಡಗಲಿಯನ್ನು ಮೊದಲು” ಪುವಿನ ಪೊಸ ವಡಂಗಿಲೆ ” ಹಾಗೂ” ಪೂವಿನ ಪಡಂಗಿಲೆ” ಎಂಬ ಹೆಸರುಗಳಿಂದ ಕರೆಯಲ್ಪಪಡುತಿತ್ತು. ಹೂವಿನಹಡಗಲಿಗೆ ವಿಜಯನಗರ ಸಾಮ್ರಾ ಜ್ಯಕ್ಕೆ ಅಭಿನಾವಭಾವ ಸಂಬಂಧವಿದೆ. ಇಲ್ಲಿನ ಮಲ್ಲಿಗೆಯ ಹೂವನ್ನು ತೆಪ್ಪದ ಮೂಲಕ ತುಂಗಭದ್ರ ನದಿಯಿಂದ ಹಂಪೆಯ ವಿರೂಪಾಕ್ಷೇಶ್ವರನ ಪೂಜೆಗೆ ಸಮರ್ಪಣೆ ಮಾಡಲು ವಯ್ಯುತ್ತಿದ್ದರು ಎಂಬುದು ಪ್ರತೀಕ.
ಹೂವಿನಹಡಗಲಿಯ ಮಲ್ಲಿಗೆಯ ಹೂವು ಹೆಸರು ವಾಸಿಯಾಗಿದೆ. ರಾಜ್ಯದ ಮೂಲೆ ಮೂಲೆಯಿಂದ ಇಲ್ಲಿನ ಮಲ್ಲಿಗೆಯ ಹೂವಿಗೆ ಬೇಡಿಕೆ ಇದೆ. ಹೆಸರೇ ಸೂ ಚಿಸುವಂತೆ ಈ ಕ್ಷೇತ್ರವು ರಾಜ್ಯದ ರಾಜಕೀಯದಲ್ಲಿ ತನ್ನದೇ ಆದ ಹೆಸರು ಮಾಡಿ ದೆ. ಕರ್ನಾಟಕ ರಾಜ್ಯದ ಮಾಜಿ ಉಪಮುಖ್ಯ ಮಂತ್ರಿ, ಸಾಂಸ್ಕೃತಿಕ ರಾಯಭಾರಿ, ರಾಜಕೀಯ ಮುತ್ಸದ್ದಿ, ನಡೆದಾಡುವ ವಿಶ್ವಕೋಶ, ಹಂಪಿ ಉತ್ಸವದ ರೂವಾರಿ ಹೀಗೆ ಹಲವು ನಾಮಗಳ ಮೂಲಕ ಹೆಸರುವಾಸಿಯಾಗಿದ್ದ ಎಂ. ಪಿ ಪ್ರಕಾಶ್ ( ಹಂಪಿ ಪ್ರಕಾಶ್ )ರನ್ನು ಶಾಸಕರಾಗಿ, ಮಂತ್ರಿ ಗಳಾಗಿ, ಉಪಮುಖ್ಯಮಂತ್ರಿಯಾಗಿ ನೀಡಿದ ಕ್ಷೇತ್ರ ಹೂವಿ ನಹಡಗಲಿಗೆ ತನ್ನದೇ ಆದ ಮಹತ್ವವಿದೆ.
ಹೂವಿನಹಡಗಲಿಯು ಕ್ಷೇತ್ರ ಮರು ವಿಂಗಡಣೆ ನಂತರ ಪರಿಶಿಷ್ಟ ಜಾತಿಗೆ ಮೀಸ ಲಾಗಿದೆ.ವಿಂಗಡಣೆ ನಂತರ ನಡೆದ ಮೊದಲ ಚುನಾವಣೆಯಲ್ಲಿ ಬಿಜೆಪಿ ಪಕ್ಷದ ಬಿ.ಚಂದ್ರನಾಯಕ್, ಹೂವಿನಹಡಲಿಗೆ ಕಾಂಗ್ರೆಸ್ ಪಕ್ಷದ ಅಭ್ಯ ರ್ಥಿಯಾಗಿದ್ದ ಪಿ ಟಿ ಪರಮೇಶ್ವರ್ ನಾಯ್ಕ್ ರನ್ನ ಸೋಲಿಸಿ ಶಾಸಕರಾಗಿದ್ದರು.ನಂತರ ನಡೆದ 20 13 ಮತ್ತು 2018 ರ ಚುನಾವಣೆಯಲ್ಲಿ ಸತತ ಎರಡು ಬಾರಿ ಕಾಂಗ್ರೆಸ್ ಪಕ್ಷ ದಿಂ ದ ಗೆಲುವು ಸಾಧಿಸಿದ ಪಿ.ಟಿ.ಪರಮೇಶ್ವರ್ ನಾಯ್ಕ್ ಹೂವಿನ ಹಡಗಲಿ ಕ್ಷೇತ್ರದ ಇತಿಹಾಸದಲ್ಲಿ ಸತತ ಎರಡು ಬಾರಿಗೆದ್ದ ಹೆಗ್ಗಳಿಕೆಗೆ ಪಾತ್ರರಾಗಿ ಈ ಸಲ ಅವರಿಗೆ ಕಾಂಗ್ರೆಸ್ ಪಕ್ಷ ಟಿಕೆಟ್ ನೀಡುವ ಮೂಲಕ ಕ್ಷೇತ್ರದಿಂದ ಹ್ಯಾಟ್ರಿಕ್ ಬಾರಿಸುವ ಅವ ಕಾಶ ಕಲ್ಪಿಸಿದೆ.
ಎಂ ಪಿ ಪ್ರಕಾಶ್ – ಹರಪ್ಪನಹಳ್ಳಿಗೆ, ಪಿಟಿ ಪರಮೇಶ್ವರ ನಾಯ್ಕ್ ಹೂವಿನ ಹಡಗಲಿಗೆ – ಅದಲು ಬದಲು
2008 ರಲ್ಲಿ ವಿಧಾನಸಭಾ ಕ್ಷೇತ್ರಗಳ ಮರು ವಿಂಗಡಣೆ ನಂತರ ಆದ ಮೀಸಲಾತಿ ಗಳಂತೆ ಹರಪನಹಳ್ಳಿ ಕ್ಷೇತ್ರವನ್ನು ಸಮಾನ್ಯ ಕ್ಷೇತ್ರವನ್ನಾಗಿ ಹಾಗೆಯೇ ಹೂವಿನ ಹಡಗಲಿಯನ್ನು ಪರಿಶಿಷ್ಟ ಜಾತಿಗೆ ಮೀಸಲು ಘೋ ಷಣೆಯ ನಂತರ ಹೂವಿನ ಹಡಗಲಿಯನ್ನು ಪ್ರತಿನಿಧಿಸುತ್ತಿದ್ದ ಮಾಜಿ ಮುಖ್ಯಮಂತ್ರಿ ಎಂ ಪಿ ಪ್ರಕಾಶ್ ಕಾಂಗ್ರೆ ಸ್ ಪಕ್ಷವನ್ನು ಸೇರಿ ಹರಪನಹಳ್ಳಿಯನ್ನು ಆಯ್ಕೆ ಮಾಡಿಕೊಂಡು, ಇಲ್ಲಿ ಸತತ ಎರ ಡು ಅವಧಿಗೆ ಶಾಸಕರಾಗಿ ಆಯ್ಕೆಯಾಗಿದ್ದ ಪಿ ಟಿ ಪರಮೇಶ್ವರ ನಾಯ್ಕ್ ಹೂವಿನ ಹಡಗಲಿಯನ್ನು ಆಯ್ಕೆ ಮಾಡಿಕೊಂಡು, ಕ್ಷೇತ್ರಗಳನ್ನು ಅದಲು ಬದಲು ಮಾಡಿ ಕೊಂಡು ಇಬ್ಬರು ನಾಯಕರು ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿ ಸೋಲನ್ನು ಅನುಭವಿಸಿದ್ದರು.
2013- ಅದೃಷ್ಟವಂತ ಪಿ ಟಿ ಪರಮೇಶ್ವರ್ ನಾಯ್ಕ್:
2013ರಲ್ಲಿ ನಡೆದ ಚುನಾವಣೆಯಲ್ಲಿ ಅದೃಷ್ಟದ ಮೂಲ ಕ ಪಿ ಟಿ ಪರಮೇಶ್ವರ ನಾಯಕ್ ಹಡಗಲಿ ಕ್ಷೇತ್ರದ ಶಾಸಕರಾಗಿ ಮೊದಲ ಬಾರಿಗೆ ಆಯ್ಕೆಯಾದರು. ಈ ಚುನಾವಣೆಯಲ್ಲಿ ಬಿಜೆಪಿಯಿಂದ ಬಿ. ಚಂದ್ರನಾಯ್ಕ್ , ಕೆ.ಜೆ.ಪಿ ಯಿಂದ ಎಲ್. ಮಧು ನಾಯ್ಕ್ , ಬಿಎಸ್ಆರ್ ನಿಂದ ಹೇಮಂತ್ ಕುಮಾರ್.ಬಿ ಹಾಗೂ ಜೆಡಿ ಎಸ್ ನಿಂದ ಡಾ.ಎಲ್.ಪಿ. ನಾಯ್ಕ್ ಕಠಾರಿ ಸೇರಿದಂತೆ ಪಕ್ಷೇತರರು ಸ್ಪರ್ಧಿಸಿದ್ದ ರಿಂದ ಅತಿ ಹೆಚ್ಚು ಮತಗಳನ್ನು ಪಡೆದ ಪಿ.ಟಿ. ಪರಮೇಶ್ವರ್ ನಾಯ್ಕ್ ಕಾಂಗ್ರೆಸ್ ಪಕ್ಷದಿಂದ ಆಯ್ಕೆಯಾದರು.
2018 ರಲ್ಲಿಯೂ ಇವರಿಗೆ ಪಿ.ಟಿ ಪರಮೇಶ್ವರ್ ನಾಯ್ಕರವರಿಗೆ ಮತ್ತೊಮ್ಮೆ ಶಾಸಕರಾಗುವ ಅದೃಷ್ಟ ಕೂಡಿಬಂತು. ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿ ಕೊನೆ ಗಳಿಗೆಯಲ್ಲಿ ಟಿಕೆ ಟ್ ಸಿಗದೆ ಪಕ್ಷೇತರರಾಗಿ ಸ್ಪರ್ಧಿಸಿದ್ದ, ಸಿಂಗಟಾಲೂರ್ ಏತ ನೀರಾವರಿ ಇಲಾಖೆಯ ನಿವೃತ್ತ ಕಾರ್ಯ ನಿರ್ವಾಹಕ ಅಭಿಯಂತರ ಓದೋ ಗಂಗಪ್ಪ ಎರಡನೇ ಅತಿ ಹೆಚ್ಚು ಮತಗಳನ್ನು ಪಡೆಯುವ ಮೂಲಕ ಬಿಜೆಪಿಯನ್ನು ಮೂರ ನೇ ಸ್ಥಾನಕ್ಕೆ ಕಳಿಸಿ ಪಿಟಿ ಪರಮೇಶ್ವರ ನಾಯಕರ ಗೆಲುವಿಗೆ ಕಾರಣೀ ಭೂತರಾದರು. ಹೀಗೆ ಎರಡು ಸಲ ಸತತ ಅದೃಷ್ಟದ ಶಾಸಕರಾಗಿ ಹೊರಹೊಮ್ಮಿ ದ ಇವರು ಮಲ್ಲಿಗೆ ನಾಡಿನಲ್ಲಿ ಹ್ಯಾಟ್ರಿಕ್ ಬಾರಿಸುತ್ತಾರೆಯೇ ಎಂಬುದು ಕಾಂಗ್ರೆ ಸ್ ಪಕ್ಷದ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.
ಬಿಜೆಪಿಯಿಂದ ಪ್ರಬಲ ಟಿಕೆಟ್ ಆಕಾಂಕ್ಷಿಯಾಗಿರುವ ಬಿ ಚಂದ್ರನಾಯಕ್, ಓದೋ ಗಂಗಪ್ಪ , ಮಧು ನಾಯ್ಕ್ ಸೇರಿದಂತೆ ಕೆಲವರು ಪಕ್ಷಕ್ಕೆ ಅರ್ಜಿ ಸಲ್ಲಿಸಿದ್ದರೂ ಮು ಖ್ಯ ವಾಹಿನಿಗೆ ಬರುವವರು ಇವರೇ. ಹೂವಿನ ಹಡಗಲಿ ಕ್ಷೇತ್ರದಲ್ಲಿ ಬಿ.ಚಂದ್ರನಾ ಯ್ಕ್ 2008ರಲ್ಲಿ ಶಾಸಕರಾಗಿದ್ದು ಬಿಟ್ಟರೆ ನಂತರ ನಡೆದ 2013 ಚುನಾವಣೆಯ ಲ್ಲಿ 40 ಸಾವಿರಕ್ಕೂ ಹೆಚ್ಚು ಮತಗಳ ಅಂತರದಿಂದ ಸೋಲು ಅನುಭವಿಸಿದ್ದರು. ಈ ಚುನಾವಣೆಯಲ್ಲಿ ಕೆಜೆಪಿ ಮತ್ತು ಬಿ.ಎಸ್. ಆರ್ ಪಕ್ಷಗಳ ಸ್ಪರ್ಧೆ ಪಿಟಿ ಪರ ಮೇಶ್ವರ ನಾಯ್ಕ ಗೆಲುವಿನ ಅಂತರ ಹೆಚ್ಚಿಸಿದ್ದವು.
2018ರ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿ ದ್ದ ಪಿ.ಟಿ.ಪರಮೇಶ್ವರ ನಾಯ್ಕ್ ಗೆ ಎದುರಾಳಿ ಯಾಗಿ ಸ್ಪ ರ್ಧೆ ನೀಡಿದ್ದು ಬಿಜೆಪಿಯಲ್ಲ, ಬಿಜೆಪಿ ಟಿಕೆಟ್ ಆಕಾಂಕ್ಷಿ ಯಾಗಿದ್ದ ಓದೋ ಗಂಗಪ್ಪಗೆ ಟಿಕೆಟ್ ನಿರಾಕರಿಸಿ ಚಂದ್ರ ನಾಯ್ಕ್ ಗೆ ನೀಡಿದ್ದರಿಂದ, ಸ್ವತಂತ್ರವಾಗಿ ನಿಂತು ಎರಡನೇ ಅತಿ ಹೆಚ್ಚು 44919 ಮತ ಪಡೆದು ಬಿಜೆಪಿ ಅಭ್ಯರ್ಥಿ ಚಂದ್ರ ನಾಯ್ಕ್ ಮೂರನೇ ಸ್ಥಾನಕ್ಕೆ ಬರುವಂತಾಯಿತು. ಜೆ ಡಿ ಎಸ್ ನಿಂದ ಕೆ ಪುತ್ರಪ್ಪ 8000 ಹೆಚ್ಚು ಮತ ಪಡೆದು ಗಮನ ಸೆಳೆದಿದ್ದರು.
2023 ಚುನಾವಣೆ ರಂಗೇರುತ್ತಿದೆ, ಕಾಂಗ್ರೆಸ್ ನಿಂದ ಪಿಟಿ ಪರಮೇಶ್ವರ ನಾಯಕ್ ಅಭ್ಯರ್ಥಿಯಾಗಿ ಅಧಿಕೃತವಾಗಿ ಘೋಷಣೆಯಾಗಿದ್ದಾರೆ. ಬಿಜೆಪಿಯಿಂದ ಇನ್ನೂ ವರೆಗೂ ಯಾರಿಗೂ ಟಿಕೆಟ್ ಘೋಷಣೆ ಆಗಿಲ್ಲ, ಇಲ್ಲಿಯವರೆಗೂ ಕಾಂಗ್ರೆಸ್ ಪಕ್ಷದ ಟಿಕೆಟ್ ಆಕಾಂ ಕ್ಷಿಯಾಗಿದ್ದ ಕೃಷ್ಣ ನಾಯ್ಕ್ , ಕೆ ಸಿ ಕೊಂಡೊಯ್ಯ ಹಾಗೂ ಮಾಜಿ ಶಾಸಕ ನಂದಿಹಳ್ಳಿ ಹಾಲಪ್ಪ ಬೆಂಬಲಿತ, ಕೃಷ್ಣ ನಾಯಕ್ ಇತ್ತೀಚಿಗೆ ಹೂವಿ ನಹಡಗಲಿ ಪಟ್ಟಣದಲ್ಲಿ ಯಾರು ಮಾಡದಂತ ಅಭಿ ಮಾನಿಗಳ ದೊಡ್ಡ ಸಮಾ ರಂಭ ಏರ್ಪಡಿಸಿ ಹೆಲಿಕಾಪ್ಟರ್ ಮೂಲಕ ಸಿನಿಮಾ ತಾರೆಯರನ್ನು ಕರೆಸಿ ನಾನು ಏನು ಮಾಡಬಲ್ಲೆ ಎಂಬುದನ್ನು ಕಾಂಗ್ರೆಸ್ ಪಕ್ಷಕ್ಕೆ ತೋರಿಸಿದ ಯುವ ನಾಯಕ, ಪಕ್ಷ ದಿಂದ ಟಿಕೆಟ್ ವಂಚಿತನಾಗಿ ಬಿಜೆಪಿ ಪಕ್ಷದ ಬಾಗಿಲು ತಟ್ಟುತ್ತಿದ್ದಾನೆ, ಈತ ನಿಗೆ ಬಿಜೆಪಿ ಟಿಕೆಟ್ ಸಿಕ್ಕರೆ ಹಾಲಿ ಶಾಸಕ ಪಿ. ಟಿ.ಪರಮೇಶ್ವರ್ ನಾಯ್ಕ ಗೆ ಪೈ ಪೋಟಿ ನೀಡುವುದು ಖಚಿತ. ಕಳೆದ ಚುನಾವಣೆಯಲ್ಲಿ ಎರಡನೆಯ ಅತಿ ಹೆಚ್ಚು ಓದೋ ಗಂಗಪ್ಪ ಎರಡನೇ ಅತಿ ಹೆಚ್ಚು ಮತ ಪಡೆದಿದ್ದರೂ ಸಹ ಈಗ ಆ ಪೈಪೋ ಟಿ ನೀಡಲು ಸಾಧ್ಯವಿಲ್ಲವೆಂದು ಜನರ ಪ್ರತಿಕ್ರಿಯೆಯಾಗಿದೆ. ಬಿಜೆಪಿ ಯಾರಿಗೆ ಟಿಕೆಟ್ ನೀಡುತ್ತೋ ಅವರ ಮೇಲೆ ಪಿಟಿ ಪರಮೇಶ್ವರನ ಹ್ಯಾಟ್ರಿಕ್ ಹೊಡಿಯು ತ್ತಾರೋ ಏನೋ? ಕಾದು ನೋಡಬೇಕಾಗಿದೆ .
ಕಳೆದು ನಾಲ್ಕು ವರ್ಷಗಳಲ್ಲಿ ಹೂವಿನಹಡಗಲಿ ಕ್ಷೇತ್ರ ದ ಹಿನ್ನೊಟ :
2008 ರಲ್ಲಿ
ಬಿ ಚಂದ್ರನಾಯಕ್ ಬಿಜೆಪಿ 43992
ಪಿ ಟಿ ಪರಮೇಶ್ವರನಾಯ್ಕ್ ಕಾಂಗ್ರೆಸ್ 37474
2013 ರಲ್ಲಿ
ಪಿ ಟಿ ಪರಮೇಶ್ವರ ನಾಯ್ಕ್ ಕಾಂಗ್ರೆಸ್ 59336
ಬಿ.ಚಂದ್ರನಾಯಕ್ ಬಿಜೆಪಿ 18526
ಮಧು ನಾಯಕ್. ಎಲ್ ಕೆಜೆಪಿ 18178
ಹೇಮಂತ ಕುಮಾರ್ ಬಿಎಸ್ಅರ್ 10300
ಡಾ.ಎಲ್.ಪಿ.ನಾಯ್ಕ್ ಜೆಡಿಎಸ್ 3861
2018 ರಲ್ಲಿ
ಪಿ ಟಿ ಪರಮೇಶ್ವರ ನಾಯ್ಕ್ ಕಾಂಗ್ರೆಸ್ 54097
ಓದೋ ಗಂಗಪ್ಪ ಸ್ವತಂತ್ರ 44919
ಬಿ. ಚಂದ್ರನಾಯ್ಕ್ ಬಿಜೆಪಿ 28255
ಕೆ. ಪುತ್ರಪ್ಪ ಜೆಡಿಎಸ್ 8327
ಮತದಾರರು ಪುರುಷ : 94323 ಮಹಿಳಾ : 92125 ಇತರೆ : 13
ಒಟ್ಟು ಮತದಾರರು – 186461