ಸುದ್ದಿಮೂಲ ವಾರ್ತೆ ಕೊಪ್ಪಳ, ಜ.17:
ಕೊಪ್ಪಳ ತಾಲೂಕಿನ ಹಟ್ಟಿಿ ಗ್ರಾಾಮಸ್ಥರು ಈಗ ಸಾರಾಯಿ ಮಾರಾಟದಿಂದ ದೂರವಾಗಿದ್ದಾಾರೆ. ಕಳೆದ ನಾಲ್ಕು ತಿಂಗಳ ಹಿಂದೆ ಗ್ರಾಾಮದ 16 ವರ್ಷದ ಯುವಕ ಕುಡಿತದ ದಾಸನಾಗಿ ಆರೋಗ್ಯ ಕೆಡಿಸಿಕೊಂಡು ಸಾವನ್ನಪ್ಪಿಿದೆ. ಈ ಸಂದರ್ಭದಲ್ಲಿ ಗ್ರಾಾಮಸ್ಥರ ನೆಮ್ಮದಿ ಹಾಳಾಗಿತ್ತು. ಈ ಸಂದರ್ಭದಲ್ಲಿ ಗ್ರಾಾಮದಲ್ಲಿಯ ಸಾರಾಯಿ ಮಾರಾಟ ನಿಬರ್ಂಧಿಸಬೇಕೆಂದು ಮಾರುತೇಶ್ವರ ದೇವಸ್ಥಾಾನದ ಮುಂದೆ ಸಭೆ ಸೇರಿ ನಿರ್ಧಾರ ಮಾಡಿದ್ದಾಾರೆ. ಇದರಿಂದಾಗಿ ಗ್ರಾಾಮದಲ್ಲಿ ಈಗ ಸಾರಾಯಿ ಮಾರಾಟವಾಗುತ್ತಿಿಲ್ಲ.
ಸುಮಾರು 300 ಮನೆಗಳಿರುವ ಗ್ರಾಾಮದಲ್ಲಿ 9 ಕಡೆ ಅಂಗಡಿಗಳಲ್ಲಿ ಅಕ್ರಮವಾಗಿ ಸಾರಾಯಿ ಮಾರಾಟ ಮಾಡುತ್ತಿಿದ್ದರು. ಗ್ರಾಾಮದ ಹೊರವಲಯ ಕುಷ್ಟಗಿ- ಕೊಪ್ಪಳ ಮುಖ್ಯ ರಸ್ತೆೆಯಲ್ಲಿ ಮೂರು ಡಾಬಾಗಳಿದ್ದವು. ಈ ಡಾಬಾಗಳಲ್ಲಿಯೂ ಅಕ್ರಮವಾಗಿ ಮದ್ಯ ಮಾರಾಟವಾಗುತ್ತಿಿತ್ತು. ಬೇಕೆಂದಾಗ ತಕ್ಷಣ ಮದ್ಯ ಸಿಗುತ್ತಿಿರುವದರಿಂದ ಗ್ರಾಾಮದಲ್ಲಿ ಕುಡುಕರ ಸಂಖ್ಯೆೆ ಹೆಚ್ಚಾಾಗಿತ್ತು. ಯುವಕರು ದುಡಿಮೆ ಇಲ್ಲದೆ ಗ್ರಾಾಮದಲ್ಲಿ ಗಲಾಟೆ ಮಾಡುತ್ತಿಿದ್ದರು. ಈ ಸಮಯದಲ್ಲಿ ಗ್ರಾಾಮದ ಮಹಿಳೆಯರು ಮದ್ಯ ಮಾರಾಟ ನಿಲ್ಲಿಸಿ ಎಂದು ಗ್ರಾಾಮದ ಹಿರಿಯರಿಗೆ ಮನವಿ ಮಾಡಿಕೊಂಡ ಹಿನ್ನೆೆಲೆಯಲ್ಲಿ ಈಗ ಸಾರಾಯಿ ಮಾರಾಟ ನಿಂತಿದೆ. ಈಗ ಗ್ರಾಾಮದಲ್ಲಿ ನೆಮ್ಮದಿ ಇದೆ.
ಗ್ರಾಾಮದ ಅಂಗಡಿಗಳಲ್ಲಿ ಸಾರಾಯಿ ಮಾರಾಟ ಮಾಡಿ ಆದಾಯ ಮಾಡಿಕೊಳ್ಳುತ್ತಿಿದ್ದರು. ಆದರೆ ಈಗ ಗ್ರಾಾಮಕ್ಕೆೆ ಒಳ್ಳೆೆಯದಾಗುತ್ತೆೆ ಎಂದರೆ ನಾವು ಸಾರಾಯಿ ಮಾರಾಟ ಮಾಡುವುದಿಲ್ಲ ಎಂದು ನಿರ್ಧರಿಸಿದ್ದಾಾರೆ. ಈ ಮಧ್ಯೆೆ ಬಾಳಮ್ಮ ಎಂಬ ವೃದ್ದೆೆಯ ಗಂಡ ಕುಡಿದು ಕುಡಿದು ಆಸ್ತಿಿ ಹಾಳು ಮಾಡಿಕೊಂಡಿದ್ದ. ನನಗೆ ಮಕ್ಕಳಿಲ್ಲ ಆದರೆ ಊರಿಗೆ ಒಳ್ಳೆೆಯದಾಗುತ್ತದೆ ಎಂಬ ಕಾರಣಕ್ಕೆೆ ನಾವು ಮಾರಾಟ ಮಾಡುವುದಿಲ್ಲ ಎನ್ನುತ್ತಾಾರೆ ಬಾಳಮ್ಮ.
ಕುಡಿತ ದಾಸನಾಗಿ ಕೃಷಿ ಕೆಲಸದಿಂದಲೂ ದೂರವಾಗಿದ್ದ ಯಲ್ಲಪ್ಪ ಎಂಬುವವರು ಈಗ ಕುಡಿತ ಬಿಟ್ಟಿಿದ್ದರಿಂದ ಕೃಷಿ ಕಾಯಕದಲ್ಲಿ ತೊಡಗಿದ್ದಾಾರೆ. ಈಗ ಗ್ರಾಾಮದಲ್ಲಿ ನನಗೆ ಜನರು ಗೌರವದಿಂದ ಮಾತನಾಡಿಸುತ್ತಾಾರೆ ಎನ್ನುತ್ತಾಾನೆ.
ಗ್ರಾಾಮಸ್ಥರ ನಿರ್ಧಾರಕ್ಕೆೆ ಕೊಪ್ಪಳದ ಗವಿಮಠದ ಸ್ವಾಾಮೀಜಿಗಳು ಸಹ ಮೆಚ್ಚುಗೆ ವ್ಯಕ್ತಪಡಿಸಿದ್ದಾಾರೆ. ನೀವು ಗುಡಿ ಗುಂಡಾರ ಕಟ್ಟುವುದು ಬೇಡ. ಸಾರಾಯಿ ಮಾರಾಟ ನಿಲ್ಲಿಸಿದ್ದು ಒಳ್ಳೆೆಯ ಕೆಲಸ ಎನ್ನುತ್ತಾಾರೆ.
ಕುಡಿತದ ಚಟವಿದ್ದವರು ಈಗ ಸಂಖ್ಯೆೆ ಕಡಿಮೆಯಾಗಿದೆ. ಒಂದು ವೇಳೆ ಕುಡಿಯುವ ಚಟವಾದರೆ ಅವರು ಕೊಪ್ಪಳ ಅಥವಾ ಇರಕಲ್ ಗಡಕ್ಕೆೆ ಹೋಗಿ ಬರಬೇಕು. ಅಲ್ಲಿಗೆ ಹೋಗಿ ಬರುವ ಖರ್ಚು. ಕುಡಿದು ಗ್ರಾಾಮಕ್ಕೆೆ ಬರುತ್ತಲೆ ನಿಶೆ ಇಳಿಯುತ್ತಿಿದೆ. ಈ ಕಾರಣಕ್ಕಾಾಗಿ ಗ್ರಾಾಮದಲ್ಲಿ ಈಗ ಗಲಾಟೆಗಳು ಕಡಿಮೆಯಾಗಿವೆ. ಮನೆಯು ನೆಮ್ಮದಿಯಾಗಿದೆ.
ಮದ್ಯ ಮಾರಾಟ ಮುಕ್ತ ಗ್ರಾಮವಾದ ಹಟ್ಟಿ

