ಸುದ್ದಿಮೂಲವಾರ್ತೆ
ಕೊಪ್ಪಳ,ಸೆ.7:ಕೊಪ್ಪಳ ಜಿಲ್ಲೆಯ ಡಾ ಅಂಬೇಡ್ಕರ್ ಆಭಿವೃದ್ದಿ ನಿಗಮದ ವ್ಯವಸ್ಥಾಪಕರನ್ನು ವರ್ಗಾವಣೆ ಮಾಡಿ ಎಂದು ಕೊಪ್ಪಳ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ, ಶಾಸಕ ಕೆ ರಾಘವೇಂದ್ರ ಹಿಟ್ನಾಳ ಇಲಾಖೆಯ ಸಚಿವರಿಗೆ ಪತ್ರ ಬರೆದರು. ಈ ಪತ್ರದ ನಂತರವೂ ಅದೇ ಅಧಿಕಾರಿಗೆ ಮತ್ತೊಂದು ಇಲಾಖೆಯ ಜವಾಬ್ದಾರಿ ವಹಿಸಿದ್ದು. ಇಲ್ಲಿ ಇಲಾಖೆ ಅಧಿಕಾರಿಯ ಗಟ್ಟಿತನವೊ ಅಥವಾ ಇಲಾಖೆಯ ಸಚಿವರಿಗೂ ಜಿಲ್ಲಾ ಉಸ್ತುವಾರಿ ಸಚಿವರ ನಡುವೆ ಈ ವಿಷಯದಲ್ಲಿ ಗೊಂದಲ ಎದ್ದು ಕಾಣುತ್ತಿದೆ.
ರಾಜ್ಯ ಸರ್ಕಾರದಲ್ಲಿ ಈಗ ವರ್ಗಾವಣೆ ವಿಷಯ ತೀವ್ರ ಚರ್ಚೆಯಾಗುತ್ತಿದೆ. ಈ ಮಧ್ಯೆ ಸಚಿವರ ಮಧ್ಯೆ ವರ್ಗಾವಣೆ ಕಿಚ್ಚು ಎದ್ದಿರುವುದು ಕಂಡು ಬಂದಿದೆ. ರಾಜ್ಯದಲ್ಲಿ ಶಾಸಕರು, ಸಚಿವರು ವಿವಾದ ತಣ್ಣಗಾಗುತ್ತಲೇ.ಈಗ ಸಚಿವ ಸಚಿವರು ಫೈಟ್ ಇದೆಯೇ ಎಂಬ ಅನುಮಾನ ವ್ಯಕ್ತವಾಗುತ್ತಿದೆ. ಒರ್ವ ಅಧಿಕಾರಿಯ ವರ್ಗಾವಣೆ ಸವಾಲಾದಂತೆ ಕಂಡು ಬರುತ್ತಿದೆ.
ಕೊಪ್ಪಳದ ಡಾ ಅಂಬೇಡ್ಕರ್ ಅಭಿವೃದ್ದಿ ನಿಗಮದ ವ್ಯವಸ್ಥಾಪಕ ವೈ ಎ ಕಾಳೆ ವರ್ಗಾವಣೆ ಗೆ ಶಾಸಕ ರಾಘವೇಂದ್ರ ಹಿಟ್ನಾಳ ಹಾಗು ಸಚಿವ ಶಿವರಾಜ ತಂಗಡಗಿ ಸಮಾಜ ಕಲ್ಯಾಣ ಇಲಾಖೆ ಸಚಿವರಿಗೆ ಪತ್ರ ಬರೆದಿದ್ದಾರೆ.
ಈ ಪತ್ರದ ಮಧ್ಯೆಯೇ ವೈ ಎ ಕಾಳೆಗೆ ಇಲಾಖೆ ಹೆಚ್ಚುವರಿಯಾಗಿ ಸಮಾಜ ಕಲ್ಯಾಣ ಇಲಾಖೆಯ ಹುದ್ದೆ ನೀಡಿದ್ದು ತೀವ್ರ ಚರ್ಚೆಗೆ ಗ್ರಾಸವಾಗಿದೆ. ಇದ್ರಿಂದ ತಂಗಡಗಿ ಹಾಗು ಹಿಟ್ನಾಳ ತೀವ್ರ ಮುಜುಗರಕ್ಕೆ ಒಳಗಾಗಿದ್ದಾರೆ.
ಕೊಪ್ಪಳ ಜಿಲ್ಲಾ ಅಂಬೇಡ್ಕರ್ ನಿಗಮದ ವ್ಯವಸ್ಥಾಪಕ ವೈ.ಎ.ಕಾಳೆಯನ್ನ ವರ್ಗಾವಣೆ ಮಾಡಿ,ಪುಷ್ಪಲತಾ ಎನ್ನೋರಿಗೆ ಶಿಫಾರಸ್ಸು ಮಾಡಿದ್ದರು.ಆದ್ರೆ ಜಿಲ್ಲಾ ಉಸ್ತುವಾರಿ ಸಚಿವರ ಮಾತಿಗೂ ಸಮಾಜ ಕಲ್ಯಾಣ ಇಲಾಖೆ ಕ್ಯಾರೆ ಎಂದಿಲ್ಲ.ವೈ.ಎ.ಕಾಳೆ ವಿರುದ್ದ ಭ್ರಷ್ಟಾಚಾರದ ತನಿಖೆ ಹಿನ್ನಲೆ.
ವರ್ಗಾವಣೆ ಮಾಡುವಂತೆ ಪತ್ರಬರೆದಿದ್ದರು. ಲೋಕಾಯುಕ್ತದಲ್ಲಿ ತನಿಖೆ ಹಿನ್ನಲೆ.ಅಂತಹ ಭ್ರಷ್ಟ ಅಧಿಕಾರಿ ಸೇವೆ ನಮ್ಮ ಜಿಲ್ಲೆ ಬೇಡ ಎಂದಿದ್ದರು.
ಈ ಬಗ್ಗೆ ಪ್ರತಿಕ್ರಿಯಿಸಿದ ಸಚಿವ ಶಿವರಾಜ ತಂಗಡಗಿ ಇದೇನು ದೊಡ್ಡ ವಿಷಯವಲ್ಲ. ತಾಂತ್ರಿಕ ಸಮಸ್ಯೆಯಿಂದ ವರ್ಗಾವಣೆಯಾಗಿಲ್ಲ. ಇಷ್ಟರಲ್ಲಿಯೇ ವರ್ಗಾವಣೆಯಾಗುತ್ತದೆ ಎಂದು ತಿಳಿಸಿದ್ದಾರೆ.
ಕಳೆದ ಮಾರ್ಚ ತಿಂಗಳಲ್ಲಿ ವೈ ಎ ಕಾಳೆ ಹಾಗು ಪುಷ್ಪಲತಾ ಅಧಿಕಾರ ಹಸ್ತಾಂತರದ ವಿಷಯ ಸುದ್ದಿಯಾಗಿತ್ತು. ಈಗ ಸರಕಾರ ಬದಲಾದರೂ ವೈ ಎ ಕಾಳೆ ವರ್ಗಾವಣೆಯದು ಮತ್ತೆ ವಿವಾದವಾಗಿದೆ.