ಸುದ್ದಿಮೂಲ ವಾರ್ತೆ
ತಿಪಟೂರು, ಜೂ.25: ದೇಶಿಯ ಹಸುಗಳ ಪಾಲನೆ ಪೋಷಣೆಯಿಂದ ಮನುಷ್ಯನ ಆರೋಗ್ಯವು ವೃದ್ಧಿಸುತ್ತದೆ ಹಾಗೂ ಪ್ರಕೃತಿಯ ಸಮತೋಲನಕ್ಕೆ ಹಾಗೂ ಪ್ರಾಕೃತಿಕ ಬೆಳವಣಿಗೆಗೆ ದೇಶಿಯ ಹಸುಗಳು ಸಹಕಾರಿಯಾಗಿರುತ್ತವೆ ಎಂದು ಶ್ರೀ ಗುರುಕುಲಾನಂದಾಶ್ರಮದ ಶ್ರೀ ಇಮ್ಮಡಿ ಕರಿಬಸವದೇಶಿಕೇಂದ್ರ ಮಹಾಸ್ವಾಮಿಜಿಯವರು ತಿಳಿಸಿದರು.
ನಗರದ ಗುರುಕುಲ ಕಲ್ಯಾಣ ಮಂಟಪದಲ್ಲಿ ದೇಶಿಯ ಗೋ ಸೇವಾ ಗತಿ ವಿಧಿ ಕರ್ನಾಟಕ ದಕ್ಷಿಣ ಪ್ರಾಂತ, ದೇಶಿ ಗವ್ಯೋತ್ಪನ್ನ ಪರಿವಾರ ತಿಪಟೂರು ಇವರುಗಳ ಸಹಯೋಗದೊಂದಿಗೆ ಆಯೋಜನೆ ಮಾಡಿದ್ದ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ವಹಿಸಿ ಮಾತನಾಡಿದರು.
ಇತ್ತೀಚಿನ ಆರ್ಥಿಕ ಅಭಿವೃದ್ಧಿಗಾಗಿ ಮಾನವನು ಸೀಮೆ ಹಸುಗಳನ್ನು ಸಾಕುತ್ತಿದ್ದು ಇದರಿಂದ ಆರ್ಥಿಕವಾಗಿ ಸಬಲರಾಗುತ್ತಿದ್ದಾರೆ ಆದರೆ ಮನುಷ್ಯನ ಆರೋಗ್ಯವು ಕ್ಷೀಣಿಸುತ್ತಿದೆ ಮನುಷ್ಯನ ಆರೋಗ್ಯಕ್ಕೆ ಹಾಗೂ ಪ್ರಕೃತಿಯಲ್ಲಿ ಮರಗಿಡಗಳು ಬೆಳವಣಿಗೆಗೆ ದೇಶಿಯ ಹಸುವಿನ ಹಾಲು ಹಾಗೂ ಸಗಣಿ ಮತ್ತು ಬೆರಣಿಯಿಂದ
ತಯಾರಿಸಿದ ಉಪ ಉತ್ಪನ್ನಗಳಿಂದ ಸಮೃದ್ಧಿ ಕಾಣಲು ಸಹಕಾರಿಯಾಗುತ್ತದೆ ಎಂದರು.
ಕೊನೆಹಳ್ಳಿ ಆಯುಷ್ ಇಲಾಖೆಯ ಹಿರಿಯ ವೈದ್ಯಾಧಿಕಾರಿ ಡಾ. ಸುಮನಾ ಮಾತನಾಡಿ, ಇಂದು
ಮನುಷ್ಯನ ಆರೋಗ್ಯವು ಆಧುನಿಕತೆಗೆ ಒಳಕೊಂಡು ಸ್ವತಃ ತನ್ನಿಂದಲೇ ತನ್ನ ಆರೋಗ್ಯವನ್ನು ಹಾಳು ಮಾಡಿಕೊಳ್ಳುತ್ತಿದ್ದಾನೆ. ಆದ್ದರಿಂದ ಮನುಷ್ಯನ ಉತ್ತಮವಾದ ಆರೋಗ್ಯಕ್ಕೆ ದೇಶಿ ಹಸುವಿನ ಹಾಲು ಸಹಕಾರಿಯಾಗಿದೆ ಎಂದು ಹೇಳಿದರು.
ಚಿಕ್ಕನಾಯಕನಹಳ್ಳಿ ಗೋಶಾಲೆಯ ಶ್ರೀ ಗುರು ಮಾತನಾಡಿ, ದೇಶಿಯ ಹಸುವಿನ ಸಗಣಿಯಿಂದ ಹಾಗೂ ಮಲಮೂತ್ರಗಳಿಂದ ವಿವಿಧ ಉತ್ಪನ್ನಗಳನ್ನು ತಯಾರಿಸಲಾಗಿದ್ದು ಅದರಿಂದ ಪಂಚಗವ್ಯ ವಸ್ತುಗಳು ತಯಾರಿಸಲಾಗಿದೆ ಇದರ ಬಳಕೆಯಿಂದ ತಮ್ಮ ಜೀವನ ಶೈಲಿಯನ್ನು ಉತ್ತಮವಾಗಿಡಬಹುದೆಂದು ತಿಳಿಸಿದರು.
ಕ್ಯಾನ್ಸರ್ ತಜ್ಞ ಡಾ ಡಿ.ಪಿ ರಮೇಶ್ ಮಾತನಾಡಿ ಮನುಷ್ಯನಿಗೆ ಯಾವುದೇ ಕಾಯಿಲೆಗಳು ಬಂದರೂ ಹೆದರದೆ ಜಗ್ಗದೆ ಧೈರ್ಯವಾಗಿ ಅದನ್ನು ಎದುರಿಸುವ ಶಕ್ತಿಯನ್ನು ಪಡೆಯಬೇಕು, ಕ್ಲಿಷ್ಟಕರವಾದ ರೋಗಗಳಿಗೆ ದೇಶಿಯ ಗೋವಿನ ಪಂಚಗವ್ಯ ಸಹ ಒಂದಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಸ್ವರ್ಣ ಗೌರಮ್ಮ, ಸಂಸ್ಕಾರ ಭಾರತೀಯ ಶ್ರೀಧರ್ ಲಕ್ಕುವಳ್ಳಿ, ಆರ್ಥಿಕ ಸಮಾಲೋಚಕಿ ಶ್ರೀಮತಿ ರೇಖಾ ಮಂಜುನಾಥ್, ಭಾರತೀಯ ಕಿಸಾನ್ ಸಂಘದ ಗೌರವಾಧ್ಯಕ್ಷ ಶಂಕರಮೂರ್ತಿ ರಂಗಾಪುರ, ನಾಗರಿಕ ಹಿತರಕ್ಷಣಾ ವೇದಿಕೆ ರೇಣುಕಾರಾಧ್ಯ, ಯೋಗನಂದ ತಡಸೂರು, ರಾಜಶೇಖರ್, ಬಿಳೆಗೆರೆ ಪ್ರತಾಪ್, ವಿಧ್ಯಾರ್ಥಿ ಭಂಡಾರ ಲತಾಸುಂದರ್, ಕರ್ಯಕ್ರಮದಲ್ಲಿ ನವೀನ್ ನಿರೂಪಿಸಿ, ರೇಖಾ ವಂದಿಸಿದರು. ಕದಳಿ
ಬಳಗ, ಆರೋಗ್ಯ ಭಾರತಿ , ಸೇರಿದಂತೆ ವಿವಿಧ ಸಂಘಟನೆಯ ಪದಾಧಿಕಾರಿಗಳು ಹಾಜರಿದ್ದರು.
ಕಾರ್ಯಕ್ರಮದಲ್ಲಿ ನಾಟಿ ಹಸುವಿಗೆ ಪಾದಪೂಜೆ ಮಾಡುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಲಾಯಿತು, ಕಾರ್ಯಕ್ರಮದಲ್ಲಿ ಅಗ್ನಿಹೋತ್ರ ದೇಶಿವಿನಿಂದ ತಯಾರಿಸಿದ ಉತ್ಪನ್ನಗಳನ್ನು ಪ್ರದರ್ಶನ ಮತ್ತು ಮಾರಾಟಕ್ಕೆ ಅವಕಾಶ ಕಲ್ಪಿಸಿದ್ದು, ಎಲ್ಲರಿಗೂ ಉಚಿತ ಆರೋಗ್ಯತಪಾಸಣೆ ಮಾಡಿಸಲಾಯಿತು.