ಸುದ್ದಿಮೂಲ ವಾರ್ತೆ
ನೆಲಮಂಗಲ,ಅ.7: ಪ್ರತಿಯೋಬ್ಬರು ರಕ್ತ ದಾನ ಮಾಡುವುದರಿಂದ ಆರೋಗ್ಯವಾಗಿರಬಹುದು ಎಂದು ವಿದ್ಯಾಸ್ಫೂರ್ತಿ ಇಂಟರ್ ನ್ಯಾಷನಲ್ಅಕಾಡೆಮಿ ಅಧ್ಯಕ್ಷ ಟಿ. ಉಮಾಶಂಕರ್ ತಿಳಿಸಿದರು.
ನೆಲಮಂಗಲ ತಾಲೂಕಿನ ಸೋಂಪುರ ಹೋಬಳಿಯ ಚಂದನಹೋಸಹಳ್ಳಿಯಲ್ಲಿರುವ ಶಿವಗಂಗೆ ರಸ್ತೆಯ ವಿದ್ಯಾಸ್ಪೂರ್ತಿ ಇಂಟರ್ ನ್ಯಾಷನಲ್ ಅಕಾಡೆಮಿ, ಎಂ.ಎಸ್.ರಾಮಯ್ಯ ಆಸ್ಫತ್ರೆ ರೋಟರಿ ಸಂಸ್ಥೆ ನೆಲಮಂಗಲ, ಸೋಂಪುರ, ನೆಲಮಂಗಲ ತಾಲೂಕು ಔಷಧಿ ವ್ಯಾಪಾರಿಗಳ ಸಂಘ, ನೆಲಮಂಗಲ ಇನ್ನರ್ ವೀಲ್ ಕ್ಲಬ್ ಜಂಟಿಯಾಗಿ ಬೃಹತ್ ಆರೋಗ್ಯ ತಪಾಸಣಾ ಶಿಬಿರ ಆಯೋಜಿಸಿತ್ತು.
ಆರೋಗ್ಯ ಹಾಗೂ ರಕ್ತದಾನ ಶಿಬಿರವನ್ನು ವಿದ್ಯಾಸ್ಪೂರ್ತಿ ಸಮೂಹ ಸಂಸ್ಥೆಗಳ ಸಂಸ್ಥಾಪಕ ಉಪ ಮೇಯರ್ ದಿ.ರಮೀಳ ಉದ್ಟಾಟಿಸಿದರು.
ಬಳಿಕ ಮಾತನಾಡಿದ ಅವರು, ನಾವುಗಳು ರಕ್ತದಾನ ಮಾಡಿದರೆ ನಮಗೆ ಸುಮಾರು ಇಪ್ಪತ್ನಾಲ್ಕು ಗಂಟೆಯಲ್ಲಿ ಮರು ರಕ್ತ ಬರುತ್ತದೆ. ರಕ್ತವನ್ನು ಕೊಡುವುದರಿಂದ ಓಬ್ಬರ ಜೀವನ ಉಳಿಸಬಹುದು. ಪ್ರತಿ ನಾಲ್ಕು ತಿಂಗಳಿಗೊಮ್ಮೆ ರಕ್ತವನ್ನುದಾನ ಮಾಡಬಹುದು ಎಂದರು.
ಅನೇಕ ರೋಗಗಳಿಂದ ಬಳಲುವ ಸಾಮಾನ್ಯ ಮತ್ತು ಬಡವರಿಗೆ ನೆರವಾಗಲಿ ಎಂಬ ಉದ್ದೇಶದಿಂದ ಹಲವು ರೋಗಗಳಿಗೆ ಉಚಿತ ತಪಾಸಣೆಯನ್ನು ವಿವಿಧ ಆಸ್ಪತ್ರೆಗಳ ಸಹಯೋಗದಲ್ಲಿ ಆಯೋಜಿಸಲಾಗಿದೆ ಎಂದರು.
ರೋಟರಿ ಸಂಸ್ಥೆ ಸೋಂಪುರ ಅಧ್ಯಕ್ಷ ರೋ. ಟಿ. ಚನ್ನತಿಮ್ಮಯ್ಯ ಮಾತನಾಡಿ, ಕುಟುಂಬದಷ್ಟೇ ಆರೋಗ್ಯವೂ ಮುಖ್ಯ. ಸ್ವಚ್ಚತೆಗೆ ಹೆಚ್ಚಿನ ಆದ್ಯತೆ ನೀಡಿ ಎಂದರು.
ಸೋಂಪುರ ರೋಟರಿ ಕಮ್ಯುನಿಟಿ ಸರ್ವಿಸಸ್ ಡೈರಕ್ಟರ್ ಪಿ.ಜಿ.ದೇವರಾಜು, ಈಗ ಪ್ರತಿಯೊಬ್ಬರಿಗೂ ಬಿಪಿ, ಶುಗರ್, ಹೃದ್ರೋಗ ಹಾಗೂ ಕಿಡ್ನಿ ಕಾಯಿಲೆಗಳು ಸಾಮಾನ್ಯವಾಗಿವೆ. ಹೀಗಾಗಿ, ಉತ್ತಮ ಜೀವನಶೈಲಿಯನ್ನು ರೂಢಿಸಿಕೊಳ್ಳುವಂತೆ ಸಲಹೆ ನೀಡಿದರು.
ರಕ್ತದಾನ ಶಿಬಿರದಲ್ಲಿ 67 ಯೂನಿಟ್, ಉಚಿತ ಆರೋಗ್ಯ ತಪಾಸಣೆ ನಡೆಯಿತು.
ಶಿಬಿರದಲ್ಲಿ ಸಾಮಾನ್ಯ ಪರೀಕ್ಷೆ689, ಕಣ್ಣಿನ ಪರೀಕ್ಷೆ 289, ದಂತಚಿಕಿತ್ಸೆ 183 ಹಾಗು ಸ್ಥನ ಕ್ಯಾನ್ಸರ್ 61 ಜನರು ತಪಾಸಣೆಗೊಳಗಾದರು.
ಈ ಸಂದರ್ಭದಲ್ಲಿ ಶಾಲೆಯ ಸಿಇಒ ವರುಣ್ ಕುಮಾರ್, ಆಡಳಿತಾಧಿಕಾರಿ ಟಿ.ರಾಮಚಂದ್ರಯ್ಯ, ವ್ಯವಸ್ಥಾಪಕ ಎಚ್.ಡಿ. ಸೋಮಶೇಖರ್, ಪ್ರಾಂಶುಪಾಲ ಎಸ್.ರವಿನಂದನ್, ಡಿ.ಟಿ. ದಿಲೀಪ್ಕುಮಾರ್, ರೋಟರಿ ಸಂಸ್ಥೆ ನೆಲಮಂಗಲ ಅಧ್ಯಕ್ಷ ರೋ.ಎಂಟಿ.ನವೀನ್ ಕುಮಾರ,
ಕಾರ್ಯದರ್ಶಿ ಸಿಎ ಶಿವರಾಮಯ್ಯ, ಕಮ್ಯುನಿಟಿ ಸರ್ವಿಸಸ್ ಡಿ.ಎಂ.ಮಂಜುನಾಥ, ಹೆಲ್ತ್ ಚೇರಮನ್ ಸೋಮಶೇಖರ, ಸೋಂಪುರ ರೋಟರಿ ಕಾರ್ಯದರ್ಶಿ ಬಿ.ಜಿ.ಹರೀಶ, ಇನ್ನರ್ ವೀಲ್ ಅಧ್ಯಕ್ಷ ರೋ.ತನಿಜಾ, ಕಾರ್ಯದರ್ಶಿ ರೋ.ರೇಖಾ, ನೆಲಮಂಗಲ ತಾಲೂಕು ಔಷಧಿ ವ್ಯಾಪಾರಿಗಳ ಸಂಘದ ಅಧ್ಯಕ್ಷ ವಾದಿರಾಜ್, ಎಂ.ಎಸ್.ರಾಮಯ್ಯ ಆಸ್ಫತ್ರೆಯ ಡಾ.ಲಕ್ಷೀನಾರಯಣ್, ವಕೀಲ ಗುಂಡೇನ ಹಳ್ಳಿ ಯುವರಾಜ ಇದ್ದರು.