ಸುದ್ದಿಮೂಲ ವಾರ್ತೆ
ಕೆಜಿಎಫ್, ಏ.26: ಕೆಜಿಎಫ್ ವಿಧಾನಸಭಾ ಕ್ಷೇತ್ರದಲ್ಲಿ ಕಳೆದ ಐದು ವರ್ಷಗಳಿಂದ ಯಾವುದೇ ಅಭಿವೃದ್ದಿ ಕಾರ್ಯಕಗಳು ನಡೆದಿಲ್ಲ. ಆದ್ದರಿಂದ ಕೇತ್ರ ಅಭಿವೃದ್ದಿಯಾಗಬೇಕಾದರೆ ಬಿಜೆಪಿ ಪಕ್ಷದವರು ಕೆಜಿಎಫ್ನಲ್ಲಿ ಶಾಸಕರಾಗಬೇಕು ಎಂದು ಬಿಜೆಪಿ ಗ್ರಾಮಾಂತರ ಪ್ರಧಾನ ಕಾರ್ಯದರ್ಶಿ ಹೇಮಾರೆಡ್ಡಿ ಹೇಳಿದರು.
ಕೆಜಿಎಫ್ ಕ್ಷೇತ್ರದ ರಾಮಸಾಗರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕದರೀಪರು, ಪಾಪೇನಹಳ್ಳಿ, ರಾಮಸಾಗರ, ಬೂಡದಿಮಿಟ್ಟ ಗ್ರಾಮ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಬಿಜೆಪಿ ಪಕ್ಷದ ಅಭ್ಯರ್ಥಿ ಅಶ್ವಿನಿ ಸಂಪಂಗಿ ಪರವಾಗಿ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಮತಯಾಚನೆ ಮಾಡಿದರು.
ಕಾಂಗ್ರೆಸ್ ಪಕ್ಷದವರು ಅಧಿಕಾರಿದಲ್ಲಿ ಇದ್ದರೂ ಸಹ ಯಾವುದೇ ಅಭಿವೃದ್ದಿ ಕಾರ್ಯಗಳನ್ನು ಮಾಡದೆ ಸಾರ್ವಜನಿಕರಿಗೆ ದಿಕ್ಕು ತಪ್ಪಿಸುವ ಕೆಲಸವನ್ನು ಮಾಡುತ್ತಿದ್ದಾರೆ. ಆದ್ದರಿಂದ ಮತದಾರರು ಕಾಂಗ್ರೆಸ್ ಭರವಸೆಯನ್ನು ಹಾಗೂ ಗ್ಯಾರೆಂಟಿ ಕಾರ್ಡ್, ಅಮಿಷಗಳಿಗೆ ಬಗ್ಗುವುದಿಲ್ಲ ಎಂದು ಹೇಳಿದರು.
2008 ರಿಂದ 2018 ವರಗೆ ಕೆಜಿಎಫ್ ಕ್ಷೇತ್ರದಲ್ಲಿ ಬಿಜೆಪಿ ಪಕ್ಷದ ಶಾಸಕರು ಅಭಿವೃದ್ದಿ ಮಾಡಿರುವ ಕೆಲಸಗಳು ಶಶ್ವಾತವಾಗಿ ಉಳಿದುಕೊಂಡಿದೆ. ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇರುವ ಕಾರಣ ರಾಜ್ಯ ಮಂತ್ರಿಗಳು ಸಹ ಆನೇಕ ಅನುದಾನವನ್ನು ನೀಡಿದ್ದು ಕ್ಷೇತ್ರದಲ್ಲಿ ರಾಜ್ಯ ಸರ್ಕಾರ ಅನುದಾನದಲ್ಲಿ ಅಭಿವೃದ್ದಿ ಕಾರ್ಯಕಗಳು ನಡೆದಿದೆ ಹೊರೆತು ಕಾಂಗ್ರೆಸ್ ಸರ್ಕಾರದ ಅಭಿವೃದ್ದಿ ಅಲ್ಲ ಎಂದು ಹೇಳಿದರು.
ಬಿಜೆಪಿ ಗ್ರಾಮಾಂತರ ಮಾಜಿ ಕಾರ್ಯದರ್ಶಿ ಅಶ್ವಥ್ ನಾಯ್ಡು ಮಾತನಾಡಿ ಕೇಂದ್ರದಲ್ಲಿ ಹಾಗೂ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರದಲ್ಲಿ ಇರುತ್ತದೆ ಆದ್ದರಿಂದ ಕೆಜಿಎಫ್ ಕೇತ್ರದಲ್ಲಿ ಬಿಜೆಪಿ ಪಕ್ಷದವರು ಅಧಿಕಾರಕ್ಕೆ ಬಂದರೆ ಕ್ಷೇತ್ರದಲ್ಲಿ ಅಭಿವೃದ್ದಿ ಮಾಡಲು ಸಹಕಾರವಾಗುತ್ತದೆ ಆದ್ದರಿಂದ ಪ್ರತಿಯೊಬ್ಬರೂ ಮುಂದಿನ ದಿನಗಳಲ್ಲಿ ಬಿಜೆಪಿ ಅಭ್ಯರ್ಥಿ ಅಶ್ವಿನಿ ಸಂಪಂಗಿ ಅವರಿಗೆ ಮತವನ್ನು ನೀಡಿ ಜಯಗಳಿಸಬೇಕು ಎಂದು ಹೇಳಿದರು.
ಕೆಜಿಎಫ್ ತಾಲ್ಲೂಕಿನಲ್ಲಿ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದ ಗೌಡ ಅವರು ಹೆಚ್ಚು ರಾಜಕೀಯ ಮಾಡುತ್ತಿದ್ದಾರೆ. ಅವರ ಆಟ ಈ ಕ್ಷೇತ್ರದಲ್ಲಿ ನಡೆಯುವುದಿಲ್ಲ. ಕಾಂಗ್ರೆಸ್ ಪಕ್ಷದ ಮುಖಂಡರು ಮನನೊಂದು ಕಾಂಗ್ರೆಸ್ ವಿರೋಧವಾಗಿ ಕೆಲಸ ಮಾಡುತ್ತಿದ್ದಾರೆ ಆದ್ದರಿಂದ ಕೆಜಿಎಫ್ ಕೇತ್ರದಲ್ಲಿ ಅಶ್ವಿನಿ ಸಂಪಂಗಿ ಅವರಿಗೆ ಹೆಚ್ಚು ಮತಗಳ ಅಂತರದಿಂದ ಗೆಲುವು ಸಾಧಿಸಲಿದ್ದಾರೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಸದಸ್ಯರಾದ ಶ್ವೇತ ಅಶ್ವಥ್ ನಾಯ್ಡು, ಪಾಪೇನಹಳ್ಳಿ ಸರೋಜಮ್ಮ, ಸರ್ವರೆಡ್ಡಿಹಳ್ಳಿ ಸುಬ್ರಮಣಿ, ಜರ್ನದನ್, ಶಶಿಕಲಾ ಚಿನ್ನಪಯ್ಯ, ಕೃಷ್ಣರೆಡ್ಡಿ, ಮುಖಂಡರಾದ ಶ್ರೀನಿವಾಸ್, ಶಿವಪ್ಪ, ಲಕ್ಷ್ಮಪ್ಪ, ಶ್ರೀರಾಮಪ್ಪ, ಸುಬ್ರಮಣಿ, ಲಕ್ಷ್ಮೀನಾರಾಯಣ, , ಆನಂದರೆಡ್ಡಿ, ಮಂಜುನಾಥ್ ಸೇರಿದಂತೆ ಆನೇಕರು ಇದ್ದರು.