ಸುದ್ದಿಮೂಲ ವಾರ್ತೆ
ಹೊಸಕೋಟೆ, ಜು 31 : ತಾಲೂಕಿನ ಬೈಲನರಸಾಪುರ ಗ್ರಾಪಂ. ವ್ಯಾಪ್ತಿಯ ಹೆಡಕನಹಳ್ಳಿ ಎಂಪಿಸಿಎಸ್ನ ನೂತನ ಅಧ್ಯಕ್ಷರಾಗಿ ಹೆಚ್.ಜಿ. ರಾಜೇಶ್ ಹಾಗೂ ಉಪಾಧ್ಯಕ್ಷರಾಗಿ ಮಂಜುನಾಥ್ ಹೆಚ್.ಸಿ. ಅವಿರೋಧವಾಗಿ ಅಯ್ಕೆಯಾಗಿದ್ದಾರೆ.
ಅಧ್ಯಕ್ಷ, ಉಪಾಧ್ಯಕ್ಷರ ಸ್ಥಾನಗಳಿಗೆ ಚುನಾವಣೆ ನಡೆಸಲು ದಿನಾಂಕ ನಿಗದಿಯಾಗಿತ್ತು, ಪರಸ್ಪರ ಎಲ್ಲ 11 ನಿರ್ದೇಶಕರುಗಳು ಚರ್ಚಿಸಿ ಒಮ್ಮತದೊಂದಿಗೆ ಅಧ್ಯಕ್ಷ- ಉಪಾಧ್ಯಕ್ಷ ಸ್ಥಾನಕ್ಕೆ ತಲಾ ಒಂದೊಂದು
ನಾಮಪತ್ರ ಸಲ್ಲಿಕೆಯಾದ್ದರಿಂದ ಅವಿರೋಧವಾಗಿ ಆಯ್ಕೆ ಮಾಡಲಾಗಿದೆ ಎಂದು ಚುನಾವಣಾಧಿಕಾರಿ ನಾಗರಾಜ್ ತಿಳಿಸಿದ್ದಾರೆ.
ನೂತನವಾಗಿ ಅಯ್ಕೆಯಾದ ಅಧ್ಯಕ್ಷ, ಉಪಾಧ್ಯಕ್ಷರನ್ನು ಅಭಿನಂದಿಸಿ ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ರಾಜಶೇಖರಗೌಡ ಮಾತನಾಡಿ, ಪಕ್ಷ ಭೇದ ಮರೆತು ಸಂಘವನ್ನು ಆರ್ಥಿಕವಾಗಿ ಸದೃಢಗೊಳಿಸಿ, ಹೈನುಗಾರಿಕೆಗೆ ಹೆಚ್ಚಿನ ಪ್ರೋತ್ಸಾಹ ನೀಡಿ ಸಂಘವನ್ನು ಪ್ರಗತಿಯ ಪಥದಲ್ಲಿ ಮುನ್ನೆಡಸಬೇಕು ಎಂದರು.
ನೂತನ ಅಧ್ಯಕ್ಷ ಹೆಚ್.ಜಿ. ರಾಜೇಶ್ ಮಾತನಾಡಿ, ಎಲ್ಲ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸಂಘವನ್ನು ಪ್ರಗತಿಯತ್ತ ಕೊಂಡಯ್ಯುತ್ತೇನೆ. ಬಮೂಲ್ಗೆ ಪೌಷ್ಟಿಕಾಂಶಭರಿತ ಹಾಲು ಪೂರೈಸುವಲ್ಲಿ ಹೆಚ್ಚಿನ ಕಾಳಜಿ ವಹಿಸುತ್ತೇನೆ. ಹೈನುಗಾರರ ಹಿತ ಕಾಪಾಡಲು, ಸರಕಾರದ ಸವಲತ್ತುಗಳನ್ನು ಸಮರ್ಪಕವಾಗಿ ಬಳಸಿಕೊಳ್ಳುತ್ತೇನೆ ಎಂದು ಹೇಳಿದರು.
ನೂತನ ಅಧ್ಯಕ್ಷ, ಉಪಾಧ್ಯಕ್ಷರನ್ನು ತಾಲೂಕು ಶಾಸಕ ಶರತ್ ಬಚ್ಚೇಗೌಡ, ನೆಲವಾಗಿಲು ಎಸ್ಎಫ್ಸಿಎಸ್ ಅಧ್ಯಕ್ಷ ಎಸ್. ಮಂಜುನಾಥ್, ಎಪಿಎಂಸಿ ಮಾಜಿ ಅಧ್ಯಕ್ಷ ಹೆಚ್.ಎನ್. ಧರ್ಮೇಶ್ಶುಭ ಕೋರಿದರು.
ಕಾರ್ಯಕ್ರಮದಲ್ಲಿ ನೆಲವಾಗಿಲು ಎಸ್ಎಫ್ಸಿಎಸ್ ಅಧ್ಯಕ್ಷ ಎಸ್. ಮಂಜುನಾಥ್, ಟಿಎಪಿಸಿಎಂಎಸ್ ನಿರ್ದೇಶಕ ರವೀಂದ್ರ, ಮಾಜಿ ಅಧ್ಯಕ್ಷರಾದ ಶ್ರೀನಿವಾಸ್, ಎಂ. ರಾಜಣ್ಣ, ನಿರ್ದೇಶಕ ರವಿಶಂಕರ್,
ಗ್ರಾಪಂ. ಸದಸ್ಯರಾದ ಎನ್.ಡಿ. ಬೈರೇಗೌಡ, ನಿರ್ದೇಶಕರಾದ ಹೆಚ್.ಎನ್. ಬೈರೇಗೌಡ, ಶ್ರೀನಿವಾಸ್, ಹೆಚ್.ಸಿ. ಬೈರೇಗೌಡ, ಮುನಿರಾಜು, ಸಂಗೀತಾ, ವೆಂಕಟಲಕ್ಷ್ಮಮ್ಮ, ಸುಜಾತ, ಶಾಮಲಮ್ಮ, ಹೆಚ್.ಎ. ಪ್ರಕಾಶ್, ಮುಖಂಡರಾದ ವೆಂಕಟಸ್ವಾಮಪ್ಪ, ಚಿನ್ನಯ್ಯಪ್ಪ, ವೆಲ್ಡಿಂಗ್ ರವಿ, ಸುಜಯ್ಕುಮಾರ್, ನಾಗರಾಜ್, ಮಂಜು ಬಡಗಿ, ಮುಖ್ಯ ಕಾರ್ಯನಿರ್ವಾಹಕ ಹೆಚ್. ದಿವಾಕರ್ ಹಾಜರಿದ್ದರು.