ಬೂದಯ್ಯಸ್ವಾಮಿ ಇಂಗಳದಾಳ ಗಬ್ಬೂರು, ಡಿ.06:
ಸಮೀಪದ ಹೇಮನಾಳ ಗ್ರಾಾಮದ ಸರ್ಕಾರಿ ಹಿರಿಯ ಪ್ರಾಾಥಮಿಕ ಶಾಲೆ ಸೌಲಭ್ಯವಿಲ್ಲದೆ ಅನಾಥವಾಗಿದ್ದು, ವಿದ್ಯಾಾರ್ಥಿಗಳು ಹಾಗೂ ಶಿಕ್ಷಕರು ಜೀವಭಯದಲ್ಲಿ ಅಕ್ಷರಾಭ್ಯಾಾಸ ಮಾಡುತ್ತಿಿದ್ದಾಾರೆ.
ಹಲವು ವರ್ಷಗಳ ಹಿಂದೆ ಶಾಲಾ ಕಟ್ಟಡ ನಿರ್ಮಾಣ ಮಾಡಲಾಗಿದ್ದು ಬಹುತೇಕ ಕಟ್ಟಡ ಶಿಥಿಲಗೊಂಡಿದೆ. ಗೋಡೆ ಎಲ್ಲೆೆಂದರಲ್ಲಿ ಬಿರುಕು ಬಿಟ್ಟು, ಸಿಮೆಂಟ್ ಚೆತ್ ಉದುರಿವೆ. ಈಗೋ ಆಗೋ ಬೀಳುವ ಸ್ಥಿಿತಿಯಿದ್ದು, ಇದರಿಂದ ಮಕ್ಕಳನ್ನು ಹೊರಗಡೆ ಕೂಡಿಸಿ ಪಾಠಬೋಧನೆ ಮಾಡುತ್ತಿಿದ್ದಾಾರೆ. ಶಾಲೆಯಲ್ಲಿ ಒಂದರಿಂದ 8ನೇತರಗತಿವೆಗೆ ಕ್ಲಾಾಸ್ ನಡೆಯುತ್ತಿಿದ್ದು ಸುಮಾರು 164ಕ್ಕೂ ಹೆಚ್ಚು ವಿದ್ಯಾಾರ್ಥಿಗಳಿದ್ದಾಾರೆ.
ಒಬ್ಬರುಮುಖ್ಯಶಿಕ್ಷಕರು, ಇಬ್ಬರು ಕಾಯಂ ಶಿಕ್ಷಕರು ಹಾಗೂ ಇಬ್ಬರು ಅತಿಥಿ ಶಿಕ್ಷಕರಿದ್ದಾಾರೆ. ಕಟ್ಟಡದಲ್ಲಿ 9ಕೋಣೆಗಳಿದ್ದು ಬಹುತೇಕ ಹಾಳಾಗಿವೆ. ಏಳು ಕೋಣೆಗಳು ಹಾಳಾಗಿದ್ದರೆ ಒಂದು ಕೋಣೆ ಅಡುಗೆ ಕೋಣೆಗೆ, ಇನ್ನೊೊಂದು ದಾಸ್ತಾಾನಿಗೆ ಬಳಕೆ ಮಾಡಲಾಗುತ್ತಿಿದೆ. ಬಹುತೇಕ 7ಕೋಣೆ ಸಂಪೂರ್ಣ ಹಾಳಾಗಿವೆ. ಅಲ್ಪಸ್ವಲ್ಪ ಚೆನ್ನಾಾಗಿರುವ ಎರಡು ಕೋಣೆಯಲ್ಲಿ 8ತರಗತಿಗಳನ್ನು ಕೂಡಿಸಿ ಶಿಕ್ಷಕರು ಪಾಠ ಮಾಡುತ್ತಾಾರೆ.
1ರಿಂದ 5ನೇ ತರಗತಿವರೆಗೆ ಮಕ್ಕಳನ್ನು ಶಾಲಾ ಆವರಣದಲ್ಲಿ ತಾಡಪಲ್ ಹಾಕಿ ಅದರ ಮೇಲೆ ಕೂಡಿಸಿ ಶಿಕ್ಷಕರು ಪಾಠ ಮಾಡುತ್ತಾಾರೆ. ಇನ್ನು 6ರಿಂದ 8ನೇ ತರಗತಿ ಮಕ್ಕಳನ್ನು ಎರಡು ಕೋಣೆಯಲ್ಲಿ ಕೂಡಿಸಿ ಪಾಠ ಬೋಧನೆ ಮಾಡಲಾಗುತ್ತಿಿದೆ. ಮೊದಲು 1ರಿಂದ 4ನೇ ತರಗತಿ ಮಕ್ಕಳಿಗೆ ಬೆಳಿಗ್ಗೆೆ 8.30ರಿಂದ ಮಧ್ಯಾಾಹ್ನ 12.30ರವರೆಗೆ ಪಾಠ ಮಾಡಲಾಗುತ್ತಿಿತ್ತು. ನಂತರ 1.30ರಿಂದ 4.30ವರೆಗೆ 5, 6, 7 ಹಾಗೂ 8ನೇ ತರಗತಿ ಮಕ್ಕಳಿಗೆ ಬೋಧನೆ ಮಾಡಲಾಗುತ್ತಿಿದೆ.
ಹೊಸ ಶಾಲಾ ಕಟ್ಟಡ ನಿರ್ಮಾಣ ಮಾಡುವಂತೆ ಗ್ರಾಾಮಸ್ಥರು ಹಲವು ಸಲ ಸಂಬಂಧಿಸಿದ ಅಧಿಕಾರಿಗಳಿಗೆ ಮನವಿ ಮಾಡಿದರೂ ಸ್ಪಂದಿಸುತ್ತಿಿಲ್ಲ. ಕೂಡಲೇ ನೂತನ ಕಟ್ಟಡ ನಿರ್ಮಾಣ ಮಾಡಬೇಕು. ನಿರ್ಲಕ್ಷ್ಯ ಮಾಡಿದರೆ ಶಾಲೆ ಬಂದ್ ಮಾಡಿ ಹೋರಾಟ ಮಾಡಲಾಗುವುದು ಎಂದು ಗ್ರಾಾಮಸ್ಥರು ಹಾಗೂ ಪಾಲಕರಾದ ಸಿದ್ದಪ್ಪ ಸಾಹುಕಾರ, ಮೂರ್ತಿ ನಾಯಕ, ಎಸ್.ಸಿದ್ದಪ್ಪ ಸಾಹುಕಾರ, ತಮ್ಮಣ್ಣ, ರಂಗಪ್ಪ, ಬಲವಂತ, ರಂಗಪ್ಪ ನಾಯಕ, ರಾಮಯ್ಯ, ಶಿವಪುತ್ರ, ಚನ್ನಬಸವ, ನರಸಿಂಹ, ಭಗಯ್ಯ, ಮಲ್ಲಯ್ಯ, ಖಂಡೆಪ್ಪ, ಯಲ್ಲಗೌಡ, ತಮ್ಮಯ್ಯ, ಸಾಬಯ್ಯ, ಬಾಬು, ಹನುಮಂತ, ಜಿಂದಾವಲಿ, ಗೌಸುದ್ದಿನ್, ಆಂಜಿನೇಯ ಹಾಗೂ ವಿವಿಧ ಸಂಘಟನೆಗಳು ಹಾಗೂ ಪ್ರಗತಿಪರ ಮುಖಂಡರು ಎಚ್ಚರಿಸಿದ್ದಾಾರೆ.
ಹೇಮನಾಳ ಸರ್ಕಾರಿ ಶಾಲೆ ಅನಾಥ! ಕಟ್ಟಡ ಬಹುತೇಕ ಶಿಥಿಲ, ವಿದ್ಯಾರ್ಥಿಗಳು ಶಿಕ್ಷಕರಿಗೆ ಜೀವಭಯ, 2.84ಕೋಟಿ ಅನುದಾನ ಬೇರೆ ಕಡೆ ವರ್ಗಾವಣೆ

