ಬೆಂಗಳೂರು,ಮೇ, 18; ಮೇಕ್ ಇನ್ ಇಂಡಿಯಾ ಪರಿಕಲ್ಪನೆಯಡಿ ಅತ್ಯಾಧುನಿಕ ತಂತ್ರಜ್ಞಾನದ ಎಲ್ಲಾ ಫ್ಯೂಚರ್ ಗಳನ್ನು ಒಳಗೊಂಡಿರುವ ಸಾಮಾನ್ಯ ಸೂಪರ್ ಬೈಕ್ ಗಳಿಗಿಂತಲೂ ವಿಭಿನ್ನವಾದ ಬಹು ನಿರೀಕ್ಷಿತ ವೂಲ್ಪ್ ಹೌಂಡ್ ಮೋಟಾರ್ಸ್ ಸಂಸ್ಥೆಯ ಹೊಸ ತಲೆಮಾರಿನ ಇ18ಆರ್ ಎಲೆಕ್ಟ್ರಿಕ್ ಬೈಕ್ ಮಾರುಕಟ್ಟೆ ಪ್ರವೇಶಿಸಿದೆ.
ಸಾಮಾನ್ಯ ಸೂಪರ್ ಬೈಕ್ಗಳಿಂತಲೂ ವಿಭಿನ್ನ, ಆಧುನಿಕ ತಂತ್ರಜ್ಞಾನದ ಇ18ಆರ್ ಎಲೆಕ್ಟ್ರಿಕ್ ಬೈಕ್ ಮಾರುಕಟ್ಟೆಗೆ: ದೀರ್ಘಕಾಲ ಬಾಳಿಕೆ ಬರುವ ಬ್ಯಾಟರಿ, ಸುರಕ್ಷತೆ, ಸುವ್ಯವಸ್ಥೆ, ಸುಗಮ ಚಾಲನೆ ಇದರ ವೈಶಿಷ್ಟ್ಯ
ಟೌ ಲೋಟಸ್ ಮೋಟಾರ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ವೂಲ್ಪ್ ಹೌಂಡ್ ಮೋಟಾರ್ಸ್ ಸಂಸ್ಥೆಯ ಹೊಸ ತಲೆಮಾರಿನ ಇ18ಆರ್ ಎಲೆಕ್ಟ್ರಿಕ್ ಬೈಕ್ ಗಾಗಿ ಇಂದಿನಿಂದ ಬುಕಿಂಗ್ ಆರಂಭವಾಗಿದ್ದು, 2024 ರ ಮೊದಲ ತ್ರೈಮಾಸಿಕ ಅವಧಿಯಲ್ಲಿ ಗ್ರಾಹಕರಿಗೆ ಬೈಕ್ ತಲುಪಿಸಲು ವ್ಯವಸ್ಥೆ ಮಾಡಲಾಗಿದೆ.
ಬೆಂಗಳೂರಿನಲ್ಲಿ ಬುಧವಾರ ರಾತ್ರಿ ಆಯೋಜಿಸಿದ್ದ ಸಮಾರಂಭದಲ್ಲಿ ಟೌ ಲೋಟಸ್ ಮೋಟಾರ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ನ ಸಂಸ್ಥಾಪಕ ಮತ್ತು ಅಧ್ಯಕ್ಷ ವಾಸು ರಾಮ್ ಐತಿ ಇ18ಆರ್ ಎಲೆಕ್ಟ್ರಿಕ್ ಬೈಕ್ ನ ಸ್ವರೂಪವನ್ನು ಅನಾವರಣಗೊಳಿಸಿದರು. ಕಡುಗಪ್ಪು, ಕೆಂಪು, ನೀಲಿ ಸೇರಿ ಆರು ಬಣ್ಣಗಳಲ್ಲಿ ಬೈಕ್ ಗಳು ದೊರೆಯಲಿದ್ದು, ಅತ್ಯಾಕರ್ಷಕ ವಿನ್ಯಾಸ ಒಳಗೊಂಡಿದೆ.
ವಾಸು ರಾಮ್ ಐತಿ ಮಾತನಾಡಿ, ಇದು ಎಲೆಕ್ಟ್ರಿಕ್ ಬೈಕ್ ಗಳಲ್ಲಿ ಮಾಸ್ಟರ್ ಆಫ್ ವೆಹಿಕಲ್ ಆಗಿದ್ದು, ಈಗಾಗಲೇ ಹೊರ ಬಂದಿರುವ ಎಲ್ಲಾ ಬೈಕ್ ಗಳಿಗಿಂತ ಇದು ವಿಶಿಷ್ಟ್ಯ ಮತ್ತು ವಿಭಿನ್ನವಾಗಿದೆ. ಗರಿಷ್ಠ 135 ಕಿಲೋಮೀಟರ್ ವೇಗದಲ್ಲಿ ಚಲಿಸುವ, ಭಾರತದ ರಸ್ತೆಗಳಿಗೆ ಸೂಕ್ತವಾಗುವ ರೀತಿಯಲ್ಲಿ ವಿನ್ಯಾಸಗೊಳಿಸಲಾಗಿದೆ. ಬ್ಲ್ಯೂ ಟೂಥ್ ತಂತ್ರಜ್ಞಾನದಡಿ ದೈನಂದಿನ ಎಲ್ಲಾ ಫ್ಯೂಚರ್ ಗಳನ್ನು ಅಳವಡಿಸಿಕೊಂಡಿದ್ದು, ಬರುವ ದಿನಗಳಲ್ಲಿ ಇನ್ನಷ್ಟು ಆಧುನಿಕ ತಂತ್ರಜ್ಞಾನ ಅಳವಡಿಸಿಕೊಳ್ಳಲಾಗುವುದು ಎಂದರು.
ದೀರ್ಘಕಾಲ ಬಾಳಿಕೆ ಬರುವ 55 ಕಿಲೋವ್ಯಾಟ್ ನ, 95 ಕೆ.ಜಿ. ತೂಕದ ಬ್ಯಾಟರಿ, ವಾಹನ ಚಲಿಸುತ್ತಿರುವಾಗಲೇ ಚಾರ್ಜಿಂಗ್ ಆಗುವ ವ್ಯವಸ್ಥೆ ಹೊಂದಿದೆ. 360 ಡಿಗ್ರಿ ಕೋನದಲ್ಲಿ ಚಿತ್ರೀಕರಣ ಮಾಡುವ ಕ್ಯಾಮರ ಅಳವಡಿಸಿದ್ದು, ಒಂದು ವೇಳೆ ಅಪಘಾತವಾದರೆ ಯಾರು ಲೋಪ ಮಾಡಿದ್ದಾರೆ ಎಂಬುದನ್ನು ಸುಲಭವಾಗಿ ಪತ್ತೆ ಮಾಡಬಹುದು. ಡಿಜಿಟಲ್ ಕೀ ಒಳಗೊಂಡಿರುವ ಈ ವಾಹನ ಕಳವು ಮುಕ್ತ, ಜೊತೆಗೆ ಉಷ್ಣಾಂಶ ಹೀರಿಕೊಳ್ಳುವ ತಂತ್ರಜ್ಞಾನ ಹೊಂದಿರುವ ಕಾರಣ ಅಗ್ನಿ ಅನಾಹುತಗಳಿಂದ ಸಂಪೂರ್ಣವಾಗಿ ಸುರಕ್ಷಿತವಾಗಿದೆ. ಚಾಲನೆ ಸಂದರ್ಭದಲ್ಲಿ ಸಂಗೀತ ಆಲಿಸುತ್ತಾ ಆಹ್ಲಾದಕರವಾಗಿ ವಾಹನ ಚಾಲನೆ ಮಾಡಬಹುದು. ಪರ್ಯಾಯ ಇಂಧನ ಮೂಲ ಆಧಾರಿತ ವಾಹನಗಳಲ್ಲಿ ಇದು ಅಸಾಧಾರಣ ಮತ್ತು ಅತ್ಯಂತ ವಿನೂತನವಾಗಿದೆ ಎಂದು ಹೇಳಿದರು.
ಸಂಸ್ಥೆಯ ಬ್ರಾಂಡಿಂಗ್ ಮುಖ್ಯಸ್ಥ ಕ್ರಿಸ್ಟೋಫೋ ಗಫರ್ಟ್ ಮಾತನಾಡಿ, ಬರುವ ದಿನಗಳಲ್ಲಿ ಭಾರತದಲ್ಲಿ ಎಲೆಕ್ಟ್ರಿಕ್ ವಾಹನಗಳಲ್ಲಿ ಶೇ 50 ರಷ್ಟು ಪಾಲು ಭಾರತ ಹೊಂದಲಿದ್ದು, ಅದರಲ್ಲೂ ಕರ್ನಾಟಕ ವಿದ್ಯುನ್ಮಾನ ವಾಹನಗಳಲ್ಲಿ ವಿಶೇಷ ಸಾಧನೆ ಮಾಡಲಿದೆ. ಈ ನಿಟ್ಟಿನಲ್ಲಿ ಇ18ಆರ್ ಎಲೆಕ್ಟ್ರಿಕ್ ಬೈಕ್ ಗ್ರಾಹಕರ ಅಚ್ಚು ಮೆಚ್ಚಿನ ಆಯ್ಕೆಯಾಗಲಿದೆ ಎಂದರು.
ಕಂಪೆನಿಯ ನಿರ್ವಾಹಕರಾದ ಅನುಪ್ರಿಯ ಅವರು ಸಂಸ್ಥೆ ನಡೆದು ಬಂದ ಹಾದಿ, ಬೈಕ್ ನ ವಿಶೇಷತೆಗಳ ಕುರಿತು ಮಾಹಿತಿ ನೀಡಿದರು.