ಸುದ್ದಿಮೂಲ ವಾರ್ತೆ
ಬೆಂಗಳೂರು,ಮೇ30: ಸಣ್ಣ ನೀರಾವರಿ ಹಾಗೂ ವಿಜ್ಞಾನ ತಂತ್ರಜ್ಞಾನ ಇಲಾಖೆಯ ಸಚಿವರಾಗಿ ಅಧಿಕಾರವಹಿಸಿದ ನಂತರ ಮೊದಲ ಬಾರಿಗೆ ಎನ್.ಎಸ್. ಬೋಸರಾಜು ಅವರು ಮಂಗಳವಾರ ವಿಕಾಸಸೌದದಲ್ಲಿ ಅಧಿಕಾರಿಗಳ ಜೊತೆ ಸಭೆ ನಡೆಸಿದರು.
ಸಣ್ಣ ನೀರಾವರಿಯ ಮೇಲೆ ಅವಲಂಬನೆ ಯಾಗಿರುವ ರೈತರಿಗೆ ತೊಂದರೆಯಾಗದಂತೆ ಕ್ರಮವಹಿಸುವಂತೆ ಸೂಚಿಸಿದರು. ಅಂತರ್ಜಲ ಸಮೃದ್ಧಿಗಾಗಿ ಕೆರೆಗಳ ನಿರ್ಮಾಣ ಹಾಗೂ ಈಗಿರುವ ಕೆರೆಗಳ ವಾಸ್ತವ ಪರಿಸ್ಥಿತಿಯ ಕುರಿತು ಅಧಿಕಾರಿಗಳೊಂದಿಗೆ ಸಾಂದರ್ಭಿಕವಾಗಿ ಚರ್ಚಿಸಿದರು.
ಈ ಸಂದರ್ಭದಲ್ಲಿ ಸಣ್ಣ ನೀರಾವರಿ ಇಲಾಖೆಯ ಕಾರ್ಯದರ್ಶಿ ಯತೀಶ್ ಚಂದ್ರನ್ ಸೇರಿ ಅಧಿಕಾರಿಗಳು ಇದ್ದರು.