ಬೆಂಗಳೂರು,ಏ.27: ದಿನ ಕಳೆದಂತೆ ಹೆಚ್ಚುತ್ತಿರುವ ತಾಪಮಾನಕ್ಕೆ ಚರ್ಮದ ಹಾಳಾಗುತ್ತಿದ್ದು, ಸೂರ್ಯನ ಶಾಖದಿಂದ ತ್ವಚೆಯ ಕಾಂತಿಯನ್ನು ಉಳಿಸಿಕೊಳ್ಳುವುದು ಮಹಿಳೆಯಾರಿಗೆ ಬಹು ದೊಡ್ಡ ಸವಾಲಾಗಿದೆ.
ಮಹಿಳೆಯರು ಈ ಬೇಸಿಗೆ ಕಾಲದಲ್ಲಿ ಚರ್ಮದ ಕಾಂತಿಯನ್ನು ಉಳಿಕೊಳ್ಳಲು ಹರಸಾಹಸ ಪಡುತ್ತಾರೆ. ಬಿಸಿಲಿನಿಂದ ಹೇಗಪ್ಪ ಚರ್ಮ ಕಾಪಾಡಿಕೊಳ್ಳುವುದು ಎಂಬ ಚಿಂತೆಗೆ ಗುರಿಯಾಗುತ್ತಾರೆ.
ಅವರಿಗೊಂದು ಸುಲಭ ವಿಧಾನ ಮನೆಯಲ್ಲಿಯೇ ದೊರೆಯುವಂತಹ ಕೆಲವು ಪದಾರ್ಥಗಳನ್ನು ಬಳಸುವುದು ಮತ್ತು ಬಟ್ಟೆಗಳ ಬಳಕೆಯಲ್ಲಿ ಬದಲಾವಣೆಯ ಮೂಲಕ ಚರ್ಮದ ಹಾರೈಕೆ ಮಾಡಿಕೊಳ್ಳಬಹುದು.
ಸೂರ್ಯನಿಂದ ಹೊರಸೂಸುವ ಬೆಳಕಿನಲ್ಲಿರುವ ಕಿರಣಗಳು ನಮ್ಮ ಚರ್ಮದ ಕೋಶಗಳಿಗೆ ಹಾನಿ ಮಾಡುತ್ತವೆ. ಹೀಗಾಗಿ ಸ್ಕಿನ್ ಟ್ಯಾನ್ ಉಂಟಾಗುತ್ತೆ. ಇದರಿಂದ ನಮ್ಮ ಚರ್ಮವು ಒಣ್ಣಗಿದಂತೆ, ಕಪ್ಪಾಗಿ ಕಾಣುತ್ತದೆ, ತ್ವಚೆಯ ಬಣ್ಣ ಬದಲಾಗುತ್ತದೆ. ಮುಖದ ಭಾಗ ಕಪ್ಪು ಬಣ್ಣಕ್ಕೆ ತಿರುಗುತ್ತದೆ ಆದರಿಂದ ಮುಖದ ಕಾಂತಿಯಲ್ಲಿ ಬದಲಾವಣೆಯಾಗುತ್ತದೆ. ಸೂರ್ಯನ ಕಿರಣಗಳಿಂದ ಕಪ್ಪಾಗುವುದನ್ನು ಅಲ್ಪ ಮಟ್ಟಿಗೆ ತಡೆಗಟ್ಟಲು ಈ ವಿಧಾನಗಳನ್ನು ಅನುಸರಿಸಬಹುದು.
ಚರ್ಮದ ಕಾಂತಿ ಉಳಿಸಿಕೊಳ್ಳಲು ಇಲ್ಲಿದೆ ಸುಲಭ ವಿಧಾನ: ಬಿಸಿಲಿನಲ್ಲಿ ಸುತ್ತಾಡುವವರು ಹೆಚ್ಚು ತುಂಬು ತೋಳಿನ ಬಟ್ಟೆ ಧರಿಸುವುದರಿಂದ ಸೂಕ್ತ. ಸೂರ್ಯನ ಕಿರಣಗಳು ನೇರವಾಗಿ ಚರ್ಮದ ಮೇಲೆ ಪ್ರಭಾವ ಬೀರುವುದನ್ನು ಸ್ಪಲ್ಪ ಮಟ್ಟಿಗೆಯಾದರು ತಡೆಗಟ್ಟಲು ಈ ಅಂಶ ಸಹಕಾರಿಯಾಗುತ್ತದೆ.
ಹೆಚ್ಚು ಪಾನೀಯಗಳನ್ನು, ಹಣ್ಣು, ನೀರಿನ ಅಂಶಗಳನ್ನು ಒಳಗೊಂಡಂತಹ ತರಕಾರಿ, ಆಹಾರಗಳನ್ನು ಹೆಚ್ಚು ಸೇವಿಸುವುದರಿಂದ ದೇಹ ತಪ್ಪಾಗಿರುತ್ತದೆ. ಈ ವಿಧಾನದಿಂದ ದೇಹದ ತಾಪವನ್ನು ಕಡಿಮೆಗೊಳಿಸುವುದರ ಮೂಲಕ ಚರ್ಮದ ಕಾಂತಿಯನ್ನು ಉಳಿಸಿಕೊಳ್ಳಬಹುದು.
ಬೇಸಿಗೆ ಸಂದರ್ಭದಲ್ಲಿ ತ್ವಚೆಗೆ ಬೇಕಾಗುವಂತಹ ಕೆಲವು ಲೇಪನಗಳು ಮುಖದ ಕಾಂತಿ ಉಳಿಸಲು ಸಹಕಾಯಿಯಾಗುತ್ತದೆ. ಮನೆಯಲ್ಲಿಯೇ ದೊರೆಯುವಂತಹ ಪದಾರ್ಥಗಳಿಂದ ಮುಖದ ಕಾಂತಿ ಹಿಂಪಡೆಯಬಹುದು.
ಮೊಸರು ಅಥವಾ ಹಾಲು, ಕಡ್ಲೆಹಿಟ್ಟು ಮತ್ತು ಅರಿಶಿಣ ಬೆರಸಿ ಮುಖಕ್ಕೆ ಲೇಪಿಸಿ, ಚೆನ್ನಾಗಿ ಮಸಾಜ್ ಮಾಡಿಕೊಳ್ಳಬೇಕು. ಮುಖಕ್ಕೆ ಸೌತೆಕಾಯಿ, ಮೊಸರು ಲೇಪನವನ್ನು ಬೆರೆಸಿದರೆ ತಂಪಾಗುತ್ತದೆ.
ಜೇನು ತುಪ್ಪ, ಕಡ್ಲೆಹಿಟ್ಟು ಮತ್ತು ಅರಿಸಿಣ ಬೆರಸಿ ಮುಖಕ್ಕೆ ಹಚ್ಚುವುದರಿಂದ ಮುಖದ ಕಾಂತಿ ಹೆಚ್ಚಿಸಲು ಸಹಕಾರಿಯಾಗುತ್ತದೆ.
ಉಗುರು ಬೆಚ್ಚಗಿನ ಬಿಸಿಯ ನೀರಿಗೆ ಅರ್ಧ ಚಮಚ ಎಣ್ಣೆ ಹಾಕಿ ಕೈಕಾಲುಗಳಿಗೆ ಮಸಾಜ್ ಮಾಡಿಕೊಳ್ಳುವುದರಿಂದ ಚರ್ಮ ಕಾಂತಿಯುತವಾಗಿ ಕಾಣಲು ಉಪಯುಕ್ತವಾಗುತ್ತದೆ ಮತ್ತು ಬೇಸಿಗೆಯಲ್ಲಿ ಮನೆಯಿಂದ ಹೊರಗೆ ಹೋದಾಗ ಧೂಳು ಮುಖ, ಶರೀರದ ಮೇಲೆ ಅಂಟಿಕೊಂಡಿರುತ್ತದೆ. ಅದಕ್ಕೆ ಕನಿಷ್ಠ ದಿನಕ್ಕೆರಡು ಬಾರಿ ತಣ್ಣೀರಿನಿಂದ ಮುಖ ತೊಳೆಯುತ್ತಿರುವುದು ಸೂಕ್ತ.