ಸುದ್ದಿಮೂಲ ವಾರ್ತೆ ಬೆಂಗಳೂರು, ೆ.20:
ನಾಲ್ಕು ವರ್ಷಗಳಿಂದ ಜೈಲಿನಲ್ಲಿರುವ ಆರೋಪಿಯನ್ನು ವಿಡಿಯೊ ಕಾನ್ಫರೆನ್ಸ್ ಮೂಲಕ ಸಕ್ಷಮ ನ್ಯಾಾಯಾಲಯದ ಮುಂದೆ ಹಾಜರುಪಡಿಸದ ಜೈಲು ಅಧಿಕಾರಿಗಳು ಮತ್ತು ಜಾಮೀನುರಹಿತ ವಾರೆಂಟ್ ಆದೇಶ ಜಾರಿಗೊಳಿಸಲು ವಿಲವಾಗಿರುವ ಎಚ್ಎಎಲ್ ಪೊಲೀಸರನ್ನು ತರಾಟೆಗೆ ತೆಗೆದುಕೊಂಡಿರುವ ಹೈಕೋರ್ಟ್, ಕಾರಾಗೃಹಗಳ ಮಹಾ ನಿರೀಕ್ಷಕರು (ಡಿಐಜಿ) ಮತ್ತು ವೈಟ್ಫೀಲ್ಡ್ ವಿಭಾಗದ ಡಿಸಿಪಿ ಶನಿವಾರ ಖುದ್ದು ವಿಚಾರಣೆಗೆ ಹಾಜರಾಗುವಂತೆ ನಿರ್ದೇಶನ ನೀಡಿದೆ.
ಎನ್ಡಿಪಿಎಸ್ ಮತ್ತು ದರೋಡೆ ಪ್ರಕರಣ ರದ್ದುಪಡಿಸಬೇಕು ತಪ್ಪಿಿತಸ್ಥ ಅಧಿಕಾರಿಗಳ ವಿರುದ್ಧ ಇಲಾಖಾ ವಿಚಾರಣೆ ನಡೆಸಬೇಕು ಮತ್ತು ತನಗೆ ಪರಿಹಾರ ನೀಡಲು ಆದೇಶಿಸಬೇಕು ಎಂದು ಕೋರಿ ಬೆಂಗಳೂರಿನ ಇಮ್ರಾಾನ್ ಅಲಿಯಾಸ್ ಕುಳ್ಳ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠ ವಿಚಾರಣೆ ನಡೆಸಿತು.
ಆಗ ಪೀಠವು ಅರ್ಜಿದಾರ ಅಕ್ರಮ ಕಸ್ಟಡಿಯಲ್ಲಿದ್ದಾರೆ ಮತ್ತು ನ್ಯಾಾಯಾಂಗ ಬಂಧನದಲ್ಲಿರುವ ಆರೋಪಿಗೆ ಎನ್ಬಿಿಡಬ್ಲ್ಯೂ ಜಾರಿ ಮಾಡಿರುವುದು ಕಾನೂನಿನ ತತ್ವದ ಉಲ್ಲಂಘನೆಯಾಗಿದೆ ಎಂದಿತು.
ಇಮ್ರಾಾನ್ಗೆ ಸಂಬಂಧಿಸಿದ ಬೇರೊಂದು ಪ್ರಕರಣದಲ್ಲಿ ಇಮ್ರಾಾನ್ನನ್ನು ವಿಡಿಯೊ ಕಾನ್ಫರೆನ್ಸ್ ಮೂಲಕ ಸಕ್ಷಮ ನ್ಯಾಾಯಾಲಯದ ಮುಂದೆ ಹಾಜರುಪಡಿಸಲು ವಿಲವಾದ ಜೈಲು ಅಧಿಕಾರಿಗಳನ್ನೂ ನ್ಯಾಾಯಾಲಯ ಕಟುವಾಗಿ ಟೀಕಿಸಿತು.
ಐದು ವರ್ಷದಿಂದ ಏನು ಮಾಡುತ್ತಿಿದ್ದೀರಿ. ನ್ಯಾಾಯಾಲಯದ ಆದೇಶ ಸೂಚನೆ ಮಾಡಬೇಕಲ್ಲವೇ. ಐದು ವರ್ಷ ಬಾಡಿ ವಾರೆಂಟ್ನಲ್ಲಿ ಆರೋಪಿಯನ್ನು ವಿಸಿ ಮೂಲಕ ಹಾಜರುಪಡಿಸಲಿಲ್ಲವೇ ಏನಾಗುತ್ತಿಿದೆ ಜೈಲು ಡಿಐಜಿ ನಾಳೆ ನ್ಯಾಾಯಾಲಯದ ಮುಂದೆ ಹಾಜರಾಗಬೇಕು. ಮೂರು ವರ್ಷವಾದರೂ ಆರೋಪಿಯನ್ನು ವಿಸಿಯಲ್ಲಿ ಹಾಜರುಪಡಿಸದೇ ಇರುವುದು ನಾಚಿಗೇಡಲ್ಲವೇ. ಬಾಡಿ ವಾರೆಂಟ್ ಇದೆಯಲ್ಲಾ. ರೆಗ್ಯುಲರ್ ಕೇಸಿನಲ್ಲಿ ಆರೋಪಿಯನ್ನು ಐದು ವರ್ಷ ಸಕ್ಷಮ ನ್ಯಾಾಯಾಲಯದ ಮುಂದೆ ಹಾಜರುಪಡಿಸದ ಇದು ಎಂಥ ಜೈಲು ಪ್ರಾಾಧಿಕಾರ ವಿಸಿ ಕನೆಕ್ಷನ್ ಸರಿ ಇರಲಿಲ್ಲವೇ ತಾಂತ್ರಿಿಕ ಸಮಸ್ಯೆೆ ಇತ್ತೇ ಎಂದು ಕಿಡಿಕಾರಿತು.
ಅಲ್ಲದೇ, ಇನ್ನೊೊಂದು ಪ್ರಕರಣದಲ್ಲಿ ಸಕ್ಷಮ ನ್ಯಾಾಯಾಲಯವು ಆರೋಪಿಯನ್ನು ವಿಡಿಯೊ ಕಾನ್ಫರೆನ್ಸ್ ಮೂಲಕ ಹಾಜರುಪಡಿಸಬೇಕು ಎಂದು ನಿರ್ದೇಶಿಸಿದೆ. ಅದನ್ನೂ ಮಾಡುತ್ತಿಿಲ್ಲ ಎಂದು ಅರ್ಜಿದಾರರ ಪರ ವಕೀಲರು ಹೇಳಿದ್ದಾರೆ. ಜೈಲು ಸಹಾಯಕ ಮೇಲ್ವಿಿಚಾರಕ ಹಾಜರಿದ್ದು, ಕ್ಷುಲ್ಲಕ ಕಾರಣಗಳನ್ನು ನೀಡಿ ಆರೋಪಿಯನ್ನು ಸಕ್ಷಮ ನ್ಯಾಾಯಾಲಯದ ಮುಂದೆ ಹಾಜರುಪಡಿಸಲಾಗಿಲ್ಲ ಎಂದಿದ್ದಾರೆ. ನ್ಯಾಾಯಾಲಯದ ಸೂಚನೆ ಇರಲಿಲ್ಲ. ಮೇಲ್ವಿಿಚಾರಣಾ ಅಧಿಕಾರಿಯು ಎರಡು ದಿನ ರಜೆ ಇದ್ದರು ಎಂದೂ ಹೇಳಿದ್ದಾರೆ. ಹೀಗಾಗಿ, ನಾಲ್ಕು ವರ್ಷ ಕಳೆದೋಗಿದೆ ಎಂದು ಹೇಳಿದ್ದಾರೆ. ಇದಕ್ಕಾಾಗಿ ಜೈಲು ಡಿಐಜಿ ಮತ್ತು ವೈಟ್ಫೀಲ್ಡ್ ಡಿಸಿಪಿ ಖುದ್ದು ನಾಳೆ ವಿಚಾರಣೆಗೆ ಹಾಜರಾಗಬೇಕು ಎಂದು ನ್ಯಾಾಯಾಲಯ ನಿರ್ದೇಶಿಸಿದೆ.
ಕಾರಾಗೃಹಗಳ ಮಹಾ ನಿರೀಕ್ಷಕರಿಗೆ ಖುದ್ದು ಹಾಜರಿಗೆ ಹೈಕೋರ್ಟ್ ಸೂಚನೆ ಆರೋಪಿಯನ್ನು ಕೋರ್ಟ್ ಮುಂದೆ ಹಾಜರುಪಡಿಸದ್ದಕ್ಕೆ ಹೈಕೋರ್ಟ್ ಸಿಡಿಮಿಡಿ

