ಸುದ್ದಿಮೂಲ ವಾರ್ತೆ ಕಲಬುರಗಿ, ಅ.19:
ಕಾನೂನು ಮತ್ತು ಸುವ್ಯವಸ್ಥೆೆಯ ಕಾರಣ ನೀಡಿ ಚಿತ್ತಾಾಪುರದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್.ಎಸ್.ಎಸ್ ) ಪಥಸಂಚಲನಕ್ಕೆೆ ನೀಡಲಾಗಿದ್ದ ಅನುಮತಿ ನಿರಾಕರಣೆ ಆದೇಶಕ್ಕೆೆ ಕರ್ನಾಟಕ ಹೈಕೋರ್ಟ್ನ ವಿಭಾಗೀಯ ಪೀಠವು ಭಾನುವಾರ ತಾತ್ಕಾಾಲಿಕ ತಡೆ ನೀಡಿದೆ.
ಅಕ್ಟೋೋಬರ್ 18ರಂದು ಚಿತ್ತಾಾಪುರ ತಹಶೀರ್ಲ್ದಾಾ ನೀಡಿದ್ದ ಆದೇಶವನ್ನು ಪ್ರಶ್ನಿಿಸಿ ಆರ್.ಎಸ್.ಎಸ್ ಜಿಲ್ಲಾ ಸಂಘಚಾಲಕ ಅಶೋಕ್ ಪಾಟೀಲ್ ಸಲ್ಲಿಸಿದ್ದ ಅರ್ಜಿಯ ತುರ್ತು ವಿಚಾರಣೆ ನಡೆಸಿದ ನ್ಯಾಾಯಾಲಯವು, ಅರ್ಜಿದಾರರ ಹಕ್ಕುಗಳನ್ನು ಎತ್ತಿಿಹಿಡಿದು, ಜಿಲ್ಲಾಡಳಿತದ ಕ್ರಮವನ್ನು ಪುರ್ನ ಪರಿಶೀಲಿಸುವಂತೆ ನಿರ್ದೇಶನ ನೀಡಿದೆ.
ಸಂಘದ ವಾದ ಮತ್ತು ಒಪ್ಪಿಿಗೆ:
ರಾಷ್ಟ್ರೀಯ ಸ್ವಯಂಸೇವಕ ಸಂಘದ ಪರ ನ್ಯಾಾಯವಾದಿ ಅರುಣ ಶ್ಯಾಾಮ ಅವರು, ಅನುಮತಿ ನೀಡುವ ವಿಚಾರದಲ್ಲಿ ಸರ್ಕಾರವು ಪಥಸಂಚಲನ ರದ್ದುಮಾಡುವ ಉದ್ದೇಶ ಹೊಂದಿತ್ತು, ಅದಕ್ಕಾಾಗಿಯೇ ಸೂಕ್ತ ಪ್ರಕ್ರಿಿಯೆ ನಡೆಸಿದರೂ ಅನುಮತಿ ನಿರಾಕರಿಸಲಾಗಿದೆ ಎಂದು ವಾದಿಸಿದರು.ಅಕ್ಟೋೋರ್ಬ 17ಕ್ಕೆೆ ಅರ್ಜಿ ಸಲ್ಲಿಸಿ, ಶುಲ್ಕ 6 ಸಾವಿರ ಪಾವತಿಸಿದ್ದರೂ ಅನುಮತಿ ನೀಡಿರಲಿಲ್ಲ ಎಂದು ನ್ಯಾಾಯಾಲಯಕ್ಕೆೆ ತಿಳಿಸಿದರು.
ನ್ಯಾಾಯಾಲಯದ ನಿರ್ದೇಶನವನ್ನು ಅನುಸರಿಸಿ, ರ್ಆ.ಎಸ್.ಎಸ್ ಪರ ಅರ್ಜಿದಾರರು ಚಿತ್ತಾಾಪುರದಲ್ಲಿ ತಮ್ಮ ಪಥಸಂಚಲನವನ್ನು ನ.2ರಂದು ನಡೆಸಲು ಸಮ್ಮತಿಸಿದ್ದಾರೆ. ಈ ಪ್ರಕರಣದ ಮುಂದಿನ ವಿಚಾರಣೆಯನ್ನು ಅ.24ರಂದು ಮಧ್ಯಾಾಹ್ನ 2.30ಕ್ಕೆೆ ನ್ಯಾಾಯಾಲಯ ನಿಗದಿಪಡಿಸಿ, ಪ್ರಕರಣವನ್ನು ಮುಂದೂಡಿದೆ.
ಚಿತ್ತಾಾಪುರ ತಾಲೂಕಿನ ದಂಡಾಧಿಕಾರಿ, ತಹಶೀರ್ಲ್ದಾಾ ನಾಗಯ್ಯ ಹಿರೇಮಠ ಕಾನೂನು ಸುವ್ಯವಸ್ಥೆೆ ಹದಗೆಡಬಾರದು ಎಂಬ ಉದ್ದೇಶದಿಂದ ರಾಷ್ಟ್ರೀಯ ಸ್ವಯಂಸೇವಕ ಸಂಘದ ಅ.19ರಂದು ನಿಗದಿಯಾಗಿದ್ದ ಪಥಸಂಚಲನ ಕಾರ್ಯಕ್ರಮ ಅನುಮತಿ ನಿರಾಕರಿಸಿದ ಬೆನ್ನಲ್ಲೇ,ರಾಜಕೀಯ ಸೂಕ್ಷ್ಮ ಪ್ರದೇಶವಾದ ಚಿತ್ತಾಾಪುರದಲ್ಲಿನ ಈ ಬೆಳವಣಿಗೆ ರಾಜ್ಯ ರಾಜಕೀಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ.
ನ್ಯಾಾಯಾಲಯದ ಪ್ರಮುಖ ನಿರ್ದೇಶನಗಳು
ನ್ಯಾಾಯಪೀಠವು ಈ ಸಂಬಂಧವಾಗಿ ಜಿಲ್ಲಾಡಳಿತ ಮತ್ತು ಸಂಘಟಕರಿಗೆ ಈ ಕೆಳಗಿನ ಪ್ರಮುಖ ಸೂಚನೆಗಳನ್ನು ನೀಡಿದೆ:
ಹೊಸ ಅರ್ಜಿ ಸಲ್ಲಿಕೆ:
ಆರ್.ಎಸ್.ಎಸ್ ಸಂಘಟಕರು ತಮ್ಮ ಇಚ್ಛೆೆಯ ಮಾರ್ಗ ಮತ್ತು ಸಮಯದ ವಿವರಗಳೊಂದಿಗೆ ಕಲಬುರಗಿ ಉಪ ಆಯುಕ್ತರಿಗೆ (ಜಿಲ್ಲಾಧಿಕಾರಿ ) ತಹಶೀಲ್ದಾಾರ್ ಮತ್ತು ಪೊಲೀಸ್ ಇಲಾಖೆಗಳಿಗೆ ಹೊಸ ಅರ್ಜಿಯನ್ನು ಸಲ್ಲಿಸಬೇಕು.
ಮಾರ್ಗ ಪರಿಗಣನೆ ಕಡ್ಡಾಾಯ:
ಪ್ರತಿವಾದಿಗಳಾದ ಜಿಲ್ಲಾಡಳಿತವು ಈ ಅರ್ಜಿಯನ್ನು ಕೂಲಂಕಷವಾಗಿ ಪರಿಗಣಿಸಬೇಕು.ಅರ್ಜಿದಾರರು ಸೂಚಿಸಿರುವ ಮಾರ್ಗವನ್ನು ಗಮನದಲ್ಲಿಟ್ಟು ಸ್ಥಳವನ್ನು ನಿರ್ಧರಿಸಬೇಕು ಮತ್ತು ವರದಿ ನ್ಯಾಾಯಾಲಯಕ್ಕೆೆ ಸಲ್ಲಿಸಬೇಕು. ರಾಜ್ಯವು ಈ ಕಾರ್ಯಕ್ರಮಕ್ಕಾಾಗಿ ನಿಗದಿತ ಸ್ಥಳವನ್ನು ಖಚಿತಪಡಿಸಬೇಕು ಮತ್ತು ಆ ಮಾರ್ಗವು ಅರ್ಜಿದಾರರ ಅಗತ್ಯಗಳನ್ನು ಪೂರೈಸುವಂತಿರಬೇಕು.
ದಿನಾಂಕ ಬದಲಾವಣೆ:
ಅಕ್ಟೋೋರ್ಬ 19 ರಂದು ಆರ್.ಎಸ್.ಎಸ್ ಹಾಗೂ ಭೀಮ್ ಆರ್ಮಿ ಎರಡೂ ಸಂಘಟನೆಗಳ ಮೆರವಣಿಗೆ ಇರುವುದರಿಂದ, ಕಾನೂನು ಸುವ್ಯವಸ್ಥೆೆ ದೃಷ್ಟಿಿಯಿಂದ ಪ್ರತ್ಯೇಕ ದಿನಾಂಕ ಹಾಗೂ ಸಮಯ ನೀಡುವಂತೆ ಹೈಕೋರ್ಟ್ ಸೂಚಿಸಿದೆ.
ವರದಿ ಸಲ್ಲಿಕೆ: ಜಿಲ್ಲಾಡಳಿತವು ಅರ್ಜಿಯನ್ನು ಪರಿಶೀಲಿಸಿ, ಸ್ಥಳವನ್ನು ನಿರ್ಧರಿಸಿ ವರದಿಯನ್ನು ನ್ಯಾಾಯಾಲಯಕ್ಕೆೆ ಸಲ್ಲಿಸಬೇಕು.