ಸುದ್ದಿಮೂಲ ವಾರ್ತೆ ಕಲಬುರಗಿ, ಅ.24:
ಚಿತ್ತಾಾಪುರದಲ್ಲಿ ಆರ್ಎಸ್ಎಸ್ ಪಥಸಂಚಲನಕ್ಕೆೆ ಸಂಬಂಧಿಸಿದಂತೆ ಉಂಟಾಗಿರುವ ಗೊಂದಲಗಳು ಮತ್ತು ಸಂಭವನೀಯ ಕಾನೂನು ಸುವ್ಯವಸ್ಥೆೆ ಸಮಸ್ಯೆೆಗಳ ಹಿನ್ನೆೆಲೆ ಜಿಲ್ಲಾಡಳಿತ ಶಾಂತಿ ಸಭೆ ನಡೆಸಿ, ವರದಿ ಸಲ್ಲಿಸಬೇಕು ಎಂದು ಹೈಕೋರ್ಟ್ ಸೂಚನೆ ನೀಡಿದೆ.
ಚಿತ್ತಾಾಪುರದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್ಎಸ್ಎಸ್) ನವೆಂಬರ್ 2ರಂದು ಪಥಸಂಚಲನಕ್ಕೆೆ ಅವಕಾಶ ನೀಡುವ ಅರ್ಜಿ ಕುರಿತು ವಿಚಾರಣೆ ನಡೆಸಿದ ನ್ಯಾಾಯಮೂರ್ತಿ ಎಂಜಿಎಸ್ ಕಮಲ ಅವರ ಏಕ ಸದಸ್ಯ ಪೀಠವು, ಮೊದಲು ಪರಿಸ್ಥಿಿತಿ ತಿಳಿಗೊಳಿಸುವಂತೆ ಜಿಲ್ಲಾಡಳಿತಕ್ಕೆೆ ಸೂಚಿಸಿದರು. ಅಕ್ಟೋೋಬರ್ 28 ರಂದು ಜಿಲ್ಲಾಡಳಿತವು ಪಥಸಂಚಲನಕ್ಕೆೆ ಸಂಬಂಧಿಸಿದ ಎಲ್ಲ ಸಂಘಟನೆಗಳ ಶಾಂತಿ ಸಭೆಯನ್ನು ನಡೆಸಬೇಕು. ಸಭೆಯ ಬಳಿಕ ಉಂಟಾದ ಒಮ್ಮತ ಮತ್ತು ಸದ್ಯದ ಕಾನೂನು-ಸುವ್ಯವಸ್ಥೆೆ ಕುರಿತು ವರದಿಯನ್ನು ಹೈಕೋರ್ಟ್ಗೆ ಸಲ್ಲಿಸಬೇಕು. ನಂತರ ಅಕ್ಟೋೋಬರ್ 30 ರಂದು ನ್ಯಾಾಯಾಲಯವು ಈ ಕುರಿತು ಮುಂದಿನ ವಿಚಾರಣೆ ನಡೆಸಲಿದೆ ಎಂದು ಆದೇಶದಲ್ಲಿ ತಿಳಿಸಿದರು.
ಸರಕಾರದ ಪರವಾಗಿ ಹಾಜರಿದ್ದ ಅಡ್ವೊೊಕೇಟ್ ಜನರಲ್ (ಎಜಿ) ಶಶಿಕಿರಣ ಶೆಟ್ಟಿಿ ಅವರು ವಾದ ಮಂಡಿಸಿ, ಚಿತ್ತಾಾಪುರದಲ್ಲಿ ಶಾಂತಿ ಸುವ್ಯವಸ್ಥೆೆ ಕಾಪಾಡುವ ಹಿನ್ನೆೆಲೆ ಈ ವಿಷಯದ ಇತ್ಯರ್ಥಕ್ಕೆೆ ಇನ್ನಷ್ಟು ಸಮಯಾವಕಾಶ ನೀಡುವಂತೆ ಅವರು ನ್ಯಾಾಯಾಲಯಕ್ಕೆೆ ಮನವಿ ಮಾಡಿದರು.
ಅರ್ಜಿದಾರ ಪರ ವಾದ ಮಂಡಿಸಿದ ಹಿರಿಯ ವಕೀಲ ಅರುಣ್ ಶ್ಯಾಾಮ್ ಅವರು, ಆರ್ಎಸ್ಎಸ್ ನವೆಂಬರ್ 2ರಂದು ಪಥಸಂಚಲನ ನಡೆಸಲು ಸಿದ್ಧವಾಗಿದೆ. ಸರ್ಕಾರ ಸೂಕ್ತ ಪೊಲೀಸ್ ರಕ್ಷಣೆ ಒದಗಿಸಬೇಕು ಎಂದು ವಾದಿಸಿದರು. ಇದಕ್ಕೆೆ ಪ್ರತಿಯಾಗಿ ಎಜಿ ಶಶಿಕಿರಣ ಶೆಟ್ಟಿಿ ಅವರು, ವಿಷಯ ಇನ್ನೂ ಪರಿಗಣನೆಯಲ್ಲಿದೆ. ಎರಡು ವಾರಗಳೊಳಗೆ ಪರಿಹಾರ ಕಂಡುಕೊಳ್ಳಲು ಪ್ರಯತ್ನಿಿಸಲಾಗುತ್ತಿಿದೆ ಎಂದು ತಿಳಿಸಿದರು.
ಆರ್ಎಸ್ಎಸ್ ಶತಮಾನೋತ್ಸವದ ನಿಮಿತ್ತ ಅಕ್ಟೋೋಬರ್ 19 ರಂದು ಚಿತ್ತಾಾಪುರದಲ್ಲಿ ಪಥಸಂಚಲನಕ್ಕೆೆ ಅನುಮತಿ ಕೋರಿ ತಹಶೀಲ್ದಾಾರ್ ಅವರಿಗೆ ಮನವಿ ಸಲ್ಲಿಸಲಾಗಿತ್ತು. ಆದರೆ, ಕಾನೂನು ಸುವ್ಯವಸ್ಥೆೆ ಹದಗೆಡುವ ಸಾಧ್ಯತೆಗಳ ಕಾರಣದಿಂದ ಅನುಮತಿ ನಿರಾಕರಿಸಲಾಯಿತು. ಹೀಗಾಗಿ ಹೈಕೋರ್ಟ್ಗೆ ಅರ್ಜಿ ಸಲ್ಲಿಸಲಾಗಿತ್ತು.

