ಸುದ್ದಿಮೂಲ ವಾರ್ತೆ
ಬೆಂಗಳೂರು,ಏ.14: ಬೆಂಗಳೂರಿನಿಂದ ಮೈಸೂರಿನ ರಾಷ್ಟ್ರೀಯ ಹೆದ್ದಾರಿ 275ರ ಅಗಲೀಕರಣಕ್ಕಾಗಿ ಮುದ್ದೂರಿನ ಅಗರಲಿಂಗನ ದೊಡ್ಡಿ ಗ್ರಾಮದ ಶಾಲೆಯೊಂದನ್ನುಸ್ಥಗಿತಗೊಳಿಸಲಾಗಿದ್ದು ಈ ಕುರಿತು ಹೈಕೋರ್ಟ್ ಪುನರ್ ನಿರ್ಮಾಣದ ಬಗ್ಗೆ ರಾಜ್ಯದ ಅಧಿಕಾರಿಗಳಿಗೆ ಸೂಚಿಸಿದೆ.
ರಾಷ್ಟ್ರೀಯ ಹೆದ್ದಾರಿ ಅಗಲೀಕರಣಕ್ಕಾಗಿ ಶಾಲೆಯೊಂದನ್ನು ದ್ವಂಸ ಮಾಡಿರುವ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಹೈಕೋರ್ಟ್ ಶಾಕ್ ಆಗಿದ್ದು, 4ತಿಂಗಳೊಳಗೆ ಪುನರ್ ನಿರ್ಮಾಣ ಮಾಡುವಂತೆ ಅಧಿಕಾರಿಗಳಿಗೆ ಖಡಕ್ ಎಚ್ಚರಿಕೆ ನೀಡಿದೆ.
ಸ್ಥಳೀಯ ಶಾಲಾ ಅಭಿವೃದ್ಧಿ ಮತ್ತು ಮೇಲ್ವಿಚಾರಣಾ ಸಮಿತಿಯು ಹೈಕೋರ್ಟ್ನಲ್ಲಿ ಸಲ್ಲಿಸಿದ ಅರ್ಜಿಯನ್ನು ಪರಿಗಣಿಸಿ ನಂತರ ಈ ನಿರ್ಧರ ಕೈಗೊಳ್ಳಲಾಗಿದೆ, ಮಂಡ್ಯ ಜಿಲ್ಲೆಯ ಹಳ್ಳಿಯೊಂದರಲ್ಲಿ ಸ್ಥಳ ಗುರುತಿಸಿ ಶಾಲಾ ಕಟ್ಟಡದ ಪುನರ್ ನಿರ್ಮಾಣವನ್ನು ಜೂನ್ 01 ಕ್ಕೆ ಆರಂಭಿಸಿ 4 ತಿಂಗಳಿನೊಳಗೆ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಹೈಕೋರ್ಟ್ ಆದೇಶಿಸಿದೆ.
ಈ ಹಿಂದೆಯೇ 2020 ರಲ್ಲಿ ಬಿಡುಗಡೆಯಾದ ಪರಿಹಾರವು ಇನ್ನೂ ಹಾಗೇಯೇ ಉಳಿದಿದ್ದು ಈ ವರೆಗೂ ಯಾವುದೇ ಕೆಸಲ ನಡೆದಿರಲಿಲ್ಲ. ಇದರಿಂದ ಮಕ್ಕಳಿಗೆ ತೊಂದರೆಯಾಗಿರುವುದನ್ನು ಗಮನಿಸಿದ ನ್ಯಾಯಾಲಯ ಶಾಲೆಯನ್ನು ಮರು ನಿರ್ಮಾಣ ಮಾಡುವಂತೆ ಸೂಚಿಸಿದೆ.